ಸೊಗಡು ಜನಪದ ಹೆಜ್ಜೆ ರಸಪ್ರಶ್ನೆ ವಿಜೇತ ಮಕ್ಕಳಿಗೆ ವಿದ್ಯಾರ್ಥಿ ರತ್ನ ಪ್ರಶಸ್ತಿ ವಿತರಣೆ.

Spread the love

ಸೊಗಡು ಜನಪದ ಹೆಜ್ಜೆ ಸಂಘ ಹಾಗೂ ಶಾಲಾ ಶಿಕ್ಷಣ ಇಲಾಖೆ ತಿಪಟೂರಿನ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳ ನಡೆಸುವ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ರತ್ನ ಪ್ರಶಸ್ತಿ ವಿತರಿಸಲಾಯಿತು.

ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ನ ಭುವನ್.ಎಸ್, ಪೂರ್ವಿ.ಎಂ ಮತ್ತು ನಳಂದ ಶಾಲೆಯ ವಿದ್ಯಾರ್ಥಿನಿ ಯುಗಶ್ರೀ, ಇವರಿಗೆ ಬೆಳ್ಳಿ ಪದಕಗಳು ಹಾಗೂ ಪ್ರಮಾಣಪತ್ರಗಳೊಂದಿಗೆ ” ಕಲ್ಪತರು ವಿದ್ಯಾರ್ಥಿ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಿಪಟೂರು ಶಾಸಕ ಕೆ.ಷಡಕ್ಷರಿ ಹಾಗೂ ತಿಪಟೂರು ಉಪವಿಭಾಗಾಧಿಕಾರಿ ಶ್ರೀ ಮತಿ ಸಪ್ತಶ್ರೀ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು
ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್.ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ ಭೂಷಣ್,ತಹಸೀಲ್ದಾರ್ ಪವನ್ ಕುಮಾರ್,ಇಒ ಸುದರ್ಶನ್, ಡಿವೈಎಸ್ಪಿ ವಿನಾಯಕ ಶಟ್ಟಿಗೇರಿ
ಸಂಘದ ಅಧ್ಯಕ್ಷರಾದ ಸಿರಿಗಂಧ ಗುರು, ಉಪಾಧ್ಯಕ್ಷರಾದ ಮಾರನಗೆರೆ ನಿಜಗುಣ , ನಗರಸಭಾ ಸದಸ್ಯರಾದ ಡಾ. ಓಹಿಲಾ ತರಕಾರಿ ಗಂಗಾಧರ್, ಜೆಮ್ಸ್ ಫೌಂಡೇಶನ್ ಕಾರ್ಯದರ್ಶಿ, ಹಾಗೂ ಜನ ಜಾಗೃತಿ ವೇದಿಕೆ ಸದಸ್ಯ ತರಕಾರಿ ಗಂಗಾಧರ್, ಸೆಂಟ್ರಲ್ ಸ್ಕೂಲ್ ನ ದೈಹಿಕ ಶಿಕ್ಷಕರಾದ ಅಪ್ಪೆ ಗೌಡ್ರು ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!