ತಿಪಟೂರು:ಕೇಂದ್ರ ಸರ್ಕಾರ ತಿದ್ದುಪಡಿ ಮಾಡುತ್ತಿರುವ ಕಾರ್ಮಿಕ ಕಾನೂನುನುಗಳು ಕಾರ್ಮಿಕ ವಿರೋಧಿಯಾಗಿವೆ,ಕಾರ್ಮಿಕರ ಮರಣಶಾಸನವಾಗಿರುವ ತಿದ್ದುಪಡಿವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿಮುಂಭಾಗ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ ನಡೆಸಲಾಯಿತು.ಕಾರ್ಮಿಕ ಕಾಯ್ದೆ ತಿದ್ದುಪಡಿ ಪ್ರತಿಗಳಿಗೆ ಬೆಂಕಿಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರನ್ನ ಉದೇಶಿಸಿ ಸಿಐಟಿಯು ಮುಖಂಡ ಸುಬ್ರಮಣ್ಯ ಮಾತನಾಡಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡುತ್ತಿರುವ ಕಾರ್ಮಿಕ ಕಾಯ್ದೆಗಳು ಕಾರ್ಮಿಕರ ಪಾಲಿನ ಮರಣಶಾಸನ ಸರ್ಕಾರ ಕಾರ್ಮಿಕ ವಿರೋದಿ ಕಾಯ್ದೆ ಜಾರಿಗೊಳಿಸಬಾರದು.8 ಗಂಟೆ ಕೆಲಸದಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ
ಕಟ್ಟುವ ಹಕ್ಕು. ಇನ್ನಿತರ ಹಕ್ಕುಗಳನ್ನು ಇಲ್ಲದಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲುಕೇಂದ್ರ ಸರ್ಕಾರಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ ಸಂಹಿತೆಗಳನ್ನು
ರದ್ದುಪಡಿಸಬೇಕು.ಇವತ್ತಿನ ಬೆಲೆಗಳಿಗೆ ಅನುಗುಣವಾಗಿಎಲ್ಲಾ ಸಂಘಟಿತ, ಅಸಂಘಟಿತ, ಗುತ್ತಿಗೆಕಾರ್ಮಿಕರು ಮತ್ತು ಸ್ಕೀಂ ನೌಕರರಿಗೂರಾಷ್ಟ್ರವ್ಯಾಪಿ 26
ಹಾಗೂ ರಾಜ್ಯವ್ಯಾಪಿ 36 ಸಾವಿರ ಕನಿಷ್ಟವೇತನ ನಿಗದಿಪಡಿಸಬೇಕು.
ಗುತ್ತಿಗೆ,ಹೊರಗುತ್ತಿಗೆ,ನಿಗದಿತ ಅವಧಿಯಉದ್ಯೋಗ, ಅಪ್ರೆಂಟಿಸ್, ಟ್ರೈನಿ, ನ್ಯಾಪ್, ಮುಂತ್ತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆಸಮಾನ ವೇತನತಕ್ಷಣಜಾರಿ ಮಾಡಬೇಕು.ಕಟ್ಟಡಕಾರ್ಮಿಕರು, ಆಟೋ-ಟ್ಯಾಕ್ಸಿಚಾಲಕರು, ಮನೆಕೆಲಸಗಾರರು, ಗಿಗ್‌ಕಾರ್ಮಿಕರು, ಬೀದಿವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್, ಮೆಕಾನಿಕ್ಸ್, ಬೀಡಿ-ಅಗರಬತ್ತಿ, ಹೆಂಚು ಕಾರ್ಮಿಕರು,ಇನ್ನಿತರಎಲ್ಲಾಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟಕಾರ್ಮಿಕರುಸೇರಿದಂತೆಎಲ್ಲಾ ವಿಭಾಗದಕಾರ್ಮಿಕರಿಗೆ ಕನಿಷ್ಟ ಮಾಸಿಕ ರೂ.9,000/- ಪಿಂಚಣಿ ಖಾತ್ರಿಪಡಿಸಬೇಕು. ಇಎಸ್‌ಐ, ಪಿ.ಎಫ್, ಬೋನಸ್ ಪಾವತಿಗಿರುವಎಲ್ಲಾ ವೇತನ ಮಿತಿಯನ್ನುತೆಗೆಯಬೇಕು. ಅರ್ಜಿ ಸಲ್ಲಿಸಿದ 45 ದಿನಗಳೊಳಗೆ ಕಾರ್ಮಿಕ ಸಂಘಗಳ ಕಡ್ಡಾಯ ನೊಂದಣಿ ಹಾಗು ಮಾನ್ಯತೆ
ಅನುಮೋದಿಸಬೇಕು.ಬೆಲೆಏರಿಕೆಯನ್ನುನಿಯಂತ್ರಿಸಬೇಕು. ಆಹಾರ, ಔಷಧಿಗಳು, ಕೃಷಿ ಸಾಮಾಗ್ರಿ ಮುಂತಾದಅಗತ್ಯ
ವಸ್ತುಗಳ ಮೇಲಿನ ಜಿಎಸ್‌ಐ ತೆಗೆಯಬೇಕು.ಪೆಟ್ರೋಲ್, ಡೀಸೆಲ್, ಅಡುಗೆ
ಅಡುಗೆ ಅನಿಲಕೇಂದ್ರೀಯಅಬಕಾರಿ ಸುಂಕ ಇಳಿಸಬೇಕು.ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು.ಸಾರ್ವಜನಿಕ ಉದ್ದಿಮೆ, ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಿಸುವ ‘ರಾಷ್ಟ್ರೀಯ ನಗದೀಕರಣಪೈಪ್‌ಲೈನ್‌ಯೋಜನೆ’ಯನ್ನು ರದ್ದುಪಡಿಸಬೇಕು. ಆದಿವಾಸಿಗಳು, ರೈತರು, ಸ್ಥಳೀಯ
ಸಮುದಾಯದಉನ್ನತಿಗೆಗಣಿಗಾರಿಕೆ ಲಾಭದ ಶೇ.50 ಪಾಲು ಬಳಕೆ ಖಾತ್ರಿಗೊಳಿಸಲು ಖನಿಜ ಮತ್ತುಲೋಹಗಳ ಗಣಿಗಾರಿಕೆಯ ಕಾನೂನಿಗೆ ತಿದ್ದುಪಡಿ ಮಾಡಬೇಕು.ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆ ಮುಖಂಡ ಚನ್ನಬಸವಣ್ಣ ಮಾತನಾಡಿ ವಿದ್ಯುತ್‌ತಿದ್ದುಪಡಿ ಮಸೂದೆ-2022 ವಾಪಸ್ಸು ಪಡೆಯಬೇಕು.ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ಮೀಟರ್ ಅಳವಡಿಕೆ ನಿಲ್ಲಿಸಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ MSP@ 2+50% ಅನುಪಾತದಲ್ಲಿ ಬೆಂಬಲ ಬೆಲೆ ಖಾತರಿಗೆ ಕಾನೂನುರೂಪಿಸಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ವಿದ್ಯುತ್ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು.ಮನ್ನಾ ಮತ್ತು ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತರಬೇಕು. ಸಂಯುಕ್ತ ಕಿಸಾನ್ ಮೋರ್ಚಾ. (SKM)ಗೆ ನೀಡಿದ ಅಖಿತ ಭರವಸೆಯನ್ನು ಕೇಂದ್ರ ಸರ್ಕಾರ ಜಾರಿಗೊಆಸಬೇಕು.ಎಂದು ತಿಳಿಸಿದರು
ಸೌಹಾರ್ದ ತಿಪಟೂರು ಅಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಅಲ್ಲಾಭಕ್ಷು ಮಾತನಾಡಿ ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು. ಖಾಲಿಯಿರುವ ಹುದ್ದೆಗಳ ಭರ್ತಿಮಾಡಬೇಕು.ಉದ್ಯೋಗ ಸೃಷ್ಟಿ ಮಾಡಬೇಕು.ಗ್ರಾಮೀಣ ಉದ್ಯೋಗಖಾತ್ರಿಯೋಜನೆಯಡಿ ವಾರ್ಷಿಕ 200
ದಿನ ಕೆಲಸ, ದಿನಕ್ಕೆ ರೂ.600 ಕೂಲಿ ನಿಗದಿಪಡಿಸಬೇಕು.ನಗರ ಪ್ರದೇಶಕ್ಕೂ ವಿಸ್ತರಿಸಬೇಕು,ಎಲ್ಲರಿಗೂಉಚಿತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂಎಲ್ಲರಿಗೂ ವಸತಿಖಾತ್ರಿಪಡಿಸಬೇಕು. ನೂತನ ಶಿಕ್ಷಣ ನೀತಿ-2020ನ್ನು ರದ್ದುಪಡಿಸಬೇಕು.ಅರಣ್ಯ ಹಕ್ಕು ಕಾಯ್ದೆ (ಈಖಂ) ಕಟ್ಟುನಿಟ್ಟಾಗಿ ಅನುಷ್ಟಾನ ಮಾಡಬೇಕು. ಅರಣ್ಯ ನಿವಾಸಿಗಳನ್ನುತೆರವುಗೊಳಿಸಲು ಕೇಂದ್ರ ಸರ್ಕಾರಅನುಮತಿ ನೀಡುವ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು.ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಾಯಿಸಿದ ಎಲ್ಲಾಅಸಂಘಟಿತಕಾರ್ಮಿಕರಿಗೆಆರೋಗ್ಯ ಯೋಜನೆಗಳು,
ಹೆರಿಗೆ ಸೌಲಭ್ಯಗಳು, ಜೀವ ಮತ್ತುಅಂಗವೈಕಲ್ಯ ವಿಮೆ ನೀಡಬೇಕು ಹಾಗೂ ಇಎಸ್‌ಐ ಸೌಲಭ್ಯಸೇರಿದಂತೆ ಸಾಮಾಜಿಕ ಸುರಕ್ಷತೆಒದಗಿಸಬೇಕು. ಕಲ್ಯಾಣ ಮಂಡಳಿಗಳಿಗೆ ಬಜೆಟ್‌ನಲ್ಲಿ ಅನುದಾನನೀಡಬೇಕು.
ದೇಶದಅತೀದೊಡ್ಡ ಶ್ರೀಮಂತರ ಆಸ್ತಿ ಮೇಲೆ ಸಂಪತ್ತುತೆರಿಗೆ, ಉತ್ತರಾಧಿಕಾರತ್ವತೆರಿಗೆ ವಿಧಿಸಬೇಕು.ಕಾರ್ಪೊರೇಟ್‌ತೆರಿಗೆಯನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು.
ಸಂವಿಧಾನದ ಆಶಯಗಳ ಮೇಲಿನ ದಾಳಿ ನಿಲ್ಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ,ವೈವಿದ್ಯಮಯ ಸಂಸ್ಕೃತಿಗಳು, ಭಾಷೆಗಳು, ಸಮಾನತೆ ಮತ್ತುಒಕ್ಕೂಟತತ್ವವನ್ನು ರಕ್ಷಿಸಬೇಕು.ದಿನದ ಕೆಲಸದಅವಧಿ 12 ಗಂಟೆಗೆ ವಿಸ್ತರಣಿ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರದುಡಿಮೆಗೆ
ಅವಕಾಶ ನೀಡಿಕಾರ್ಖಾನೆಕಾಯ್ದೆಗೆ ಮಾಡಿರುವತಿದ್ದುಪಡಿ ಹಾಗೂ ನಿಶ್ಚಿತ ಕಾಲಾವಧಿಕಾರ್ಮಿಕ (FTE)ನೇಮಕಕ್ಕೆ ಅವಕಾಶ ನೀಡುವ ಮಾದರಿ ಸ್ಥಾಯಿ ಆದೇಶಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು.ಎಂದು ಒತ್ತಾಯಿಸಿದರು ಪ್ರತಿಭಟನೆಯಲ್ಲಿ ಮುಖಂಡರಾದ ರಾಜಮ್ಮ ಅನಸೂಯಮ್ಮ. ಅಲ್ಲಾ ಭಕ್ಷು.ಎಪಿಎಂಸಿ .ಹಮಾಲಿ ಕಾರ್ಮಿಕ ಸಂಘದ ಮುಖಂಡರಾದ ಕಿರಣ್.ಜಯರಾಂ.ರಾಜು.ದೊಡ್ಡಯ್ಯ.ವಿಕಾಸ್ ಗಂಗಾಧರ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




