ಹಾಲ್ಕುರಿಕೆ ಗ್ರಾಮಪಂಚಾಯ್ತಿ ಮಾಜಿ ಸದಸ್ಯ ಹಾಗೂ ಕಾಂಗ್ರೇಸ್ ಮುಖಂಡ ಬಿ.ಜಿ ತಿಮ್ಮನಾಯ್ಕ (78), ವಯೋಸಹಜ ಕಾಯಿಲೆಯಿಂದ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ಗ್ರಾಮಪಂಚಾಯ್ತಿ ಸದಸ್ಯರಾಗಿ,ಭೈರಾಪುರ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಾಲಯ ಸಮಿತಿ ಕಾರ್ಯದರ್ಶಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನ ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ನಾಳೆ 14 -05- 2025 ರಂದು ಹೆಚ್. ಬೈರಾಪುರದ ಅವರ ತೋಟದಲ್ಲಿ ನೆರವೇರಿಸಲಾಗುವುದು.ಎಂದು ಕುಟುಂಬಸ್ತರು ತಿಳಿಸಿದರೆ.




