ತಿಪಟೂರಿನ ಶ್ರೀ ಸತ್ಯ ಗಣಪತಿ ವಿಶ್ವವಿಖ್ಯಾತ ಗಣೇಶೋತ್ಸವಗಳಲ್ಲಿ ಒಂದು ಮೈಸೂರು ದಸರಾ, ಬೆಂಗಳೂರು ಕರಗದಷ್ಟೇ ಪ್ರಸಿದ್ದಿ ಪಡೆದ ಗಣೇಶ, ತಿಪಟೂರು ಗಣೇಶೋತ್ಸವ ವಿಶೇಷ ಹಾಗೂ ವಿಶಿಷ್ಟವೂ ಹೌದು,ಸಂಪ್ರದಾಯ ಬದ್ದವಾಗಿ,ಸ್ಥಾಪನೆಗೊಂಡು,ಪೂಜಿಸುವ ತಿಪಟೂರಿನ ಗಣಪತಿ ಉತ್ಸವ ಪ್ರಾರಂಭವಾಗಿದ್ದು ಸ್ವತಂತ್ರ್ಯ ಚಳುವಳಿಯ ಕಾಲದಲ್ಲಿ. 1929-30 ರ ಸಮಯದಲ್ಲಿ ಸ್ವತಂತ್ರ್ಯ ಚಳುವಳಿ ಸಂಘಟನೆಗಾಗಿ ಬೆಂಗಳೂರಿಂದ ವಲಸೆ ಬಂದ ಶ್ರೀ ತಿಮ್ಮಪ್ಪನವರು ದಿವಾನ್ ನರಸಿಂಹಯ್ಯಂಗಾರ್ ಹಾಗೂ ದಾಸಪ್ಪ ನವರು ಪ್ರಥಮಭಾರೀಗೆ ಪೆಂಡಾಲ್ ಹಾಕಿ ಶ್ರೀ ಸತ್ಯ ಗಣಪತಿಯನ್ನುಸ್ಥಾಪಿಸಿ,ಪೂಜಿಸಲಾಯಿತು.ಸ್ವತಂತ್ರ್ಯ ಹೋರಾಟದ ಹಿನ್ನೆಲೆ ಆರಂಭವಾದ, ಗಣೇಶ ಪ್ರತಿಷ್ಠಾಪನೆ ಪ್ರತಿವರ್ಷ ಪೆಂಡಲ್ ನಿರ್ಮಾಣ ಮಾಡಿ ಗಣೇಶ ಹಬ್ಬ ಆಚರಣೆ ಮಾಡುತ್ತಾ ಬಂದಿದ್ದು, ತ್ರಿಕಾಲ ಪೂಜೆ,ಹೋಮ ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. 1976ರಲ್ಲಿ ಸರ್ಕಾರದಿಂದ ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಗೆ 50 ಲಕ್ಷ ಬೆಲೆಬಾಳುವ ದೊಡ್ಡ ಜಾಗ ಮಂಜೂರಾಯಿತು. ಆಗಿನ ಟ್ರಸ್ಟ್ ಅಧ್ಯಕ್ಷರಾಗಿದ್ದ ಮಾಜಿ ಶಾಸಕರಾದ ಶ್ರೀಬಿ.ಎಸ್.ಚಂದ್ರಶೇಖರಯ್ಯ,ನವರು ಆ ಜಾಗದಲ್ಲಿ ಆಸ್ಥಾನ ಮಂಟಪ ಕಟ್ಟಡವನ್ನು ನಿರ್ಮಾಣ ಮಾಡಿದರು, ನಗರದ ಕೊಬ್ಬರಿ ಮಾರುಕಟ್ಟೆಯಲ್ಲಿ ರೈತರಿಂದ ಚೀಲ ಒಂದಕ್ಕೆ ಒಂದು ಗಿಟಕು ಕೊಬ್ಬರಿ ಸಂಗ್ರಹಿ ಅದರಿಂದ ಬರುವ ಹಣ,ಶ್ರೀಸತ್ಯಗಣಪತಿ ಆಸ್ಥಾನಮಂಟಪದ ಅಭಿವೃದ್ದಿಗೆ ಬಳಸಲಾಗುತ್ತಿತ್ತು.ಅಭಿವೃದ್ದಿ ಕಾರ್ಯಗಳು ಹಾಗೂ ಅಮೃತ ಮಹೋತ್ಸವ ನಿರ್ಮಾಣಕ್ಕಾಗಿ ದಾನಿಗಳ ಸಹಕಾರದ ಜೊತೆಗೆ ಶ್ರೀ ಸತ್ಯಗಣಪತಿ ಲಾಟರಿ ಟಿಕೇಟ್ ಮಾರಾಟ ಮಾಡಿ ವಿಜೇತರಿಗೆ ಬಹುಮಾನ ವಿತರಣೆ ಜೊತೆಗೆ ಲಾಟರಿ ಮಾರಾಟದಿಂದ ಬಂದ ಹಣವನ್ನ ದೇವಾಲಯದ ಕೈಂಕರ್ಯಗಳಿಗೆ ಬಳಸಲಾಗುತ್ತಿತ್ತು. ಶ್ರೀ ಬಿ.ಎಸ್ ಚಂದ್ರಶೇಖರಯ್ಯನವರ ನಂತರ ಅವರ ಪುತ್ರ ಬಿ.ಸಿ ರವಿಶಂಕರ್.ಹಾಗೂ ಅವರ ನಂತರ ಬಿ.ಆರ್ ಶ್ರೀಕಂಠ,ರವರು ಪೂಜಾಕೈಂಕರ್ಯದ ಪರಂಪರೆ ಮುಂದುವರೆಸಿಕೊಂಡು ಬರುತ್ತಿದ್ದಾರೆ,

ಶ್ರೀಸತ್ಯಗಣಪತಿ ಪ್ರತಿಷ್ಠಾನೆಗೊಂಡ ದಿನದಿಂದ ನಿತ್ಯಪೂಜೆ ಕೈಂಕರ್ಯಗಳ ಜೊತೆ ವಿಶೇಷ ಸಂಸ್ಕೃತಿಕ ಕಾರ್ಯಕ್ರಮಗಳು,ಆರ್ಕೇಸ್ಟ್,ಭಜನೆ.ಹರೀಕಥೆಯಂತೆ ಸಾಲು ಸಾಲು ಕಾರ್ಯಕ್ರಮಗಳು ನಡೆಯುವುದು ವಾಡಿಕೆಯಾಗಿದ್ದು,ತಿಪಟೂರು ಜನರ ಪಾಲಿಗಂತು ಗಣಪತಿ ಹಬ್ಬ ಬಂದರೇ ಸಂಭ್ರಮಹೋ ಸಂಭ್ರಮ….
ತಿಪಟೂರು ಶ್ರೀ ಸತ್ಯಗಣಪತಿ ಸುಮಾರು 6.5ಅಡಿ ಎತ್ತರ ಹಾಗೂ ವಿಶೇಷ ರೂಪ,ಆಕರ್ಷಣೆಯಿಂದ ಕೂಡಿದ್ದು,ಕೊಪ್ಪ ಗ್ರಾಮದ ಕುಂಭರ ಸಮಾಜದ ನಂಜಪ್ಪ ಶೆಟ್ಟರಿಂದ ಗಣೇಶ ಮೂರ್ತಿ ತಯಾರಿಕೆ ಆರಂಭಗೊಂಡು,ಯೋಗಾನಂದ್ ನಂತರ ಅವರ ಪುತ್ರ ಲಕ್ಷ್ಮೀಶ(ಚೇತನ್) 9ಬಗೆಯ ಮಣ್ಣು ಸಂಗ್ರಹಿಸಿ ಶಾಸ್ರ್ತೋಕ್ತವಾಗಿ 15ದಿನಗಳ ಕಾಲ ನಿರಂತರ ವೃತಾಚರಣೆಯೊಂದಿಗೆ ಮೂರ್ತಿ ತಯಾರುಮಾಡುತ್ತಾ ಬಂದಿದ್ದು. ಆಕಾರ ರೂಪ ಬದಲಾಗದೆ,ಈ ಕುಟುಂಬ 50ವರ್ಷಗಳಿಂದ ಕೈಂಕರ್ಯ ಮುಂದುವರೆಸಿಕೊಂಡು ಬಂದಿರುವುದು ವಿಶೇಷ.ತಿಪಟೂರು ಜನರ ದೊರೆ ಶ್ರೀಸತ್ಯಗಣಪತಿ ವಿಸರ್ಜನೆಗೆ ಅಣಿಗೊಳ್ಳುತ್ತಿದ್ದು ಗುರುವಾರ ಅನ್ನಸಂತರ್ಪಣೆ.ಶುಕ್ರವಾರ ಮಹಾಮಂಗಳಾರತಿ .ಶನಿವಾರ ದಿನವಿಡಿ ವಿಶೇಷ ಪೂಜಾಕೈಂಕರ್ಯ ವಿವಿಧ ಅಲಂಕಾರ ಸೇವೆಗಳು ಮುಗಿದ ನಂತರ ಪೂಜೆಸಲ್ಲಿಸಿ ಗದ್ದುಗೆ ಎತ್ತಲಾಗುತ್ತದೆ .ನಂತರ ಶ್ರೀ ಸ್ವಾಮಿಯವರಿಗೆಂದೆ ತಯಾರು ಮಾಡಿದ ವಿಶೇಷ ಹಂಸ ದರ್ಬಾರ್ ಹೂವಿನ ವಾಹನದಲ್ಲಿ ಕೂರಿಸಿ ಪೂಜೆಸಲ್ಲಿಸಿ ಚಾಲನೆ ನೀಡಿದ ನಂತರ ದೊಡ್ಡಪೇಟೆ .ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ.ಎಲೆ ಆಸರ. ಕಾರೋನೆಷನ್ ರಸ್ತೆ ನಂತರ ಕೋಡಿ ಸರ್ಕಲ್ ಮೂಲಕ ಗಾಂಧೀ ನಗರ ಪ್ರವೇಶ ಮಾಡುವ ಗಣೇಶ ಉತ್ಸವಕ್ಕೆ ಬೋವಿ ಕಾಲೋನಿ ಸರ್ಕಾರಿ ಶಾಲೆ ಆವರಣದಲ್ಲಿ ಭಕ್ತರಿಂದ ಸಾಮೂಹಿಕ ಪೂಜೆಸಲ್ಲಿಸಿ ನಂತರ ಜಾಮೀಯ ಮಸೀದಿ ರಸ್ತೆ ಮೂಲಕ ವಾಪಾಸ್ ಆಗಲಿದು. ಮುಸಲ್ಮಾನ್ ಬಂಧುಗಳು ಮಸೀದಿಯ ಮುಂಭಾಗದಲ್ಲಿ ಪೂಜೆಸಲ್ಲಿಸಿ ಹೂವು ಹಣ್ಣು ಅರ್ಪಿಸುತ್ತಾರೆ ಅಲ್ಲಿಂದ ಕೋಡಿಸರ್ಕಲ್ . ಬಿ.ಹೆಚ್ ರಸ್ತೆ ಮೂಲಕ ಸಾಗಿ ಡಾ//ಬಿ.ಆರ್ ಅಂಬೇಡ್ಕರ್ ಸರ್ಕಲ್ ನಿಂದ ಕೆ.ಆರ್ ಬಡಾವಣೆ ಸೇರಿದಂತೆ ನಗರಾಧ್ಯಂತ ಉತ್ಸವ ಸಾಗುವ ಮಾರ್ಗದಲ್ಲಿ ವಿಶೇಷ ಪೂಜೆಸಲ್ಲಿಸುವ ಜೊತೆಗೆ ಬಗೆಬಗೆಯ ಬೃಹತ್ ಹೂವಿನ ಹಾರಗಳು.ವಿಶೇಷ ಖಾದ್ಯಗಳಿಂದ ಹಣ್ಣು ತರಕಾರಿಗಳಿಂದ ತಯಾರಿಸಿದ ಹಾರಗಳನ್ನ ಅರ್ಪಣೆ ಮಾಡುವ ಜೊತೆಗೆ ಪಾನಕ ಫಲಹಾರ.ಚಿತ್ರಾನ್ನ ಮೊಸರನ್ನ ಪುಳಿಯೊಗರೆ.ಮಜ್ಜಿಗೆ ವಿತರಣೆ ಮಾಡಿ ಭಕ್ತಿ ಸಮರ್ಪಣೆ ಮಾಡಲಾಗುತ್ತದೆ.ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವಕ್ಕಾಗಿ ಕಲ್ಪತರು ನಾಡು ಕೊಬ್ಬರಿ ನಗರಿ ತಿಪಟೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು.ಹಾಸನ ಸರ್ಕಲ್ ಡಾ//ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಿ.ಹೆಚ್ ರಸ್ತೆ.ನಗರಸಭೆ ಸರ್ಕಲ್ .ಅರಳಿಕಟ್ಟೆ ಸರ್ಕಲ್ ಕೋಡಿಸರ್ಕಲ್ ದೊಡ್ಡಪೇಟೆ ಸೇರಿದಂತೆ ಇಡೀ ನಗರವೇ ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾನರ್ ಬಂಟಿಗ್ಸ್ ಗಳಿಂದ ಕಂಗೊಳಿಸುತ್ತಿದ್ದು. ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಾಲಯದ ಬಳಿ ನಿರ್ಮಾಣ ಮಾಡಿರುವ ಶ್ರೀ ಹನುಮ ಹೆಬ್ಬಾಗಿಲು.ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿ ಹಾಕಿರುವ ಅಮ್ಯೂಸ್ ಮೆಂಟ್ ಪಾರ್ಕ್ ಜಾತ್ರೆಯ ಮೆರುಗು ಹೆಚ್ಚಲು ಕಾರಣವಾಗಿದೆ ಅಲ್ಲದೆ.ಉತ್ಸವದ ಉದ್ದಕ್ಕೂ ತಮಟೆ.ಡೊಳ್ಳು ಕುಣಿತ. ವೀರಗಾಸೆ.ಲಿಂಗದ ವೀರರ ಕುಣಿತ ಪಟಕುಣಿತ.ಕೇರಳದ ಚಂಡೆವಾದ್ಯ.ನಾಸಿಕ್ ಡೋಲ್.ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಉತ್ಸವಕ್ಕೆ ರಾಜಕಳೆತುಂಬಲಿದು,ಯುವಕ ಯುವತಿಯರನ್ನ ಸೂಜಿಗಲ್ಲಿನಂತೆ ಸೆಳೆಯಲು ಡಿಜೆ ಸಹ ಜೊತೆಸೇರಲಿದ್ದು ವಿಶೇಷ ಮದ್ದಿನ ಪ್ರದರ್ಶನ ಮುದನೀಡಲಿದ್ದು 2ದಿನಗಳ ಕಾಲ ನಡೆಯುವ ಉತ್ಸವ ಭಾನುವಾರ ರಾತ್ರಿ ತಿಪಟೂರು ಅಮಾನೀಕೆರೆ ಕಲ್ಯಾಣಿಯಲ್ಲಿ ಶ್ರೀ ಸತ್ಯಗಣಪತಿ ವಿಸರ್ಜನೆಯೊಂದಿಗೆ ಗಣೇಶೋತ್ಸವ ಮುಕ್ತಾಯಗೊಳ್ಳಲಿದೆ
ವರದಿ:ಮಂಜುನಾಥ್ ಹಾಲ್ಕುರಿಕೆ







