Spread the love

ತಿಪಟೂರು:ನಗರದ ಕಲ್ಪತರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಅದ್ದೂರಿಯಾಗಿ 79ನೇ ಸ್ವತಂತ್ರ್ಯದಿನಾಚಣೆ ಆಚರಿಸಲಾಯಿತು.ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಧ್ವಜಾರೋಹಣ ನೆರವೇರಿಸಿ.ಪೊಲೀಸ್ .ಗೃಹರಕ್ಷಣದಳ,ಎನ್.ಸಿ.ಸಿ .ಸೇರಿದಂತೆ ವಿವಿಧ ಶಾಲಾ ತುಕ್ಕಡಿಗಳಿಂದ ಧ್ವಜವಂದನೆ ಸ್ವೀಕರಿಸಿದರು.

ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು,ನಮ್ಮ ನಿಮ್ಮೆಲರ ಹೆಮ್ಮೆಯ ಭಾರತ ದೇಶವು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯಗೊಂಡು ಇಂದಿಗೆ 78 ವರ್ಷಗಳು ಮುಗಿದು 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ .ನಮ್ಮ ಮಾತೃ ಭೂಮಿಯಾಗಿರುವ ಭಾರತ ದೇಶ ಪುರಾತನವಾದ ಧರ್ಮ ನಾಗರೀಕತೆ , ಸಂಸ್ಕೃತಿ ಮೌಲ್ಯಗಳಿಂದ ಶ್ರೀಮಂತವಾಗಿದೆ .
ಸಾಧು ಸಂತರ , ಋಷಿ ಮುನಿಗಳ , ರಾಜ ಮಹಾರಾಜರ , ಸಾಹಿತಿ – ಕವಿಗಳು , ಶಿಕ್ಷಣ ತಜ್ಞರ , ರೈತರ – ಯುವಕರ ಸ್ವಾತಂತ್ರ್ಯ ಹೋರಾಟಗಾರರಿಂದ ತುಂಬಿ ಸಮೃದ್ಧವಾಗಿದ್ದ ದೇಶವಿದಾಗಿದೆ .ಪರಕೀಯರ ದಾಸ್ಯದಿಂದ ಈ ದೇಶವನ್ನು ಪಾರು ಮಾಡಲು ಸಹಸ್ರಾರು ಜನ ಹೋರಾಟಗಾರರು , ದೇಶ ಪ್ರೇಮಿಗಳು ತ್ಯಾಗ ಬಲಿದಾನ ಮಾಡಿದ್ದಾರೆ . ಆ ಎಲ್ಲಾ ಮಹಾಚೇತನಗಳನ್ನು ಸ್ಮರಿಸಿ , ಗೌರವ ಪೂರ್ವಕ ನಮನಗಳನ್ನು ಸಮರ್ಪಿಸುವುದು ಈ ರಾಷ್ಟ್ರದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ . ನಮ್ಮ ದೇಶವನ್ನು ಸ್ವಾತಂತ್ರ್ಯಗೊಳಿಸಲು ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಲಾಲಾ ಲಜಪತ್‌ರಾಯ್ , ಬಿಪಿನ್ ಚಂದ್ರಪಾಲ್ , ಡಾ || ಬಿ.ಆರ್ ಅಂಬೇಡ್ಕರ್ , ಜವಾಹರ್ ಲಾಲ್ ನೆಹರು , ಲಾಲ್ ಬಹದ್ದೂರ್ ಶಾಸ್ತ್ರಿ , ಸುಭಾಷ್ ಚಂದ್ರ ಬೋಸ್ ಈಗೆ ಹಲವಾರು ಧೀಮಂತ ನಾಯಕರು ಅಪರಿಮಿತ ಕೊಡುಗೆ ನೀಡಿದ್ದಾರೆ .


ಸ್ವಾಮಿ ವಿವೇಕಾನಂದರು,ಎದ್ದೇಳಿ , ಗುರಿ ಮುಟ್ಟುವತನಕ ನಿಲ್ಲದಿರಿ ” ಘೋಷಣೆಯೊಂದಿಗೆ ಯುವ ಸಮುದಾಯವನ್ನು ಹುರಿದುಂಬಿಸಿದರು . ಭಗತ್ ಸಿಂಗ್ , ಸುಖದೇವ್ , ರಾಜಗುರು ಮತ್ತು ಇನ್ನೂ ಹಲವು ಯುವ ಸಮೂಹ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು .ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ ” ಎನ್ನುವ ಕವಿ ಕಣವಿ ಅವರ ಮಾತಿನಂತೆ ದೇಶದ ಏಕತೆಗೆ , ಅಖಂಡತೆಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ . ಎಲ್ಲಿದ್ದರೂ ಭಾರತೀಯರಾಗಿ ಸರ್ವ ಜನಾಂಗದ ತೋಟವಾಗಿ ಬೆಳೆಯ ಬೇಕಿದೆ . ಈ ಕಾರಣದಿಂದ ನಾವೆಲ್ಲರೂ ಮಾನವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಿದೆ .ಕುಲ , ಧರ್ಮ , ಜಾತಿಗಳನ್ನು ಮೀರಿ ಬೆಳೆಯುವ ಸಮಾಜವನ್ನು ಕಟ್ಟಲು ಶ್ರಮಿಸಿದ ಬುದ್ಧ , ಬಸವಣ್ಣ , ಕನಕದಾಸರು , ಮಹಾತ್ಮ ಗಾಂಧೀಜಿ ಇವರನ್ನು ಸ್ಮರಿಸಿಕೊಳ್ಳುವುದು ಅವರು ಮಾಡಿಕೊಟ್ಟಿರುವ ಆಶಯಗಳನ್ನು ಅನುಷ್ಠಾನಗೊಳಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ.ಹೆಮ್ಮೆಯ ಭಾರತದ ಭವಿಷ್ಯಕ್ಕಾಗಿ ಎಲ್ಲಾ ಭಾರತೀಯರು ಒಗ್ಗಟಿನಿಂದ ದುಡಿಯೋಣ ಎಂದು ತಿಳಿಸಿದರು


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಹಲವಾರು ಮಹನೀಯರ ಹೋರಾಟ,ತ್ಯಾಗ ಬಲಿದಾನದಿಂದ ದೊರೆತ ಭವ್ಯಭಾರತದ ಸ್ವತಂತ್ರ್ಯವನ್ನ ಕಾಪಾಡ ಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.ಇತ್ತಿಚಿನದಿನಗಳಲ್ಲಿ ನಾವು ಆಘಾತಕಾರಿ ಬೆಳವಣಿಗೆಗಳನ್ನ ಕಾಣುತ್ತಿದ್ದೇವೆ,ಜವಹರಲಾಲ್ ನೆಹರು ಆದಿಯಾಗಿ ಹಲವಾರು ಮಹನೀಯರು ರಾಷ್ಟ್ರೀಕೃತ ಸಂಘ ಸಂಸ್ಥೆಗಳನ್ನ ಕಟ್ಟಿಬೆಳಸಿದರು ಆದರೆ ಎಲ್ಲ ಸ್ವಾಯುಕ್ತ ಸಂಸ್ಥೆಗಳನ್ನ ಖಾಸಗೀಕರಣ ಮಾಡುತ್ತಿರುವುದು. ವಿಷಾದನೀಯ,ಸ್ವತಂತ್ರ್ಯದ ಮೌಲ್ಯಗಳು ಹಾಗೂ ಸ್ವತಂತ್ರ್ಯಕ್ಕಾಗಿ ಹೋರಾಟ ಬಲಿದಾನಗಳ ಮಹತ್ವವನ್ನ ಯುವಪೀಳಿಗೆ ತಿಳಿದುಕೊಳ್ಳ ಬೇಕು.ನಮ್ಮ ಕ್ಷೇತ್ರದಲ್ಲಿ ಶಿಕ್ಷಣ,ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇನೆ‌.ಕ್ಷೇತ್ರವನ್ನ ಸಮಗ್ರವಾಗಿ ಅಭಿವೃದ್ದಿ ಪಡಿಸಬೇಕು, ಎನ್ನುವ ದೃಷ್ಠಿಯಿಂದ ಹಲವಾರು ಯೋಜನೆಗಳನ್ನ ಹಾಕಿಕೊಂಡಿದ್ದು.ನಗರದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೇರಿದಂತೆ,ಎಲ್ಲಾ ಯೋಜನೆಗಳನ್ನ ಪೂರ್ಣಗೊಳಿಸುತ್ತೇನೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ಡಿವೈಎಸ್ಪಿ ಯಶ್ ಕುಮಾರ್ ಶರ್ಮ.ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್.ಉಪಾಧ್ಯಕ್ಷೆ ಮೇಘಶ್ರೀ ಭೂಚಣ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ.

error: Content is protected !!