Spread the love

ತಿಪಟೂರು:ಪ್ರವಾದಿ ಮಹಮದ್ (ಸ )ರವರ ಹುಟ್ಟುಹಬ್ಬ ಈದ್ ಮಿಲಾದ್ ಆಂಗವಾಗಿ ಅಮಾನ್ ಇ ಇಸ್ಲಾಂ ಸುನ್ನಿ ಮುಸ್ಲಿಂ ವೆಲ್ ಫೇರ್ ಟ್ರಸ್ಟ್ ನಿಂದ ತಿಪಟೂರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.


ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ//ಶಿವಕುಮಾರ್ ಮಾತನಾಡಿ ಪ್ರವಾದಿ ಮಹಮದ್ ರವರು ಶಾಂತಿ ಸೌಹಾರ್ದತೆ ಹಾಗೂ ಸಹಬಾಳ್ವೆ ಬೋದಿಸಿದ್ದಾರೆ,ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು,ಯಾರು ಹುಟ್ಟುವಾಗ ಇಂತಹ ಜಾತಿಧರ್ವದಲ್ಲಿ ಹುಟ್ಟಬೇಕು ಎಂದು ಹುಟ್ಟುವುದಿಲ್ಲ,ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೊಂದಿಗು ಸಹಬಾಳ್ವೆಯಿಂದ ಬದುಕಬೇಕು. ಪ್ರವಾದಿಯವರು ತಮ್ಮ ಜೀವನದಲ್ಲಿ ಶಾಂತಿ ಸಹಬಾಳ್ವೆಯನ್ನ ಪ್ರತಿಪಾದಿಸಿದ್ದಾರೆ. ಅವರ ತತ್ವಚಿಂತನೆಗಳನ್ನ ಪಾಲನೆ ಮಾಡೋಣ.ಈದ್ ಮಿಲಾದ್ ಅಂಗವಾಗಿ ಹಣ್ಣು ಹಂಪಲು ವಿತರಣೆ ಉತ್ತಮ ಕೆಲಸ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಅಮಾನ್ -ಇ -ಇಸ್ಲಾಂ ಸುನ್ನಿ ಮುಸ್ಲಿಂ ವೆಲ್ ಫೇರ್ ಟ್ರಸ್ಟ್ ಕಾರ್ಯದರ್ಶಿ ಎಂ.ಡಿ ಶಾಹಿದ್ ಮಾತನಾಡಿ ಪ್ರವಾದಿ ಮಹಮದ್ (ಸ)ರವರು ಪ್ರತಿಯೊಬ್ಬ ಮುಸಲ್ಮಾನ ತಾನು ಹುಟ್ಟಿದ ಮಣ್ಣನ್ನ ಪ್ರೀತಿಸಬೇಕು,ತಾನು ಹುಟ್ಟಿದ ಭೂಮಿಯಲ್ಲಿ ಎಲ್ಲರೊಂದಿ ಸಹಭಾಳ್ವೆಯಿಂದ ಬದುಕಬೇಕು ಎಲ್ಲರನ್ನ ಪ್ರೀತಿಸಬೇಕು ಎಂದು ಹೇಳಿದ್ದಾರೆ,ಎಂದು ತಿಳಿಸಿದರು
ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ//ರಕ್ಷಿತ್ ಗೌಡ ಮಾತನಾಡಿ ಮುಸಲ್ಮಾನ್ ಸಮಾಜ ಪ್ರವಾದಿಯರವರು ಹಾಕಿಕೊಟ್ಟ ಶಾಂತಿ ಮಾರ್ಗದಲ್ಲಿ ನಡೆಯಬೇಕು.ನಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣಕ್ಕೆ ಆದ್ಯತೆ ನೀಡಿ,ವಿದ್ಯಾವಂತರನ್ನಾಗಿ,ಎಲ್ಲರೊಂದಿಗೆ,ಸಹಬಾಳ್ವೆಯಿಂದ ಜೀವನನಡೆಸಬೇಕು ಎಂದರು


ಕುಮಾರಿ ಆಸೀಫಾ ಮಾತನಾಡಿ ನನ್ನ ನೆಚ್ಚಿನ ಪ್ರವಾದಿ ಮಹಮದ್ ರವರು ಶಾಂತಿ ಪ್ರೀತಿ ಸಹಬಾಳ್ವೆ ಭೋದನೆ ಮಾಡಿದ್ದಾರೆ,ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಒಳ್ಳೆಯದನ್ನ ಬಯಸುವ ಪ್ರವಾದಿಯವರು ನಾವು ನಡೆಯುವ ದಾರಿಯಲ್ಲಿ ಯಾರಿಗಾದರೂ ತೊಂದರೆಯಾಗುವಂತ್ತೆ ಕಲ್ಲು ಮುಳ್ಳು ಕಂಡರೆ ಅದನ್ನ ತೆಗೆದುಹಾಕಿ ಮುಂದಕ್ಕೆ ನಡೆ, ಅನಾಥ ಮಕ್ಕಳ ಮುಂದೆ ತಮ್ಮ ಮಕ್ಕಳನ್ನ ಮುದ್ದಿಸ ಬೇಡ ಯಾಕೆಂದರೆ ಆ ಅನಾಥ ಮಕ್ಕಳ ಮನಸ್ಸಿಗೆ ನೋವುಂಟಾಗುತ್ತದೆ.ಯಾರಿಗೂ ತೊಂದರೆ ಮಾಡಬೇಡ,ಕೇಡು ಬಯಸಬೇಡ,ಎಲ್ಲರೊಂದಿಗೂ ಪ್ರೀತಿಯಿಂದ ಇರುಎಂದು ಹೇಳಿದ್ದಾರೆ, ಪ್ರವಾದಿಯವರು ಹಾಕಿಕೊಟ್ಟದಾರಿಯಲ್ಲಿ ನಡೆಯೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ತಿಮ್ಮರಾಜ್. ಟ್ರಸ್ಟ್ ಅಧ್ಯಕ್ಷ ಮಹಮದ್ ಗೌಸ್.ಕಾರ್ಯದರ್ಶಿ ಎಂ.ಡಿ.ಶಾಹಿದ್.ಜಬೀ ಉಲ್ಲಾ,ಅಲಿಂ ಡಿ.ಕೆ.ಜ್ಯೋತಿ ಆಪ್ಟಿಕಲ್ ಅನ್ವರ್ .ಅಜೀಜ್ .ಇಸಾಕ್ ,ಸಾದಿಕ್ ಪಾಷಾ,ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!