ತಿಪಟೂರಿನ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ಕೊಡ ಮಾಡುವ ಸಾಹಿತ್ಯ ಕಲ್ಪತರು ರಾಜ್ಯಮಟ್ಟದ ಪ್ರಶಸ್ತಿಗೆ ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿ ಮಿಮಿಕ್ರಿ ಮೈಸೂರು ಆನಂದ್ ಅವರು ಬಾಜನರಾಗಿದ್ದಾರೆ.

ಈ ಪ್ರಶಸ್ತಿಯು 10,000 ನಗದು ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್ ಭಾನುಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮೈಸೂರ್ ಆನಂದ್ ಅವರು ಹಾಸ್ಯ ಕ್ಷೇತ್ರದಲ್ಲಿ ತನ್ನದೇ ಆದ ವಾಪುಮೂಡಿಸಿ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ ಅವರ ಈ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಇದು ಸಂಘವು ಕೊಡ ಮಾಡುತ್ತಿರುವ ಐದನೇ ಪ್ರಶಸ್ತಿಯಾಗಿದ್ದು ಇದುವರೆಗೂ ಸಾಹಿತ್ಯ ಕಲ್ಪತರು ಪ್ರಶಸ್ತಿಗೆ ಹಿರಿಯ ಕವಿಗಳಾದ ದುಂಡಿರಾಜ್ ಬಿಆರ್ ಲಕ್ಷ್ಮಣ್ ರಾವ್ ಕನ್ನಡ ಶಾಯರಿ ಕವಿ ಅಸಾದುಲ್ಲಾಬೇಗ್ ಧಟ್ ಅಂತ ಹೇಳಿ ಡಾಕ್ಟರ್ ನಾ ಸೋಮೇಶ್ವರ ಹಾಗೂ ಕವಿಯತ್ರಿ ಎಂ ಆರ್ ಕಮಲ ಅವರನ್ನು ಆಯ್ಕೆ ಮಾಡಲಾಗಿದೆ ಸಾಹಿತಿ ಎಚ್ಎಸ್ ಸತ್ಯನಾರಾಯಣ ಮತ್ತು ಸಾಹಿತಿ, ತುರುವೇಕೆರೆ ಪ್ರಸಾದ್ ನೇತೃತ್ವ ಸಮಿತಿಯ ಹಿರಿಯ ಚಿಂತಕ ಉಜ್ಜಜ್ಜಿ ರಾಜಣ್ಣ ಪ್ರಾಚಾರ್ಯ ಕೆಎನ್ ರೇಣುಕಯ್ಯ ಉಪನ್ಯಾಸಕ ಎಲ್ ಎಂ ವೆಂಕಟೇಶ್ ಶಿಕ್ಷಕರಾದ ಪಟ್ಟಾಭಿರಾಮು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆರ್ ಎಂ ಕುಮಾರಸ್ವಾಮಿ ಹಿರಿಯ ಪತ್ರಕರ್ತರಾದ ಸಂಜೆವಾಣಿ ರಮೇಶ್ ಸಂಯುಕ್ತ ಕರ್ನಾಟಕದ ಸತೀಶ್ ಯಲ್ಲದಬಾಗಿ ರವರನ್ನ ಒಳಗೊಂಡ ಆಯ್ಕೆ ಸಮಿತಿಯು ಶ್ರೀ ಮೈಸೂರ್ ಆನಂದ್ ರವರನ್ನು ಆಯ್ಕೆ ಮಾಡಿದ್ದು ಅವರಿಗೆ ಸಂಘವು ಪ್ರೀತಿ ಪೂರ್ವಕವಾದ ಅಭಿನಂದನೆ ಸಲ್ಲಿಸುತ್ತದೆ ಪ್ರಶಸ್ತಿ ಪ್ರಧಾನ ಸಮಾರಂಭವು ಮೇ 10ರ ಶನಿವಾರದಂದು ಸಂಜೆ 6:00ಗೆ ತಿಪಟೂರು ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಜರುಗಲಿದೆ ಸಮಾರಂಭದಲ್ಲಿ ಶಾಸಕರಾದ ಕೆ ಷಡಕ್ಷರಿ ಮಾಜಿ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ವಿಜಯವಾಣಿ ಸಂಪಾದಕರಾದ ಚೆನ್ನೇಗೌಡ ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ್ ಅಶ್ವಿನ್ ಗೌತಮ್ ಲೇಖಕಿ ಅನುವಾದಕಿ ಎಲ್ ಜಿ ಮೀರಾ ಹಾಗೂ ನಿವೃತ್ತ ಎಸಿಪಿ ಲೋಕೇಶ್ವರಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ




