ತಿಪಟೂರು: ನಗರದ ಗಾಂಧೀನಗರ ಪೊಲೀಸ್ ಚೌಕಿಯಲ್ಲಿ ತಿಪಟೂರು ಜನಸ್ಪಂದನಾ ಟ್ರಸ್ಟ್ ಹಾಗೂ ಸಂವಿಧಾನ ಸಂರಕ್ಷಣಾ ಪಡೆ ಸಹಯೋಗದಲ್ಲಿ 79ನೇ ಸ್ವತಂತ್ರ್ಯ ದಿನವನ್ನ ಜನಸ್ವಂತ್ರ್ಯೋತ್ಸವವನ್ನ ವಿಶಿಷ್ಠ ಹಾಗೂ ವಿನೂತನವಾಗಿ ಆಚರಿಸಲಾಯಿತು.

ಭಾರತೀಯರು ನಾವೇಲ್ಲರೂ ಒಂದೇ ಎನ್ನುವಂತೆ ಎಲ್ಲಾ ಬೇದ ಭಾವತೊರೆದು ಬದುಕುವುದೇ ನಿಜವಾದ ಸ್ವತಂತ್ರ್ಯ,79ನೇ ಸ್ವತಂತ್ರ್ಯ ದಿನನ್ನ ವಿಶಿಷ್ಠವಾಗಿ ಆಚರಿಸಬೇಕು.
ಕಾಯಕ ಸಂಸ್ಕೃತಿಯನ್ನು ನಮಿಸುವ ಮತ್ತು ಗೌರವಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ನನ್ನ ಆಲೋಚನೆ. ಇದಕ್ಕೆ ನಮ್ಮ ಜನಸ್ಪಂದನ ಟ್ರಸ್ಟ್ ಮತ್ತು ಸಮಾನ ಮನಸ್ಕ ಗೆಳೆಯರು ಜೀವ ತುಂಬಿದರು.ದೇಶ ಎಂದರೆ ಬರಿಯ ಭೂಪಟವಲ್ಲ, ಅಲ್ಲಿನ ಜನ ದೇಶದ ಸಂಪತ್ತು ಎಂದರೆ ಅದರ ಮಣ್ಣು, ನೀರು, ಕಲ್ಲು ಮಾತ್ರವಲ್ಲ ಅದರ ಜನಸಂಪತ್ತು ದೇಶಪ್ರೇಮ ಎಂದರೆ ಬರಿಯ ಜೈಕಾರ, ಘೋಷಣೆ, ಸೆಲ್ಯೂಟ್ ಅಲ್ಲ ಅದು ಕರ್ತವ್ಯ. ‘ಜವಾಬ್ದಾರಿ ನಡೆ ಮತ್ತು ಮುಖ್ಯವಾಗಿ ಕಾಯಕ ನಮ್ಮ ಜವಾಬ್ದಾರಿಗಳನ್ನು ಕಾಯಕದ ಮೂಲಕ ನಿಭಾಯಿಸಬೇಕು. ಆರ್ಥಿಕ ಶಕ್ತಿಗೆ ಮೂಲ ಆಧಾರ ಕಾಯಕ.ಆರ್ಥಿಕ ಶಕ್ತಿ ಬರುವುದು ಶ್ರಮ ಶಕ್ತಿಯಿಂದ. ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಮತ್ತು ಸೂಫಿಗಳ ಸಾಮರಸ್ಯದ ಕಾಯಕ ಸಂಸ್ಕೃತಿಯ ಮೂಲಕ ಸಮಾಜೋ-ಆರ್ಥಿಕ ಸ್ವಾವಲಂಬನೆ ಸಾಧಿಸಿ ತೋರಿಸಿದ ಉದಾಹರಣೆ ನಮ್ಮ ಚರಿತ್ರೆಯಲ್ಲಿಯೇ ಇದೆ. ಸ್ವಾತಂತ್ರ್ಯದ ನಿಜವಾದ ಸದ್ಬಳಕೆ ಎಂದರೆ ಅದು ಕಾಯಕ. ತನಗಾಗಿ, ತನ್ನವರಿಗಾಗಿ ಮತ್ತು ಸಮಾಜಕ್ಕಾಗಿ ಕಾಯಕ ಮಾಡುವ ಸಂಕಲ್ಪ ನಮ್ಮದಾದರೆ ದೇಶ ಸಬಲವಾಗುವುದು. ಶಸ್ತ್ರ, ಅಣ್ವಸ್ತ್ರ, ಸೈನ್ಯ, ಯುದ್ಧ… ಇವುಗಳ ಅಗತ್ಯ ಖಂಡಿತ ಇದೆ. ಗಾಂಧೀಜಿ ತೋರಿದ ಅಹಿಂಸಾ ಮಾರ್ಗ ಎಂದರೆ ಅನಗತ್ಯ ಕಿರಿ ಕಿರಿ, ತೊಂದರೆ ಮತ್ತು ದಬ್ಬಾಳಿಕೆ ಬೇಡ ಎಂದರ್ಥ. ಸಹಿಸಿಕೊಳ್ಳುವುದು ಎಂದಲ್ಲ. ಅದಕ್ಕೆ ಚಳವಳಿ ಎನ್ನುವ ಅಸ್ತ್ರ, ಪ್ರಯೋಗಿಸಿದರು. ಅದರ ಪರಿಣಾಮವಾಗಿ ಬ್ರಿಟಿಷ್ ತೋಪುಗಳು, ವಿಶ್ವಯುದ್ಧಗಳ ಕಾರ್ಮೋಡಗಳು ಕರಗಿದವು. ಸಾಮ್ರಾಜ್ಯಶಾಹಿ, ಸರ್ವಾಧಿಕಾರಿ ಧೋರಣೆ ಹಿಂದಕ್ಕೆ ಸರಿದು ಸ್ವಾತಂತ್ರ್ಯ ಮುನ್ನೆಲೆಗೆ ಬಂದಿತು. ಆ ಕ್ಷಣವೇ ಆಗಸ್ಟ್ 15. ಇದು ಕ್ಷಣ ಕ್ಷಣಕ್ಕೂ ನಮ್ಮ ಉಸಿರಾಗಿ, ಹಸಿರಾಗಿ ಇರುವುದು.
ಸಾಮ್ರಾಜ್ಯಶಾಹಿ, ಸರ್ವಾಧಿಕಾರಿ ಶಕ್ತಿ ಬಾಹ್ಯ ಮತ್ತು ಆಂತರಿಕ ಅಪಾಯ. ಈ ಅಪಾಯ ಎದುರಿಸುವುದು ಅಹಿಂಸಾ ಮಾರ್ಗದ ಮೂಲಕ ಚಳವಳಿ, ಜನಾಂದೋಲನದ ಮೂಲಕ ಸಾಧ್ಯ. ನಮ್ಮ ಹಲವು ಸ್ವಾತಂತ್ರ್ಯಗಳ ಅಂದರೆ ಬದುಕುವ ಸ್ವಾತಂತ್ರ್ಯ. ವಾಕ್ ಸ್ವಾತಂತ್ರ್ಯ ಧಾರ್ಮಿಕ ಸ್ವಾತಂತ್ರ್ಯ, ಕಾಯಕ ಸ್ವಾತಂತ್ಯ, ಒಬ್ಬ ವ್ಯಕ್ತಿ ಒಂದು ಮತದ ಸ್ವಾತಂತ್ರ… ಈ ಎಲ್ಲ ಸ್ವಾತಂತ್ರ್ಯಗಳ ಉಳಿಸಿಕೊಳ್ಳಲು ನಾವು ಮತ್ತೆ ಮತ್ತೆ ಜಾಗೃತರಾಗಲೇಬೇಕಿದೆ. ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ನಮ್ಮ ಸಂವಿಧಾನದಲ್ಲಿ ನೀಡಿದ ಅತ್ಯಂತ ಪ್ರಮುಖ ಸ್ವಾತಂತ್ರ್ಯ ವೋಟ್ ಅಂದರೆ ಮತದ ಅಧಿಕಾರ. ಈ ಅಧಿಕಾರವೇ ಇಂದು ಗಂಡಾಂತರದಲ್ಲಿದೆ. ಸರ್ಕಾರ, ಚುನಾವಣಾ ಆಯೋಗ ಇದರ ಬಗ್ಗೆ ಅಲಕ್ಷ ವಹಿಸುತ್ತಿದೆ. ಮತಪಟ್ಟಿಯಿಂದ ಲಕ್ಷಾಂತರ ಮತಗಳು ಗಾಯಬ್ ಆಗುತ್ತಿವೆ. ಲಕ್ಷಾಂತರ ನಕಲಿ ಮತದಾರರ ಹಸರುಗಳನ್ನು ಅಕ್ರಮವಾಗಿ ಸೇರಿಸಲಾಗುತ್ತಿದೆ. ಡೆಮಾಕ್ರಸಿ ಉಳಿಯಬೇಕು ಎಂದರೆ ಚುನಾವಣೆ ವ್ಯವಸ್ಥೆ ಇರಬೇಕು. ಮುಕ್ತ ಮತ್ತು ಸೂಕ್ತ ಕ್ರಮದ ಮತದಾನ ಸಾಧ್ಯ ಆಗಬೇಕು. ಇಲ್ಲದೆ ಹೋದರೆ ನಾವು ಗಳಿಸಿದ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ.
ಮತದ ಅಧಿಕಾರ, ವ್ಯವಸ್ಥೆ ಆಯ್ದುಕೊಳ್ಳುವ ಸ್ವಾತಂತ್ರ್ಯಗಳ ಕಸಿಯುವ, ಸಂವಿಧಾನ ಬದಲಿಸುವ ಹುನ್ನಾರಗಳು ಮತಗಳ್ಳತನದ ಮೂಲಕ ನಡೆಯುತ್ತಿರುವುದು ವಾಸ್ತವ. ಮತಗಳ್ಳತನ ತಡೆಯೋಣ,ಸಮಾಜದಲ್ಲಿ ಸಂವಿಧಾನ ವಿರೋಧಿ ಕೃತ್ಯಗಳು ಕಂಡಗ ಧ್ವನಿಎತ್ತಬೇಕು,ಪ್ರತಿಯೊಬ್ಬ ಭಾರತೀಯ ನಾವೇಲ್ಲರೂ ಒಂದು ಎನ್ನುವ ಭಾವನೆಯೊಂದಿಗೆ ಬದುಕು ಸಾಗಿಸೋಣ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಮಾತನಾಡಿ ಭಾರತೀಯರೆಲ್ಲ ಒಂದು ಎಂದು ಸೌರ್ಹಾತೆಯಿಂದ ಬದುಕಿದ್ದಾಗ ಸ್ವತಂತ್ರ್ಯದ ಅರ್ಥ ಸಾರ್ಥಕವಾಗುತ್ತದೆ,ಆದರೆ ಇತ್ತಿಚಿನ ದಿನಗಳಲ್ಲಿ ಮುಸಲ್ಮಾನರಲ್ಲಿ ಗುರಿಯಾಗಿಸಿ, ಮಿತ್ಯ ಬಿತ್ತಿವ,ಪ್ರಚೋದನ ಕಾರಿ ಘಟನೆಗಳು ನಡೆಯುತ್ತಿರುವುದನ್ನ ಕಾಣುತ್ತಿದ್ದೆ,ದೇಶ ದೇಶದ ಸ್ವತಂತ್ರ್ಯಕ್ಕಾಗಿ ಪ್ರತಿಯೊಂದು ಜನಸಮುದಾಯಮು ಹೋರಾಟ ನಡೆಸಿ ಜನಸಂಗ್ರಾಮವಾಗಿ ರೂಪುಗೊಂಡಕಾರಣ ನಮ್ಮ ಭವ್ಯಭಾರತದ ಸ್ವತಂತ್ರ್ಯದೊರೆತ್ತಿದೆ,ದೇಶಕ್ಕಾಗಿ ಹಲಾವಾರು ಮುಸ್ಮಲ್ಮಾನರು ಬಲಿದಾನ ಮಾಡಿದ್ದಾರೆ,ಆಲಿಗಡ ವಿಶ್ವವಿದ್ಯಾನಿಯ ಸ್ವತಂತ್ರ್ಯ ಜಾಗೃತಿಯ ಕೇಂದ್ರವಾಗಿತ್ತು ಎನ್ನುವುದನ್ನ ಯಾರು ಮರೆಯಬಾರದು,ನಮ್ಮ ಪೂರ್ವಜನರ ತ್ಯಾಗ ಬಲಿದಾನವನ್ನ ವ್ಯರ್ಥವಾಗಲು ಬಿಡಬಾರದು, ನಮ್ಮ ದೇಶ ಭಕ್ತಿಯನ್ನ ಯಾರು ಪ್ರಶ್ನೆ ಮಾಡಲು ಸಾಧ್ಯವಿಲ್ಲ,ನಮ್ಮ ದೇಶ ನಮಗೆ ತಾಯಿಗೆ ಸಮಾನ ನಮ್ಮದೇಶಾಭಿಮಾನವನ್ನ ಯಾರಿಗೂ ಎದೆಸೀಳಿ ತೋರುವ ಅಗತ್ಯವಿಲ್ಲ,ನಮ್ಮ ಭಾರತ ನಮ್ಮ ಹೆಮ್ಮ ಆದರೆ ಇತ್ತಿಚಿನ ದಿನಗಳಲ್ಲಿ ಮುಸಲ್ಮಾನರಿಗೆ ಕೋಮುವಾದಿಗಳು,ದೇಶದ್ರೋಹಿಗಳು ಎನ್ನುವ ಮಿತ್ಯಭಿತ್ತುವ ಕೆಲಸ ಕೆಲಸವನ್ನ ಮಾಡಲಾಗುತ್ತಿದ್ದು ಇಂತಹ ಕೋಮುವಾದಿಗಳ ವಿರುದ್ದ ದಲಿತರು ಮುಸಲ್ಮಾನರು ಸಂಘಟಿತ ಹೋರಾಟದ ಮಾಡಬೇಕು.ಮುಸಲ್ಮಾನರು ಹೆಚ್ಚು ಶಿಕ್ಷಿತರಾಗ ಬೇಕು.ಒಂದುಕೈಯಲ್ಲಿ ಕುರಾನ್ ಇನ್ನೋದು ಕೈಯಲ್ಲಿ ಡಾ//ಬಿ.ಆರ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಹಿಡಿದು ಹೋರಾಟಕ್ಕೆ ಹೊರಟರೇ ನಮ್ಮನ್ನ ತಡೆಯುವ ತಾಕ್ಕತ್ತು ಯಾರಿಗೂ ಇಲ್ಲ.ಮುಸಲ್ಮಾನರೂ ರಾಜಕೀಯದಿಂದ ದೂರವಿರಬಾರದು ರಾಜಕೀಯ ನಮ್ಮ ವ್ಯವಸ್ಥೆ ಬದಲಾವಣೆಯ ಕೀಲಿಕೈ ನಮ್ಮ ತಾಯ್ನೆಲಕ್ಕೆ ಪ್ರೀತಿತೋರಿಸೋಣ ಈದೇಶ ನಮ್ಮದು ಈ ಭೂಮಿ ನಮ್ಮದು. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕಾಡಶೆಟ್ಟಿಹಳ್ಳಿ ಸತೀಶ್.ಸಂವಿಧಾನ ಸಂರಕ್ಷಣಾ ಪಡೆ ಅಧ್ಯಕ್ಷ ಲೋಕೇಶ್.ಅಲ್ಲಾಭಕ್ಷು.ಸಾದತ್.ಮುಂತ್ತಾದವರು ಉಪಸ್ಥಿತರಿದರು .
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಶ್ರಮಸೇವಾನಿಗಳನ್ನ ಸನ್ಮಾನಿಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ







