Spread the love

ತಿಪಟೂರು:ವಸತಿ ರಹಿತರು ಹಾಗೂ ನಿವೇಷನ ರಹಿತರಿಗೆ ಸರ್ಕಾರ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ವತಿಯಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿಪತ್ರಸಲ್ಲಿಸಲಾಯಿತು.


ಪ್ರತಿಭಟನಾನಿರತರಿಂದ ತಹಸೀಲ್ದಾರ್ ಮೋಹನ್ ಕುಮಾರ್ ಮನವಿಪತ್ರ ಸ್ವೀಕರಿಸಿದರು.
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ದಸಂಸ ಜಿಲ್ಲಾಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ತಾಲ್ಲೋಕಿನಲ್ಲಿ ನಿವೇಷನ ರಹಿತರಿಗೆ ನಿವೇಷನ ನೀಡಿ ದಶಕಗಳು ಕಳೆದಿದ್ದು‌.ಬಡವರು ವಾಸಮಾಡಲು ಸೂಕ್ತವಾದ ಮನೆಇಲ್ಲದೆ .ಮನೆನಿರ್ಮಾಣ ಮಾಡಲು ನಿವೇಷನಗಳಿಲ್ಲದೆ ಪರದಾಡುವಂತ್ತಾಗಿದೆ.ಬಡವರ ಹೆಸರೇಳಿ ಅಧಿಕಾರಕ್ಕೆ ಬಂದ ಸರ್ಕಾರ ಬಡವರನ್ನ ನಿರ್ಲಕ್ಷ್ಯ ಮಾಡಿದೆ.ತಾಲ್ಲೋಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ನಿವೇಷನ ನೀಡಲು ಜಮೀನು ಗುರ್ತಿಸಿದ್ದು.ತಾಲ್ಲೋಕು ಆಡಳಿತ ಬಡವರಿಗೆ ನಿವೇಷನ ಹಂಚಿಕೆ ಮಾಡದೆ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ.ಕಸಬಾ ಹೋಬಳಿ ಲಿಂಗದಹಳ್ಳಿ ಸೇರಿದಂತೆ ನಗರಕ್ಕೆ ಒಂದಿಕೊಂಡ ಹಲವೆಡೆ ನಿವೇಷನ ನೀಡಲು ಜಾಗಗುರ್ತಿಸಿರುವ ಆಡಳಿತ ನಿವೇಷನ ವಿಂಗಡಣೆ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು.ನಿವೇಷನ ನೀಡಲು ನಿರ್ಲಕ್ಷ್ಯವಹಿಸಿದರೆ ಉಗ್ರಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.


ದಲಿತ ಮುಖಂಡ ವಕೀಲ ವೆಂಕಟೇಶ್ ಮಾತನಾಡಿ ಬಡವರಿಗೆ ನಿರ್ಗತಿಕರಿಗೆ ನಿವೇಷನ ಹಾಗೂ ಮನೆಇಲ್ಲದವರಿಗೆ ಮನೆ ನೀಡಬೇಕಾಗಿರುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ,ಪ್ರಾಣಿ ಪಕ್ಷಿಗಳು ಸಹ ತಾವು ವಾಸಮಾಡಲು ಸುರಕ್ಷಿತವಾದ ಗೂಡುಕಟ್ಟಿಕೊಂಡಿರುತ್ತವೆ.ಆದರೆ ಮನುಷ್ಯನಿಗೆ ನಿವೇಷನ ಹಾಗೂ ವಸತಿ ನೀಡದೆ ಪ್ರಾಣಿಗಳಿಗಿಂತ ಕಡೆಯಾಗಿ ಸರ್ಕಾರಗಳು ನೋಡುತ್ತಿವೆ‌,ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಕೂಡಲೇ ನಿವೇಷನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕಾಗಿ ಒತ್ತಾಯಿಸಿದರು.
ದಸಂಸ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇರ್ಪಾನ್ ಮಾತನಾಡಿ ನಗರಸಭೆಯಿಂದ ನಿವೇಷನಕ್ಕಾಗಿ ಅನೇಕ ಭಾರಿ ಅರ್ಜಿ ಆಹ್ವಾನ ಮಾಡಲಾಗಿದೆ, ಅರ್ಜಿಸಲ್ಲಿಸಿರುವ ಕುಟುಂಬಗಳು ನಿವೇಷನಕ್ಕಾಗಿ ಪರದಾಡುತ್ತಿದ್ದಾರೆ. ಲಿಂಗದಹಳ್ಳಿ ತಾಲ್ಲೋಕು ಆಡಳಿತ ವಸತಿ ಉದೇಶಕ್ಕೆ ಗುರುತು ಮಾಡಿರುವ ಜಾಗ ಕೋರ್ಟ್ ನಲ್ಲಿದೆ ಎಂದು ಉತ್ತರ ನೀಡುತ್ತಿದ್ದಾರೆ.ನಗರದ ಬಹುತೇಕ ಕಡೆಗಳಲ್ಲಿ ಬಡವರು, ಅಲ್ಪಸಂಖ್ಯಾತರು,ದಲಿತರು ವಾಸಮಾಡಲು ಮನೆಇಲ್ಲದೆ,ಪರದಾಡುತ್ತಿದ್ದಾರೆ. ಸರ್ಕಾರ ಬಡವರಿಗೆ ನಿವೇಷನ ನೀಡಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ದಸಂಸ ತಾಲ್ಲೋಕು ಸಂಚಾಲಕ ಹರಚನಹಳ್ಳಿ ಮಂಜುನಾಥ್.ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ.ಶಂಕರಪ್ಪ.ಚಂದ್ರಯ್ಯ.ಶೆಟ್ಟಿಹಳ್ಳಿ ಶಿವಣ್ಣ ಮುಖಂಡರಾದ ಜುಬೇರ್. ಖಲೀಲ್.ಇಮ್ರಾನ್.ಸುಹೇಲ್.ಕರೀಂ ಸಾಬ್.ಫಾತಿಮಾ.ಅನ್ವರ್.ಜಬೀನಾ.ಸಲ್ಮಾ.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!