ತಿಪಟೂರು: ಕಲ್ಪತರು ನಾಡಹಬ್ಬ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಕನ್ನಡ ನಾಡಿನ ವಿಶಿಷ್ಠ ಗಣೇಶ ಉತ್ಸವಗಳಲ್ಲಿ ಒಂದು, ಮೈಸೂರು ದಸರಾ.ಬೆಂಗಳೂರು ಕರಗದಂತೆ ಪ್ರಖ್ಯಾತಿ ಪಡೆದಿರುವ ಕಲ್ಪತರು ನಾಡಹಬ್ಬ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವ. ಶತಮಾನೋತ್ಸವದ ವಸ್ತಿಲಿನಲ್ಲಿ ಇರುವ ಗಣೇಶೋತ್ಸವ. ಜಾತ್ರೆ ಮೆರಗು ಎಚ್ಚಿಸಲು ಕಲ್ಪತರು ನಾಡಹಬ್ಬ ಕಲ್ಪೋತ್ಸವ ಜೊತೆಗೂಡಿದೆ.ಈ ಭಾರೀ ಪ್ರತಿ ಬಾರಿಗಿಂತಲು,ಹೆಚ್ಚಾಗಿ ಪ್ಲೆಕ್ಸ್ ಹಾಕಿಸಲು.ಯುವಕರು ಪೈಪೋಟಿಗೆ ಇಳಿದಂತೆ ಕಾಣುತ್ತಿದೆ.ಯುವಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ,ಕೆಪಿಸಿಸಿ ಸದಸ್ಯ ವಿ.ಯೋಗೇಶ್.ಡಾಕ್ಟರ್ ಶ್ರೀಧರ್ .ಕೆ.ಟಿ ಶಾಂತಕುಮಾರ್ ಹಾಗೂ ಸೇರಿದಂತೆ ಅನೇಕ ನಾಯಕರು ಹಬ್ಬ ಹರಿದಿನ ಜಾತ್ರೆಗಳಲ್ಲಿ ಪ್ಲೆಕ್ಸ್ ಹಾಕಿಸಿ ಶುಭಕೋರುವುದನ್ನ ನೋಡುತ್ತಿದ್ದರು.

ತಾಲ್ಲೋಕಿನ ಜನರಿಗೆ ವಿಶೇಷ ಎಂಬಂತೆ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಹಾಗೂ ಕಲ್ಪೋತ್ಸವದ ಅಂಗವಾಗಿ ಕಾಂಗ್ರೇಸ್ ಯುವನಾಯಕ ನಿಖಿಲ್ ರಾಜಣ್ಣ ತಮ್ಮ ದೊಡ್ಡಪ್ಪ ಶಾಸಕ ಕೆ.ಷಡಕ್ಷರಿಯವರೊಂದಿಗೆ ಪ್ಲೆಕ್ಸ್ ಹಾಕಿಸಿ ಗಮನ ಸೆಳೆಯುತ್ತಿದರೆ.ಎಂದೂ ಪ್ಲೆಕ್ಸ್ ಬ್ಯಾನರ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪುತ್ರ ವಿಶ್ವದೀಪ್ ತಮ್ಮ ತಂದೆ ಭಾವಚಿತ್ರದೊಂದಿಗೆ ಪ್ಲೆಕ್ಸ್ ಹಾಕಿರುವ ಜೊತೆಗೆ ಬಿಜೆಪಿ ಹಲವಾರು ಬಿಜೆಪಿ ನಾಯಕರ ಪೋಟೊ ಹಾಕಿ,ಪ್ಲೆಕ್ಸ್ ಅಳವಡಿಸಿರುವುದು,ತಾಲ್ಲೋಕಿನಲ್ಲಿ ಹಲವಾರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.ಬಿಜೆಪಿಯ ಯುವನಾಯಕನ ಪಟ್ಟಕ್ಕೆ ವಿಶ್ವದೀಪ್ ಮುಂದಾಗಿದ್ದಾರ ಎಂಬ ಗಸುಗುಸು ಮಾತುಗಳು ಚರ್ಚೆಗೆ ಹಿಂಬುನೀಡಿವೆ.ಒಂದೆಡೆ ಕಾಂಗ್ರೇಸ್ ಜಿಲ್ಲಾ ಯುವ ಅಧ್ಯಕ್ಷರಾಗಿ ನಿಖಿಲ್ ರಾಜಣ್ಣ ತಮ್ಮ ದೊಡ್ಡಪ್ಪನ ಉತ್ತರಾಧಿಕಾರಿ ಎಂದು ಬಿಂಬಿಸಲು ಹೊರಟಿದ್ದಾರೆ ಎನ್ನೋ ಮಾತುಗಳ ನಡುವೆಯೇ ಜಾತ್ರೆ ಅಂಗವಾಗಿ ವಿಶ್ವದೀಪ್ ಅಳವಡಿಸಿರುವ ಪ್ಲೆಕ್ಸ್ ಗಳು ವಿಶ್ವದೀಪ್ ತಮ್ಮ ತಂದೆಯ ರಾಜಕೀಯ ಉತ್ತರಾಧಿಕಾರಿ ಆಗಲು ಹೊರಟಿದ್ದಾರ..? ಚರ್ಚೆಗಳು ರಾಜಕೀಯವಲಯದಲ್ಲಿ ದಟ್ಟವಾದ ಚರ್ಚೆಗಳು ಹುಟ್ಟಿಕೊಂಡಿವೆ. ಯೋಗ ಯೋಗ್ಯತೆ ಸಂಪಾದಿಸಿದರೆ ರಾಜಕೀಯದಲ್ಲಿ ಯಾವುದು ಸಾಧ್ಯವಿಲ್ಲ ಅನೋದು,ತಾಲ್ಲೋಕು ಹಾಗೂ ರಾಜ್ಯದ ಅನೇಕ ರಾಜಕೀಯ ಬೆಳವಣಿಗೆಗಳನ್ನ ಕಾಣಬಹುದಾಗಿದೆ. ಒಟ್ಟಾರೆ ಜಾತ್ರೆಯ ಅಂಗವಾಗಿ ಆರಂಭವಾದ ಪ್ಲೆಕ್ಸ್ ರಾಜಕಾರಣ.ಕಾರ್ಯಕರ್ತರ ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿರುವುದಂತು ಸತ್ಯ.
ವರದಿ:ಮಂಜುನಾಥ್ ಹಾಲ್ಕುರಿಕೆ







