Spread the love

ತಿಪಟೂರು:ಭಾರತಕ್ಕೆ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಿದೆ ಹಲವಾರು ಜಾತಿ ಮತ ಭಾಷೆ ಪಂಥಗಳ ಆಚರಣೆಯಲ್ಲಿ ಇರುವ ಭಾರತಕ್ಕೆ ಸರ್ವರೂ ಅನುಸರಿಸ ಬೇಕಾದ ಗ್ರಂಥವೇ ಭಾರತ ಸಂವಿಧಾನವಾಗಿದೆ ಎಂದು ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ತಿಳಿಸಿದರು.


ನಗರದ ತಾಲ್ಲೋಕು ಆಡಳಿತ ಸೌಧದಲ್ಲಿ ಆಯೋಜಿಸಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದಲ್ಲಿ ಸಂವಿಧಾನ ಶ್ರೇಷ್ಠ ಗ್ರಂಥ,ಬಾಬಾ ಸಾಹೇಬ್ ಡಾ//ಬಿ.ಆರ್ ಅಂಬೇಡ್ಕರ್ ರವರು ತಮ್ಮ ಸುದೀರ್ಘ ವಿದ್ವಾತಿನ ಮೂಲಕ ವಿಶ್ವ ಶ್ರೇಷ್ಠವಾದ ಲಿಖಿತ ಸಂವಿಧಾನ ನೀಡಿದ್ದಾರೆ.ನಾವು ನಮ್ಮ ಸಂವಿಧಾನವನ್ನ ಅಧ್ಯಾಯನ ಮಾಡಿ ಸಂವಿಧಾನದ ನಿಯಮ ಪಾಲನೆ ಮಾಡಿದರೆ ಅದುವೇ ನಾವು ಸಂವಿಧಾನಕ್ಕೆ ಹಾಗೂ ದೇಸದಕ್ಕೆ ನೀಡುವ ಗೌರವ ಎಂದು ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ತಿಳಿಸಿದರು.


ಎಸ್.ವಿ.ಪಿ ಕಾಲೇಜು ಪ್ರಾಚಾರ್ಯ ಕೆ.ಎಂ ರೇಣುಕಯ್ಯ ಮಾತನಾಡಿ ನಮ್ಮ ದೇಶಕ್ಕೆ ಸಂವಿಧಾನವೇ ಶಕ್ತಿ,ಸ್ವತಂತ್ರ ಭಾರತಕ್ಕೆ ನಿಜವಾದ ದಿಕ್ಕನ ನೀಡಿದ ಗ್ರಂಥವನ್ನ ದೇಶದ ಪ್ರತಿಯೊಬ್ಬ ನಾಗರೀಕ ಅಭ್ಯಾಸ ಮಾಡಬೇಕು.ಸಂವಿಧಾನದ ಆಶಯದಂತೆ ನಡೆಯಬೇಕು ಎಂದು ತಿಳಿಸಿದರು
ತಿಪಟೂರು ತಹಸೀಲ್ದಾರ್ ಮೋಹನ್ ಕುಮಾರ್ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು
ಕಾರ್ಯಕ್ರಮದಲ್ಲಿ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್.ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ತ್ರಿವೇಣಿ, ಪಿಡಬ್ಲೂಡಿ ಅಭಿಯಂತರರಾದ ನಟರಾಜ್.ಜಿ.ಪಂ ಆಭಿಯಂತರಾದ ನಾಗೇಂದ್ರ.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್. ಮುಖಂಡರಾದ ಬಜಗೂರು ಮಂಜುನಾಥ್.ಪೆದ್ದಿಹಳ್ಳಿ ನರಸಿಂಹಯ್ಯ.ಯಗಚೀಕಟ್ಟೆ ನರಸಿಂಹಮೂರ್ತಿ.ಶಿವಕುಮಾರ್ ಮತ್ತಿಘಟ್ಟ .ಪ್ರಭುಸ್ವಾಮಿ.ಈಚನೂರು ನರಸಿಂಹಮೂರ್ತಿ.ಹರೀಶ್ ಅಂಜನಮೂರ್ತಿ.ಚಂದ್ರಶೇಖರ್ ಬಳುವನೇರಲು.ಶಿವು ಉಗ್ರಯ್ಯ.ಸಿದ್ದನಾಯಕ್.ಶಿವಲಿಂಗಯ್ಯ.ಗೋವಿಂದರಾಜು.ಲಿಂಗರಾಜು ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!