Spread the love

ತಿಪಟೂರು , ಡಿ .9 – ತಾಲ್ಲೂಕು ನೊಣವಿನಕೆರೆಹೋಬಳಿಕೋಡಿಹಳ್ಳಿ ಭಗವತಿ ಭಗಮಾಲಿನಿ ದೇವಾಲಯ ಸೇರಿದಂತೆ ರಾಜ್ಯದ ವಿವಿಧೆಡೆ ದೇವಾಲಯಗಳಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳತನಮಾಡುತ್ತಿದ್ದ,ಇಬ್ಬರು ಆರೋಪಿಗಳನ್ನುಎಡೆಮುರಿ ಕಟ್ಟುವಲ್ಲಿ ತಿಪಟೂರು ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖ‌ ನೇತೃತ್ವದ ತಂಡ ಯಶಸ್ವಿಯಾಗಿದೆ.

ಸುಮಾರು 37ಲಕ್ಷ ಮೌಲ್ಯದ ಚಿನ್ನ ಮತ್ತುಬೆಳ್ಳಿಆಭರಣವನ್ನುವಶಪಡಿಸಿಕೊಂಡಿದ್ದಾರೆ .ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿಯ ನಿವಾಸಿ ಯೋಗೀಶ್ ( 28 ) ಹಾಗೂನವೀನ್ ( 28 )ಎಂಬುವರೇ ಬಂಧಿತ ಆರೋಪಿಗಳು .ಬಂಧಿತ ಆರೋಪಿಗಳಿಂದ 30 ಲಕ್ಷ ರೂ . ಮೌಲ್ಯದ 20 ಕೆ.ಜಿ. ಬೆಳ್ಳಿ , 3.63ಲಕ್ಷರೂ .ಬೆಲೆಯಚಿನ್ನಾಭರಣ ಹಾಗೂ 4 ಲಕ್ಷ ರೂ . ಮೌಲ್ಯದ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು37ಲಕ್ಷರೂ .ಬೆಲೆಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . ತಾಲ್ಲೂಕಿನ ನೊಣವಿನಕೆರೆಯ ಕೋಡಿಹಳ್ಳಿ ಗ್ರಾಮದ ಭಗವತಿ ಭಗಮೂಲನಿ ದೇವಾಲಯದಲ್ಲಿ ದೇವರವಿಗ್ರಹದಮೇಲಿದ್ದಸುಮಾರು 14.5 ಕೆ.ಜಿ. ತೂಕದ ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದವು . ಈ ಕಳ್ಳತನ ಪ್ರಕರಣ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿದಾಖಲಾಗಿತ್ತು .ಈ ಕಳ್ಳತನಪ್ರಕರಣದತನಿಖೆಯನ್ನು ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಕೈಗೊಂಡನೊಣವಿನಕೆರೆ ಪೊಲೀಸರು ಕಾರ್ಯಾಚರಣೆನಡೆಸಿಸದರಿಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ .ಬಂಧಿತಆರೋಪಿಯೋಗೀಶ್ ದೇವರ ವಿಗ್ರಹಮೂರ್ತಿಗಳನ್ನು ತಯಾರು ಮಾಡುತ್ತಿದ್ದನು . ಮತ್ತೋರ್ವ ಆರೋಪಿ ನವೀನ್ ಹೊಸದುರ್ಗ ತಾಲ್ಲೋಕು ಶ್ರೀರಾಮಪುರದಲ್ಲಿ ಬೇಕರಿನಡೆಸುತ್ತಿದ್ದನು .ಇವರಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಇನ್ನು ಅನೇಕ ದೇವಾಲಯಗಳಲ್ಲಿ ಕಳ್ಳತನಮಾಡಿರುವುದು ಬಯಲಾಗಿದೆ .
ಸದರಿ ಆರೋಪಿಗಳು ಅರಸೀಕೆರೆ ತಾಲ್ಲೂಕಿನ ಜಿ . ಶಂಕರನಹಳ್ಳಿ ದೇವಾಲಯದಲ್ಲಿ 4 ಕೆ.ಜಿ. ಬೆಳ್ಳಿ , 10ಗ್ರಾಂಚಿನ್ನ ,ಬೇಲೂರಿನಬಂಟೇನಹಳ್ಳಿದೇವಾಲಯ ,ಶ್ರೀರಂಗಪಟ್ಟಣದ ಕೆ.ಬೆಟ್ಟಹಳ್ಳಿ ದೇವಾಲಯ ಹಾಗೂ ಕುದೂರು ಪಟ್ಟಣದಲ್ಲಿ ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿರುವುದಾಗಿಪೊಲೀಸ ವಿಚಾರಣೆವೇಳೆಒಪ್ಪಿಕೊಂಡಿದ್ದಾರೆ .ದೇವಾಲಯಗಳಲ್ಲಿ ಕಳವು ಮಾಡಿದ ಚಿನ್ನ ಹಾಗೂ ಬೆಳ್ಳಿಯಿಂದ ಬೇರೆ ದೇವಾಲಯಗಳ ದೇವರುಗಳಿಗೆ ಆರ್ಡರ್ ಪಡೆದು ವಡವೇ ಹಾಗೂ ದೇವರಮೂರ್ತಿಗಳನ್ನ ಮಾಡಿಕೊಡುತ್ತಿದ್ದ ಎನ್ನಲಾಗಿದೆ.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ , ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್ , ಗೋಪಾಲ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಜಯಲಕ್ಷಮ್ಮ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ನೊಣವಿನಕೆರೆ ಪೊಲೀಸ್ ಸಬ್‌ ಇನ್ಸ್‌ ಪೆಕ್ಟರ್ ಸಿಬ್ಬಂದಿಗಳಾದಬಸವರಾಜು ,ಸಿಬ್ಬಂದಿಗಳಾದ ಗೋಪಾಲ್ , ರಂಗನಾಥ್ , ಚೇತನ್ , ಮಲ್ಲಿಕಾರ್ಜುನಯ್ಯ ರವರನ್ನೊಳಗೊಂಡ ತಂಡ ಈ ಕಳ್ಳತನ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿಶ್ರಮಿಸಿದೆ .ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!