ತಿಪಟೂರು:ನಗರದ ಗಾಂಧೀನಗರಕ್ಕೆ ಹೊಂದಿಕೊಂಡಂತ್ತೆ ಇರುವ ಹೊಸಳ್ಳಿ ಅಣ್ಣಯ್ಯ ನಗರದ ಬಳಿ ಯುವಕರ ವೀಲಿಂಗ್ ಮಾಡಿ ರಸ್ತೆ ಬದಿ ತೆರಳುತ್ತಿದ್ದ ಕುರಿ ಹಿಂಡಿಗೆ ನುಗ್ಗಿದ ಪರಿಣಾಮ ಕಾಳೇಗೌಡ ಎಂಬುವವರಿಗೆ ಸೇರಿದ 3ಕುರಿ ಮೃತಪಟ್ಟಿದ್ದು,7ಕುರಿಗಳು ಗಾಯಗೊಂಡಿವೆ.
ವೇಗವಾಗಿ ತ್ರಿಬಲ್ ರೈಡಿಂಗ್ ನಲ್ಲಿ ವೀಲಿಂಗ್ ಮಾಡಿಕೊಂಡು ಹೋದ ಯುವಕರು ಕುರಿಹಿಂಡಿಗೆ ಗುದ್ದಿದ ಪರಿಣಾಮ ಕುರಿಗಳು ಮೃತಪಟ್ಟಿವೆ .

ಪುಂಡರ ವೀಲಿಂಗ್ ಚಟಕ್ಕೆ ಕುರಿಗಾಯಿಗೆ ಸುಮಾರು 1.5ಲಕ್ಷ ರೂಪಾಯಿ ನಷ್ಟವಾಗಿದ್ದು.ಬಡಕುರಿಗಾಯಿ ಬದುಕು ಬೀದಿಗೆ ಬಿದ್ದಿದೆ.
ಬೈಕ್ ವೀಲಿಂಗ್ ಮಾಡಿಕೊಂಡು ಹೋಗಿ ಕುರಿಹಿಂಡಿಗೆ ಗುದ್ದಿ ಕೆಳಗೆ ಬಿದ್ದ 22ವರ್ಷ ವಯಸ್ಸಿನ ಶಾಹಿದ್.ಮತ್ತು 22ವರ್ಷ ವಯಸ್ಸಿನ ಕೈಫ್ ಕೆಳಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಕುರಿಗಳನ್ನ ತಿಪಟೂರು ಗ್ರಾಮಾಂತರ ತಂದ ಕುರಿಗಾಯಿ ಪರಿಹಾರ ನೀಡಿ ನ್ಯಾಯದೊರಕಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿನೀಡಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ








