ತಿಪಟೂರು:ನಗರದ ಹಳೇಪಾಳ್ಯ ಗ್ರಾಮದ ಹೊಸಕೆರೆ ಶ್ರೀ ಮಹಾಕ್ಷ್ಮಿ ದೇವಿ ದೇವಾಲಯದ 25 ವರ್ಷದ ರಜತ ಮಹೋತ್ಸವ ಮಹಾಕುಂಭಾಭಿಷೇಕ.ಶ್ರೀಮಹಾಲಕ್ಷ್ಮಿ ಅಮ್ಮನವರು ಹಾಗೂ ಶ್ರೀ ನಾಗಲಕ್ಷ್ಮಿ ಮಾಸ್ತಮ್ಮ ದೇವಿಯವರಿಗೆ ವಜ್ರಾಂಗಿ ಸಮರ್ಪಣೆ ಮತ್ತು ಶ್ರೀ ನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಅಕ್ಟೋಬರ್ 27ರ ಸೋಮವಾರದಿಂದ 29ರ ಬುಧವಾರದ ವರೆಗೆ ನಡೆಯಲ್ಲಿದೆ.

ಹಳೇಪಾಳ್ಯ ಹೊಸಕೆರೆ ಶ್ರೀ ಮಹಾಲಕ್ಷ್ಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಆದಿಶಕ್ತಾತ್ಮಕ ಹೊಸಕೆರೆ ಶ್ರೀ ಮಹಾಲಕ್ಷ್ಮಿ ದೇವಾಲಯ ಟ್ರಸ್ಟ್ (ರಿ) ಹಳೇಪಾಳ್ಯ ಪ್ರಧಾನ ಕಾರ್ಯದರ್ಶಿ ಆರ್. ರಂಗನಾಥ್ ಮಾತನಾಡಿ ಹಳೇಪಾಳ್ಯ ಹೊಸಕೆರೆ ಶ್ರೀ ಮಹಾಲಕ್ಷ್ಮಿ ದೇವಾಲಯದ 25ವರ್ಷದ ರಜತ ಮಹೋತ್ಸವದ ಅಂಗವಾಗಿ ಮಹಾಕುಂಭಾಭಿಷೇಕ,ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ನಾಗಲಕ್ಷ್ಮಿ ಮಾಸ್ತಮ್ಮ ದೇವಿಯವರಿಗೆ ವಜ್ರಾಂಗಿ ಸಮರ್ಪಣೆ. ಟಿಟಿಡಿ ಶ್ರೀ ನಿವಾಸ ಕಲ್ಯಾಣೋತ್ಸವ ಆಯೋಜನೆ ಮಾಡಲಾಗಿದೆ.

ದಿನಾಂಕ 27ರಂದು ದೇವಾಲಯ ಪ್ರವೇಶ .ಹೋಮ, ಶ್ರೀಲಲಿತ ಸಹಸ್ರನಾಮ ಕುಂಕುಮಾರ್ಚನೆ,ವಿಷ್ಣು ನಾಮಸಹಸ್ರಾರ್ಚನೆ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಡೆಯಲಿವೆ.
ದಿನಾಂಕ 28.ರಂದು ಹಂಪಿ ಹೇಮಾಕೂಟ ಗಾಯಿತ್ರಿ ಪೀಠ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿಗಳು.ಕೆರೆಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು.ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯಯೋಗೇಶ್ವರ ಮಹಾಸ್ವಾಮೀಗಳ ಉಪಸ್ಥಿತಿಯಲ್ಲಿ ಮಹಾಪೂರ್ಣಾಹುತಿ, ಬ್ರಹ್ಮಕಳಶ ಮಹಾಕುಂಭಾಭಿಷೇಕ, ಶ್ರೀಮಹಾಲಕ್ಷ್ಮಿ ಹಾಗೂ ಶ್ರೀ ನಾಗಲಕ್ಷ್ಮಿ ಮಾಸ್ತಮ್ಮ ದೇವಿಯವರಿಗೆ ವಜ್ರಾಂಗಿ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು,ದಿನಾಂಕ 29ರಂದು ಶ್ರೀದೇವಿ.ಭೂದೇವಿ ಸಮೇತ ಶ್ರೀವೆಂಕಟೇಶ್ವರ ಸ್ವಾಮಿ ಊರಾಭಿಷೇಕ ಸೇವೆ.ತೋಮುಲಸೇವೆ,ಶ್ರೀ ಅಲಮೇಲು ಮಂಗಮ್ಮ,ಶ್ರೀಭೂ ಪದ್ಮವತಿ ಶ್ರೀವಾರಿಯವರ ತಿರು ಕಲ್ಯಾಣೋತ್ಸವ ಹಾಗೂ ಮಹಾಅನ್ನ ಸಂತರ್ಪಣೆ ನಡೆಯಲ್ಲಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ತಿಳಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಮಾಜಿ ನಗರಸಭಾ ಉಪಾಧ್ಯಕ್ಷ ಮಂಜುನಾಥ್.ಹೆಚ್.ಆರ್ ಜಗದೀಶ್.ಎಸ್.ಗಿರೀಶ್ ಕುಮಾರ್.ಪುರುಷೋತ್ತಮ್ ಹೆಚ್.ಆರ್. ಅನಂತ್.ನಾಗರಾಜು.ಧನಂಜಯ್ ಹೆಚ್.ಪಿ.ಮೋಹನ್ ಹೆಚ್.ಎನ್.ಲೋಕೇಶ್.ಆನಂದ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









