Spread the love

ತಿಪಟೂರು:ತಾಲ್ಲೋಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಯವಾಣಿ ಸಂಪರ್ಕಿಸಲು ತಹಸೀಲ್ದಾರ್ ಮೋಹನ್ ಕುಮಾರ್ ಮನವಿ ಮಾಡಿದ್ದಾರೆ

13.08.2025 ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯಮ್ಮ ಸಪ್ಟೆಂಬರ್ -22 ರಿಂದ ಅಕ್ಟೋಬರ್ -7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ . ಅದರಂತೆ ತಿಪಟೂರು ತಾಲೂ ನಲ್ಲಿ 597 ಗಣತಿದಾರರು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ . ಆದಾಗ ತಿಪಟೂರು ತಾಲೂಕಿನಲ್ಲಿ ಯಾವುದೇ ಗ್ರಾಮ / ಹಟ್ಟಿ / ಕಾಲೋನಿ / ಬೀದಿಗಳಲ್ಲಿ ಕುಟುಂಬದಲ್ಲಿ ಸಮೀಕ್ಷೆ ನಡೆಯದೇ ಇದ್ದಲ್ಲಿ ಅಂತಹ ವಿವರಗಳನ್ನು ದಿ : 07.10.2025 ರ ಒಳಗೆ ಕೆಳಕಂಡ ತಿಪಟೂರು ತಾಲ್ಲೂಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಹಾಯವಾಣಿಯನ್ನು ಸಂಪರ್ಕಿಸಿ , ಮಾಹಿತಿ ಒದಗಿಸುವುದು ಅಥವಾ ತಾಲ್ಲೂಕು ಆಡಳಿತದ ಗಮನಕ್ಕೆ ತರುವುದು ಹಾಗೂ ಸಾರ್ವಜನಿಕರು ತಮ್ಮ ಸಮೀಕ್ಷೆಯನ್ನು ತಾವೇ ಮಾಡಲು ಇಚ್ಚಿಸಿದಲ್ಲಿ ಕೆಳಕಂಡ ಅಂತರ್ಜಾಲ ಕೊಂಡಿ ಬಳಸಿ ಸಮೀಕ್ಷೆಯಲ್ಲಿ ಸ್ವ – ಇಚ್ಛೆಯಿಂದ ಭಾಗವಹಿಸಿ , ವಿವರಗಳನ್ನು ಭರ್ತಿ ಮಾಡಿ , ಸಮೀಕ್ಷಾ ಐಡಿ / ಅಪ್ಲಿಕೇಷನ್ ಐಡಿಯನ್ನು ಅಂಟಿಸಿರುವ ಯುಹಚ್.ಐ.ಡಿ ಸಿಕ‌ ಮೇಲೆ ನಮೂದಿಸಬೇಕಾಗಿ ಕೋರಲಾಗಿದ್ದು ಹೆಚ್ಚಿನ ಮಾಹಿತಿಗಾಗಿ
ಸಹಾಯವಾಣಿ ಸಂಖ್ಯೆ : 08134-200614
9449974590 9742687662 ಸಂಪರ್ಕಿಸಲು ತಹಸೀಲ್ದಾರ್ ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!