ತಿಪಟೂರು:ತಿಪಟೂರು ತಾಲ್ಲೋಕಿನಲ್ಲಿ ನಡೆದ ಕಾಮಗಾರಿಯೊಂದಕ್ಕೆ ಬಿಲ್ ಮಾಡಲು ಲಂಚ ಪಡೆಯುವ ವೇಳೆ ತುಮಕೂರು ಜಿಲ್ಲಾಪಂಚಾಯ್ತಿ ತಿಪಟೂರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪ್ರಥಮದರ್ಜೆ ಗುತ್ತಿಗೆದಾರ ಸುನಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತರು ಅಧಿಕಾರಿಗೆ ಬಲೆ ಬೀಸಿದ್ದು ತುಮಕೂರು ನಗರದಲ್ಲಿ ಲಂಚಪಡೆಯುವಾಗ ತಿಪಟೂರು ಜಿಲ್ಲಾಪಂಚಾಯ್ತಿ ಇಂಜಿನಿಯರ್ ವಿಭಾಗದ ಎಇಇ ಸ್ವಾಮಿ ಬಿ.ಸಿ ಲೋಕಾಯುಕ್ತರ. ಬಲೆಗೆ ಬಿದ್ದಿದ್ದಾರೆ..ಸ್ಥಳದಲ್ಲಿಯೆ ಅಧಿಕಾರಿಯನ್ನ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು.
ತಿಪಟೂರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ ಇನ್ವೆಕ್ಟರ್ ರಾಜು ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ








