ತಿಪಟೂರು:ರಾಜ್ಯಸರ್ಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 0.2 ಲಾಗಿನ್ ನಲ್ಲಿ ಸಿಟಿಜನ್ ಲಾಗಿನ್ ಗೆ ಅವಕಾಶ ನೀಡಿರುವ ಕ್ರಮಖಂಡಿಸಿ ತಿಪಟೂರು ತಾಲ್ಲೋಕು ದಸ್ತು ಪತ್ರಬರಹಗಾರರ ಸಂಘದಿಂದ ಡಿಸೆಂಬರ್ 16ರಂದು ಲೇಖನಿ ಚಲೋ ಹಮ್ಮಿಕೊಳ್ಳಲಾಗಿದೆಸ್ಥಿಗಿತಗೊಳಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ.

ತಿಪಟೂರು ನಗರದ ಖಾಸಗೀ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ತಾಲ್ಲೋಕು ಪತ್ರಬರಹಗಾರರ ಸಂಘದ ಮುಖಂಡ ಉಮೇಶ್ ಆರಾಧ್ಯ ರಾಜ್ಯಸರ್ಕಾರ ಸಿಟಿಜನ್ ಲಾಗಿನ್ ಮೂಲಕ ಅನಾಧೀಕೃತವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಪತ್ರಬರಹಕ್ಕೆ ಅವಕಾಶ ನೀಡಿರುವುದುಸರಿಯಲ್ಲ, ಹಲವಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ಪತ್ರಬರಹ ವೃತ್ತಿ ಮಾಡುತ್ತಾ, ಬಂದಿದ್ದು ಸರ್ಕಾರ ಜಾರಿಗೊಳಿಸಲು ಹೊರಟಿರುವ ಸಿಟಿಜನ್ ಲಾಗಿನ್ ನಿಂದ ಪತ್ರಬರಹಗಾರರಿಗೆ ತೊಂದರೆ ಆಗುವ ಜೊತೆಗೆ,ಅನುಭವದ ಕೊರೆತೆಯಿಂದ ಮಧ್ಯವರ್ತಿಗಳು ಅಕ್ರಮಗಳು ನಡೆಸುವ ಸಾಧ್ಯತೆಯಿದು.ಸರ್ಕಾರಕ್ಕೆ ರಾಜಸ್ವ ನಷ್ಟವಾಗುವ ಸಂಭವವಿದೆ.ಹಲವಾರು ಸೈಬರ್ ಸೆಂಟರ್ ಗಳು ಅನಧೀಕೃತವಾಗಿ ಬೋರ್ಡ್ ಹಾಕಿಕೊಂಡು ರಿಜಿಸ್ಟ್ರ್ ಮಾಡಿಸುವುದ್ದಾಗಿ ಜನರ ದಿಕ್ಕುತಪ್ಪಿಸುತ್ತಿದ್ದಾರೆ.
ಸರ್ಕಾರ ಕೂಡಲೇ ಸಿಟಿಜನ್ ಲಾಗಿನ್ ನಲ್ಲಿ ಪತ್ರಬರಹಗಾರರಿಗೆ ಪ್ರತ್ಯೇಕವಾಗಿ ಕೋಡ್ ಕೊಟ್ಟು.ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ ಅವರು ಸರ್ಕಾರದ ಹೊಸ ನಿರ್ಧಾರದಿಂದ ಮಧ್ಯವರ್ತಿಗಳ ಹಾವಳಿಹೆಚ್ಚಾಗಿದ್ದು ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು.ಹೊಸ ನಿಯಮ ವಾಪಾಸ್ ಪಡೆಯಬೇಕು ಎಂದು ರಾಜ್ಯಾದಾದ್ಯಂತ ಇರುವ ದಸ್ತುವೇಜ್ ನೋಂದಣಿದಾರರು ಡಿಸೆಂಬರ್ 16ರಂದು ಲೇಖನಿಸ್ಥಿಗಿತಮಾಡಿ ಬೆಳಗಾವಿ ಚಲೋ ಹಮ್ಮಿಕೊಳ್ಳುವುದ್ದಾಗಿ ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಸಂಘದ ಮುಖಂಡರಾದ ಡಿ.ಸಿ ಉಮೇಶ್ ಆರಾಧ್ಯ.ಮಹೇಶ್.ಎಸ್.ಎನ್ ರಮೇಶ್.ಸಿ.ಬಸವಯ್ಯ.ವಿಜಯ್ ಹೆಚ್.ಎಸ್.ಮಂಜುಳ.ಖಲೀಲ್ ಎನ್.ಡಿ ಕುಮಾರ್.ಬಿ.ನಾಗೇಶ್ ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




