ತಿಪಟೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ. ತುಮಕೂರು ಪ್ರಸರಣ ವಿಭಾಗ ತಿಪಟೂರು ವತಿಯಿಂದ ವಿದ್ಯುತ್ ಅಪಘಾತ ಮತ್ತು ವಿದ್ಯುತ್ ಸುರಕ್ಷತೆ ಅರಿವು ಜಾಥ ನಡೆಸಲಾಯಿತು.ತಿಪಟೂರು ನಗರಸಭಾ ವೃತ್ತದಿಂದ ಹೊರಟ ಜಾಗೃತಿ ಜಾಥಕ್ಕೆ ತಿಪಟೂರು ಬೆಸ್ಕಾಂ ಉಪವಿಭಾಗ ಎಇಇ ಸೋಮನಗೌಡ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿ ವಿದ್ಯುತ್ ಸುರಕ್ಷತೆಗೆ ಬೆಸ್ಕಾಂ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ.ಇಲಾಖೆ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿದರೆ,ವಿದ್ಯುತ್ ಅಪಘಾತಗಳನ್ನ ತಪ್ಪಿಸಬಹುದು.ಬೆಸ್ಕಾಂ ಇಲಾಖೆ
ಜೀವಿಸುವ ಪ್ರತಿಯೊಂದು ಪ್ರಾಣಿಯೂ ಸುರಕ್ಷತೆಯಿಂದ ಜೀವಿಸಬೇಕು ಇತ್ತೀಚೆಗೆ ವಿದ್ಯುತ್ ಅವಘಡಗಳು ಹೆಚ್ಚು ಸಂಭವಿಸುತ್ತಿದ್ದು ಈ ವಿಚಾರವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.ಸಾರ್ವಜನಿಕರು ವಿದ್ಯುತ್ ತಂತಿ ಹಾಗೂ ಕಂಬಗಳ ಬಳಿ ಮರಗಿಡಗಳನ್ನ ಬೆಳೆಸಬಾರದು.ವಿದ್ಯುತ್ ತಂತಿಗಳ ಪಕ್ಕದಲ್ಲಿ ಬಟ್ಟೆ ಒಣಗಿಸಲು ಹಾಕುವುದು,ದನಕರುಗಳು ಪ್ರಾಣಿಗಳನ್ನ ಕಟ್ಟುವುದು ಅವಘಡಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಬೆಸ್ಕಾಂ ಅದಿಕ್ಷಕ ನರಸಿಂಹಮೂರ್ತಿ ಮಾತನಾಡಿ ರೈತರು ಮತ್ತು ಮಕ್ಕಳು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.ಪ್ರಾಣಿಗಳನ್ನ ವಿದ್ಯುತ್ ಕಂಬದ ಕೆಳಗೆ ಕಟ್ಟಬಾರದು,ವಿದ್ಯುತ್ ತಂತಿ ಬಳಿ ಬಟ್ಟೆ ಒಣಗಿಸಲು ಹಾಕಬಾರದು. ಮಳೆಗಾಲದಲ್ಲಿ ಕಟ್ಟಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನ ಮುಟ್ಟಬಾರದು.ಅನೀರಿಕ್ಷಿತ ಅವಗಡಗಳು ಸಂಭವಿಸಿದ್ದಾಗ ತಕ್ಷಣ ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡಬೇಕು.ಮನೆ ಹಾಗೂ ಜಮೀನಿನಲ್ಲಿ ಯಾವುದೇ ವಿದ್ಯುತ್ ಕೆಲಸ ಕಾರ್ಯಗಳು ಇದ್ದಾಗ ನುರಿತ ವಿದ್ಯುತ್ ಗುತ್ತಿಗೆದಾರರನ್ನ ಸಂಪರ್ಕಿಸ ಬೇಕು ಎಂದು ತಿಳಿಸಿದರು
ಕಾರ್ಯಪಾಲಕ ಇಂಜಿನಿಯರ್ ಮನೋಹರ್ ಮಾತನಾಡಿ ಮನೆಗಳನ್ನು ಕಟ್ಟುವಾಗ ಸರಿಯಾಗಿ ಗ್ರೌಂಡಿಂಗ್ ಕೊಟ್ಟು 3 ಪಿನ್ ಗಳ ಸಾಕೆಟ್ ಉಪಯೋಗಿಸಬೇಕು ರೈತರು ಕೃಷಿ ಜಮೀನಿನ ಸ್ಟಾರ್ಟರ್ಗಳ ವೈರಿಂಗ್ ಸರಿಯಾಗಿ ನೋಡಿಕೊಳ್ಳಬೇಕು ಮಳೆಗಾಲದಲ್ಲಿ ವಿದ್ಯುತ್ ಭೂಮಿಗೆ ಪ್ರಸರಿಸಿ ಅವಗಡ ಸಂಭವಿಸುತ್ತದೆ, ಪೋಷಕರು ಮಳೆಗಾಲದಲ್ಲಿ ಟ್ರಾನ್ಸ್ ಪಾರಂ ಮತ್ತು ವಿದ್ಯುತ್ ಕಂಬಗಳ ಹತ್ತಿರ ಮಕ್ಕಳನ್ನು ಬಿಡಬಾರದು ಪ್ರಮುಖವಾಗಿ,11ಕೆ.ವಿ. ಯಿಂದ 1.2 ಮೀಟರ್ ದೂರದಲ್ಲಿ 110 ಕೆ ವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ತಂತಿಯಿಂದ 2.7 ಮೀಟರ್ ಅಂತರದಲ್ಲಿ, 220.ಕೆ.ವಿ ಸಾಮರ್ಥ್ಯದಿಂದ 3.7 ಮೀಟರ್ ದೂರದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು ಇಲ್ಲದಿದ್ದರೆ ಬೆಸ್ಕಾಂ ಇಲಾಖೆಯಿಂದ ಎನ್ ಓ ಸಿ ಕೊಡುವುದಿಲ್ಲ ಎಂದು ತಿಳಿಸಿದರು
. ಜಾಥಾ ಕಾರ್ಯಕ್ರಮದಲ್ಲಿ ಬೆಸ್ಕಾಂ ಇಲಾಖೆಯ ಉಪ ವಿಭಾಗದ ಎ ಡಬ್ಲ್ಯೂ ಇ ಜಯಪ್ಪ, ಉಪ ವಿಭಾಗದ ಎಲ್ಲಾ ಶಾಖಾಧಿಕಾರಿಗಳು ಸಿಬ್ಬಂದಿ ವರ್ಗ ರಸ್ತೆ ಯುದ್ಧಕ್ಕೂ ಜಾಥಾ ನಡೆಸಿ ಅರಿವು ಮೂಡಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




