ತಿಪಟೂರು:ಗೋಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯಲು ಹೊರಟಿರುವ ಕಾಂಗ್ರೇಸ್ ಸರ್ಕಾರದ ಕ್ರಮಖಂಡನೀಯ ಹಿಂದೂಗಳ ಭಾವನೆಗೆ ಧಕ್ಕೆತರುವ ಕೆಲಸವನ್ನ ಸರ್ಕಾರ ಮಾಡಬಾರದು ಎಂದು ಒತ್ತಾಯಿಸಿ ತಿಪಟೂರು ನಗರಸಭಾ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್ ಮಾತನಾಡಿ ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ತಕ್ಕಂತೆ ಗೋಹತ್ಯೆ ಕಾಯ್ದೆ ಜಾರಿಗೊಳಿಸಿ. ಅಕ್ರಮ ಖಾಸಾಯಿ ಖಾನೆ ಮುಚ್ಚಲು ಕಾರಣವಾಗಿದರೂ.ಅಕ್ರಮವಾಗಿ ಗೋಮಾತೆ ಮಾರಾಟ.ಹತ್ಯೆ ಮಾಡುವ ಕೊಲೆಗಡುಕರಿಗೆ,ಸಿಂಹಸ್ವಪ್ನವಾದ ಕಾನೂನು ಜಾರಿಗೊಳಿಸಿದರು.ಆದರೇ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ನವರ ಸರ್ಕಾರ ಗೊಇಹತ್ಯೆ ವಾಪಾಸ್ ಪಡೆಯಲು ಹೊರಟಿರುವುದು ಖಂಡನೀಯ.ಹಿಂದೆ ಜಾರಿಗೊಳಿಸಿದ ಗೋಹತ್ಯೆ ಕಾಯ್ದೆವಾಪಾಸ್ ಪಡೆದರೆ ಸಮಸ್ತ ಹಿಂದೂಸಮಾಜ ಬೀದಿಗಿಳಿದು ಹೋರಾಟ ಮಾಡಲಿದೆ.ತಿಪಟೂರು ನಗರದಲ್ಲಿ ಸುಮಾರು 15ಅಕ್ರಮ ಖಾಸಾಯಿ ಖಾನೆಗಳಿವೆ,ನಿತ್ಯ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಸರ್ಕಾರ ಕೂಡಲೇ ಖಾಸಾಯಿ ಖಾನೆ ಮುಚ್ಚಿಸ ಬೇಕು.ಹಳೆಯ ಗೋಹತ್ಯೆ ಕಾಯ್ದೆಯನ್ನ ಪರಿಣಾಮಕಾರಿಯಾಗಿ ಜಾರಿಗೊಳಿಸಿ,ಗೋಕಟ್ಟುಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಹಳ್ಳಿಕಾರ್ ಸಾಮ್ರಾಜ್ಯ ಸಮಿತಿ ಅಧ್ಯಕ್ಷ ಮಡೇನೂರು ವಿನಯ್ ಹಳ್ಳಿಕಾರ್ ಮಾತಮಾಡಿ ಗೋಮಾತೆ ಸಮಸ್ತೆ ಹಿಂದೂಗಳ ಪೂಜನೀಯ ಮಾತೆ.ರೈತರ ಬೆನ್ನೆಲುಬು,ದೇಶಕ್ಕೆ ಕೃಷಿ ಬೆನ್ನಲುಬಾದರೆ, ಗೋವು ಕೃಷಿಯ ಜೀವ,ರಾಜ್ಯದಲ್ಲಿ ಗೋಸಂತತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.ಅಕ್ರಮ ಖಾಸಾಯಿ ಖಾನೆಗಳನ್ನ ಮುಚ್ಚಲು ಈ ಹಿಂದೆ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನ ವಾಪಾಸ್ ಪಡೆದು ಹೊಸವಿದೇಯಕ ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ.ಸರ್ಕಾರಕ್ಕೆ ಯಾವುದೇ ಧರ್ಮ ಹಾಗೂ ಕೋಮಿನ ಜನ ಗೋಹತ್ಯೆಗೆ ಅವಕಾಶ ನೀಡಿ ಎಂದು ಮನವಿ ಮಾಡಿಲ್ಲ.ಆದರೂ ಮತೀಯ ಓಲೈಕೆಗಾಗಿ ಸರ್ಕಾರ ಗೋಹತ್ಯೆ ಕಾಯ್ದೆ ದುರ್ಭಲಗೊಳಿಸುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ.ವಿಶ್ವಹಿಂದೂ ಪರಿಷತ್ ಬಜರಂಗ ದಳ ಸೇರಿ ಹಿಂದೂಪರ ಸಂಘಟನೆಗಳು ಉಗ್ರಹೋರಾಟ ಮಾಡಲಿವೆ ಎಂದು ತಿಳಿಸಿದರು.
ಹಿಂದೂ ಪರ ಸಂಘಟನೆ ಮುಖಂಡ ಬಾಳೆಕಾಯಿ ನಟರಾಜ್ ಮಾತನಾಡಿ ಗೋಮಾತೆ ಭಾರತೀಯರ ದೇವತೆ,ಹಿಂದೂಗಳ ಭಾವನೆಗೆ ದಕ್ಕೆಯಾಗುವ,ನಿರ್ಧಾರ ತೆಗೆದುಕೊಳ್ಳ ಸರ್ಕಾರ ಮುಂದಾಗಿರುವುದು ಸರಿಯಲ್ಲ.ಅಕ್ರವಾಗಿ ನಡೆಯುತ್ತಿರುವ ಖಾಸಾಯಿ ಖಾನೆಗಳನ್ನ ಮುಚ್ಚಿಸಬೇಕು.ಗೋರಕ್ಷಣೆಗೆ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಜರಂಗದಳ ಮುಖಂಡ ಕೃಷ್ಣ.ಉಮೇಶ್ ಗೊರಗೊಂಡನಹಳ್ಳಿ ಮಂಜುನಾಥ್.ಮಾಜಿ ನಗರಸಭಾ ಸದಸ್ಯ ಶಶಿಕಿರಣ್.ತರಕಾರಿ ಗಂಗಾಧರ್ ಬಿಜೆಪಿ ಮಾಜಿ ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್.ಗಾಡಿ ಕೃಷ್ಣಪ್ಪ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




