Spread the love

ತಿಪಟೂರು: ಸಂಘ ಸಂಸ್ಥೆಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು ಸಮಾಜ ಕಟ್ಟಲು ಬೇಕಾಗುವಂತಹ ವಿಚಾರಧಾರೆಗಳನ್ನ ಬಿತ್ತುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಜೊತೆಗೆ ಸಂಸ್ಕಾರ ಸಂಸ್ಕೃತಿಯನ್ನ ಉಳಿಸುವ ಕೆಲಸ ಮಾಡಬೇಕು ಆಗ ಮಾತ್ರ ಸಂಘ-ಸಂಸ್ಥೆಗಳ ಉದ್ದೇಶ ಸಫಲವಾಗುತ್ತದೆ ಎಂದು ತಿಪಟೂರು ಶಾಸಕ ಕೆ ಷಡಕ್ಷರಿ ತಿಳಿಸಿದರು .


ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಬಯಲು ಸೀಮೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘದ 25ನೇ ವರ್ಷದ ಸಂಸ್ಥಾಪನ ದಿನ ಉದ್ಘಾಟಿಸಿ ಮಾತನಾಡಿದ ಶಾಸಕರು, ಸಮಾಜಕ್ಕೆ ಉತ್ತಮ ವಿಚಾರಗಳನ್ನು ಬಿತ್ತಿ ಸಂಸ್ಕೃತಿ ಸಂಸ್ಕಾರಗಳನ್ನ ಉಳಿಸುವ ಕೆಲಸಗಳನ್ನ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಯಲು ಸೀಮೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘ 25 ವರ್ಷಗಳಿಂದಲೂ ನಿರಂತರವಾಗಿ ಭಾವಗೀತೆ ಗಾಯನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತಾಲೂಕಿನಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಹಲವಾರು ಸಂಘ ಸಂಸ್ಥೆಗಳು ಹುಟ್ಟುತ್ತವೆ ಆದರೆ ಹುಟ್ಟಿದ ವೇಗದಲ್ಲೇ ತನ್ನ ಕೆಲಸಗಳನ್ನು ನಿಲ್ಲಿಸುತ್ತವೆ, ಆದರೆ ನಿರಂತರವಾಗಿ 25 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವುದು ಶ್ಲಾಘನೀಯ ಈ ಸಂಘಟನೆಯನ್ನು ಪ್ರಾರಂಭಿಸುವಾಗ ನಾನು ಮೊದಲ ಬಾರಿ ಶಾಸಕನಾಗಿದೆ, ಉದ್ಘಾಟನೆ ವೇಳೆ ಸಂಘ ಉತ್ತಮವಾಗಿ ಸಮಾಜಮುಖಿಯಾಗಿ ಬೆಳೆದು ಉತ್ತಮ ಹೆಸರು ಸಂಪಾದಿಸಲಿ ಎನ್ನುವ ಆಶಯ ವ್ಯಕ್ತಪಡಿಸಿದೆ, ನಾನು ನುಡಿದ ಆಶಯದಂತೆ ಸಂಘ ಉತ್ತಮವಾಗಿ ತನ್ನ 25 ವರ್ಷಗಳ ವಸಂತವನ್ನು ಪೂರೈಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಪ್ರಸ್ತುತ ಸಮಾಜದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಯ ನಡುವಿನ ಆಸಕ್ತಿಗಳು ದಿನೇ ದಿನೇ ಕಡಿಮೆಯಾಗುತ್ತಿವೆ.ಸಂಘ ನಿರಂತರವಾಗಿ ಭಾವಗೀತೆಗಾಯನ ಹಾಗೂ ಹಲವಾರು ಕ್ಷೇತ್ರದ ಸಾಧಕರನ್ನ ಕರೆಸಿ.ವಿಧ್ಯಾರ್ಥಿಗಳಿಗೆ ಸ್ಪೂರ್ಧಿ ತುಂಬುವ ಕೆಲಸ ಮಾಡುತ್ತಿರುವುದು .ಉತ್ತಮ ಕೆಲಸ ವಾಗಿದೆ ಎಂದು ತಿಳಿಸಿದರು.


ಸಂಘದ ಸಂಸ್ಥಾಪಕರಾದ ಎನ್ ಬಾನು ಪ್ರಶಾಂತ್ ಮಾತನಾಡಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಹಲವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ 25 ವರ್ಷಗಳಿಂದ ನಿರಂತರವಾಗಿ ಸೇವೆ ಮಾಡುತ್ತಾ ಬಂದಿದೆ ನಾಡಿನ ಹೆಸರಾಂತ ಸಾಹಿತಿಗಳು ದಿಗ್ಗಜ ಕವಿಗಳು ಪತ್ರಕರ್ತರು ಹಾಗೂ ಸಾಧಕರನ್ನ ಸಂಘದ ವೇದಿಕೆಗೆ ಕರೆಸಿ,ಉತ್ತಮ ವಿಚಾರಧಾರೆಗಳನ್ನ ಸಮಾಜಕ್ಕೆ ನೀಡುವ ಜೊತೆಗೆ ವಿದ್ಯಾರ್ಥಿಗಳ ಪುರೋಬಿವೃದ್ದಿಗೆ ಪೂರಕವಾದಂತಹ ವ್ಯಾಕರಣ ಪುಸ್ತಕಗಳ ವಿತರಣೆ ಭಾವಗೀತೆ ಗಾಯನ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ ಸಂಘ 25 ವರ್ಷಗಳ ದೀರ್ಘ ಪಯಣದಲ್ಲಿ ಪತ್ರಕರ್ತರಾದ ಜಿ. ಇಂದ್ರಕುಮಾರ್ ಆದಿಯಾಗಿ ಅನೇಕ ಮಹನೀಯರು ಸಹಕಾರ ನೀಡಿದ್ದಾರೆ ತಾಲೂಕಿನ ಅನೇಕ ಅಧಿಕಾರಿ ವರ್ಗ ಉತ್ತಮ ಕೆಲಸಕ್ಕೆ ಕೈಜೋಡಿಸಿದೆ. ಚಂಪಾ, ಕೆ. ಎಸ್ ನಿಸಾರ್ ಅಹಮದ್, ವೆಂಕಟೇಶ್ ಮೂರ್ತಿ ಸೇರಿದಂತೆ ಅನೇಕ ಮಹನೀಯರು ಕಾರ್ಯಕ್ರಮಕ್ಕೆ ಆಗಮಿಸಿ ಸಮಾಜ ಮುಖಿಯಾದಂತಹ ಸಂದೇಶಗಳನ್ನು ನೀಡಿದ್ದಾರೆ. ಸಂಘದ ಚಟುವಟಿಕೆಗಳನ್ನ ವಿಸ್ತರಿಸುವ ದೃಷ್ಟಿಯಿಂದ ಹಾಗೂ ಸಮಾಜಮುಖಿಯ ಸೇವೆ ಇನ್ನಷ್ಟು ವಿಸ್ತರಿಸಬೇಕೆನ್ನುವ ದೃಷ್ಟಿಯಿಂದ ಬಯಲು ಸೀಮೆ ಪತ್ತಿನ ಸಹಕಾರ ಸಂಘವನ್ನ ಪ್ರಾರಂಭಿಸಲಾಗಿದೆ ಸಹಕಾರ ಸಂಘವು ಸಹ ಉತ್ತಮ ದಾರಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಎಸ್. ‌ವಿ. ಪಿ ಕಾಲೇಜು ಪ್ರಾಚಾರ್ಯರಾದ ಕೆ.ಎಂ ರೇಣುಕಯ್ಯ ಮಾತನಾಡಿ ಬಯಲು ಸೀಮೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘ ತಾಲೂಕಿನಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡುತ್ತಿದೆ ,ಸಂಘದ ಸಂಸ್ಥಾಪಕ ಎನ್. ಬಾನು ಪ್ರಶಾಂತ್ ಎಲ್ಲಾ ವರ್ಗದ ಸದಬರುಚಿಯ ವ್ಯಕ್ತಿಗಳನ್ನ ಜೊತೆಗೂಡಿಸಿಕೊಂಡು ಸಂಘವನ್ನ ಮುನ್ನಡೆಸುತ್ತಿದ್ದು 25 ವಸಂತಗಳನ್ನ ಪೂರೈಸಿರುವ ಸಂಘ ಹಲವರು ಸಮಾಜಮುಖಿ ಚಟುವಟಿಕೆಗಳನ್ನ ಮುನ್ನಡೆಸುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಗರಾಜ ಶೆಟ್ಟಿ. ತಹಶೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಖ್ಯಾತ ವೈದ್ಯರಾದ ಡಾ//ಶ್ರೀಧರ್.ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್ .ಸಂಘದ ಅಧ್ಯಕ್ಷರಾದ ನಾಗರಾಜು ,ಸಂಸ್ಥಾಪಕ ಎನ್ ಭಾನುಪ್ರಶಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಖ್ಯಾತ ಗಾಯಕರಾದ ರೂಪ ನಾಗೇಂದ್ರ ತಂಡದಿಂದ ಭಾವಗೀತೆ ಗಾಯನ ಕಾರ್ಯಕ್ರಮ ನಡೆಸಲಾಯಿತು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!