
: ವಿಶ್ವಕರ್ಮ ಸಮುದಾಯದ ಕುಲದೇವತೆ ಶ್ರೀಕಾಳಿಕಾಂಬ ನೆಲೆಸಿರುವ ಶ್ರೀ ಕಾಳಮ್ಮನ ಬೆಟ್ಟದ ಅಭಿವೃದ್ದಿಗೆ ಸಹಕಾರ ನೀಡಲಾಗಿದ್ದು, ಸಮುದಾಯಕ ಬಂಧುಗಳು ಒಗ್ಗಟಿನಿಂದ ಬಂದರೆ ಶ್ರೀಕ್ಷೇತ್ರದ ಅಭಿವೃದ್ದಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿ ಕಾಳಮ್ಮನ ಬೆಟ್ಟದಲ್ಲಿ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ಸೇವಾ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ ವಾರ್ಷಿಕೋತ್ಸವ ಲೋಕಕಲ್ಯಾಣಾರ್ಥವಾಗಿ ಹೋಮ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಶ್ರೀ ಕ್ಷೇತ್ರ ಕಲ್ಪತರು ನಾಡಿನ ಶಕ್ತಿ ಪೀಠವಾಗಿದ್ದು ವಿಶ್ವಕರ್ಮ ಸಮಾಜದ ಕುಲದೇವತೆ ನೆಲೆಸಿರುವ ಕ್ಷೇತ್ರವಾಗಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿದ್ದು ರಾಜ್ಯದ ವಿವಿಧ ಭಾಗಗಳಿಂದ ವಿಶ್ವಕರ್ಮ ಸಮುದಾಯದ ಭಕ್ತರು ಆಗಮಿಸುತ್ತಾರೆ, ಆದರೆ ಸಮುದಾಯದ ಒಗ್ಗಟಿನ ಕೊರತೆ ಕ್ಷೇತ್ರ ಅಭಿವೃದ್ದಿಯಿಂದ ಹಿಂದುಳಿಯಲು ಕಾರಣವಾಗಿದೆ ಸಮುದಾಯ ಎಲ್ಲಾ ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಿದರೆ ಸರ್ಕಾರದಿಂದ ಎಲ್ಲಾ ಸೌಕರ್ಯ ದೊರಕಿಸಲಾಗುವುದು. ಕ್ಷೇತ್ರದ ಅಭಿವೃದ್ದಿಗೆ ಅಗತ್ಯ ನೆರವು ನೀಡಲಾಗುವುದು, ಶ್ರೀ ಕಾಳಮ್ಮನ ಬೆಟ್ಟಕ್ಕೆ ಅಗತ್ಯ ಮೂಲಸೌಕರ್ಯವಾಗಿ ಶೌಚಾಲಯ, ಸ್ನಾನ ಗೃಹ ನಿರ್ಮಾಣಕ್ಕೆ ನೆರವು ನೀಡುವುದಾಗಿ ತಿಳಿಸಿದರು.

ದಿವ್ಯ ಸಾನಿಧ್ಯವಹಿಸಿದ ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾ ಸ್ವಾಮೀಜಿ ಮಾತನಾಡಿ ವಿಶ್ವಕರ್ಮ ಸಮುದಾಯ ಒಗ್ಗಟಿನ ಕೊರತೆ ಎದುರಿಸುತ್ತಿದೆ, ವೃತ್ತಿ ಕೌಶಲ್ಯ ಹೊಂದಿರುವ ಸಮುದಾಯಕ್ಕೆ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡಬೇಕು, ವಿಶ್ವಕರ್ಮ ಸಮಾಜದ ಹಲವಾರು ವೃತ್ತಿಪರ ಪಂಗಡಗಳು ತಮ್ಮ ವೃತ್ತಿಯಿಂದ ಹೊರಹೋಗುತ್ತಿದ್ದು ವಿಶ್ವಕರ್ಮ ಸಮಾಜದ ಕುಶಲಕಲೆ ಪ್ರೋತ್ಸಾಹದ ಅಗತ್ಯವಿದೆ.ದೇಶದಾದ್ಯಂತ ದೇವರುಗಳಿಗೆ ದೃಷ್ಟಿ ಹಾಗೂ ಶಕ್ತಿ ಕೊಡುವ ವಿಶ್ವಕರ್ಮ ಸಮಾಜದ ಕುಲದೇವತೆ ಶ್ರೀ ಕಾಳಿಕಾಂಬ ಹಾಗೂ ಕಾಲಕಮ್ಮಟೇಶ್ವರ ನೆಲೆಸಿರುವ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಇದೆ. ಶ್ರೀ ಕ್ಷೇತ್ರವನ್ನ ಅಭಿವೃದ್ದಿಗೊಳಿಸಿ,ಪ್ರವಾಸಿ ತಾಣವಾಗಿ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕೆಪಿಸಿಸಿ ಸದಸ್ಯರಾದ ವಿ. ಯೋಗೇಶ್ ಮಾತನಾಡಿ ಶ್ರೀ ಕ್ಷೇತ್ರ ಕಾಳಮ್ಮನ ಬೆಟ್ಟ ನಮ್ಮ ಭಾಗದಲ್ಲಿ ಪುಣ್ಯಕ್ಷೇತ್ರವಾಗಿದ್ದು,ದೇವರುಗಳ ಪುಣ್ಯಕಾರ್ಯ ದೃಷ್ಠಿಪೂಜೆ ಸೇರಿದಂತೆ ದೇವರ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ.ರಾಜ್ಯದ ವಿವಿಧ ಭಾಗಗಳಿಂದ ವಿಶ್ವಕರ್ಮ ಸಮುದಾಯದ ಭಕ್ತರು ದೇವಾಲಯಕ್ಕೆ ಬರುತ್ತಾರೆ, ಶ್ರೀಕ್ಷೇತ್ರದಕ್ಕೆ ಮೂಲಸೌಕರ್ಯಗಳ ಅಗತ್ಯವಿದೆ.ವಿಶ್ವಕರ್ಮ ಸಮುದಾಯದೊಂದಿಗೆ ಆತ್ಮೀಯವಾದ ಒಡೆನಾಟಹೊಂದಿದ್ದು, ಸಮುದಾಯಕ್ಕೆ ನಾನು ಸಹ ಅಗತ್ಯ ನೆರವು ನೀಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ವಿಶ್ವಕರ್ಮ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷರಾದ ಸುಜ್ಞಾನಮೂರ್ತಿ ಮಾತನಾಡಿ ವಿಶ್ವಕರ್ಮ ಅಭಿವೃದ್ದಿ ನಿಗಮದಿಂದ ಶಾಸಕರ ಸಲಹೆಯಂತೆ ಶ್ರೀಕ್ಷೇತ್ರ ಹಾಗೂ ಸಮುದಾಯದ ಬಂಧುಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ವಿಶ್ರಾಂತಿ ಉಪನ್ಯಾಸಕರಾದ ಉಪೇಂದ್ರ ಚಾರ್ .ಹಿರಿಯ ಮುಖಂಡರಾದ, ನಿಂಗಚಾರ್ ಮರಿಯಾಚಾರ್ ,ಗಣೇಶ ಚಾರ್ ಜಗದೀಶ ಚಾರ್ .ಶಶಿಧರ್. ಕೆಂಪಾಚಾರ್ ಸರ್ವೇಶ್ ಕೈದಾಳ್ ಮಂಜುನಾಥ್. ಪತ್ರಕರ್ತ ಭಾಸ್ಕರಚಾರ್ .ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





