ತಿಪಟೂರು:2026ರ ಏಪ್ರಿಲ್ ಅಂತ್ಯಕ್ಕೆ ಜಿಲ್ಲಾಪಂಚಾಯ್ತಿ ಹಾಗೂ ತಾಲ್ಲೋಕು ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ದತೆ ನಡೆಸುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಾಲ್ಲೋಕಿನ ಗಂಗನಘಟ್ಟ ಗ್ರಾಮದಲ್ಲಿ ಮಾತನಾಡಿದ ಅವರು ಜಿಲ್ಲಾಪಂಚಾಯ್ತಿ ಹಾಗೂ ತಾಲ್ಲೋಕು ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ. ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲು ಮಾನ್ಯ ಮುಖ್ಯಮಂತ್ರಿಗಳು.ಉಪಮುಖ್ಯಮಂತ್ರಿಗಳು. ಸಂಬಂದ ಪಟ್ಟ ಇಲಾಖೆಯ ಸಚಿವರು ಸೇರಿ ಚರ್ಚೆ ನಡೆಸಿದ್ದು ಬಹುತೇಕ ಏಪ್ರಿಲ್ ವೇಳೆಗೆ ಚುನಾವಣೆ ನಡೆಸುವ ಚಿಂತನೆ ನಡೆಸಲಾಗಿದೆ ಎಂದ ಅವರು ಡಿಸೆಂಬರ್ ಅಂತ್ಯಕ್ಕೆ ಬಹುತೇಕ ಗ್ರಾಮಪಂಚಾಯ್ತಿಗಳ ಅಧಿಕಾರಾವಧಿ ಮುಕ್ತಾಯವಾಗಲ್ಲಿದ್ದು.ಗ್ರಾಮಪಂಚಾಯ್ತಿ ಚುನಾವಣೆಗಳ ಬಗ್ಗೆಯೂ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.ಎಂದು ತಿಳಿಸಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




