ತಿಪಟೂರು: ಜಿಲ್ಲೆಯ ಪ್ರಸಿದ್ದ ಯಾತ್ರಾಕ್ಷೇತ್ರ ಕಲ್ಪತರು ನಾಡಿನ ಶಕ್ತಿ ಪೀಠ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಕೃಷಿ ಸಚಿವ ಚಲುವನಾರಾಯಣಸ್ವಾಮಿ ದಂಪತಿ ಸಮೇತರಾಗಿ ಆಗಮಿಸಿ ಶ್ರೀ ಚೌಡೇಶ್ವರಿ ದೇವಿಯವರಿಗೆ ವಿಶೇಷ ಪೂಜೆಸಲ್ಲಿಸಿದರು.

ಆದಿಚುಂಚನಗಿರಿ ದಸರಿಘಟ್ಟ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಸಚಿವರು ಹಾಗೂ ಗಣ್ಯರನ್ನ ಸ್ವಾಗತಿಸಿ ವಿಶೇಷ ಪೂಜೆ ನೆರವೇರಿಸಿದರು.ನಾಡಪ್ರಭುಕೆಂಪೇಗೌಡರ ಜಯಂತಿ ಅಂಗವಾಗಿ ಶ್ರೀಮಠದ ಆವರಣದಲ್ಲಿ ನಡೆದ ಜಯಂತಿ ಕರ‍್ಯಕ್ರಮದಲ್ಲಿ ಪಾಲ್ಗೊಂಡು ಕೆಂಪೇಗೌಡರ ಪುತ್ಥಳಿಗೆ ಪೂಷ್ಪರ‍್ಪಚನೆ ನೆರವೇರಿಸಿದರು.ಕೆಂಪೇಗೌಡರ ಜಯಂತಿ ಅಂಗವಾಗಿ ಶ್ರೀಚೌಡೇಶ್ವರಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು.ಹಾಸನ ಕ್ಷೇತ್ರದ ಮಾಜಿ ಎಂ. ಎಲ್. ಸಿ. ಗೋಪಾಲಸ್ವಾಮಿ, ಗ್ರಾಮದ ಮೋಹನ್ ಕುಮಾರ್, ರಂಗೇಗೌಡ, ಕುಮಾರಸ್ವಾಮಿ ದೇವಸ್ಥಾನದ ರ‍್ಚಕರು ಮತ್ತು ಸಿಬ್ಬಂದಿ ನೂರಾರು ಭಕ್ತರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




