ತಿಪಟೂರು:ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ವಿನಾಯಕ ಶೆಟ್ಟಿಗೇರಿಯವರಿಗೆ ತಿಪಟೂರು ಉಪವಿಭಾಗ ಪೊಲೀಸ್ ಇಲಾಖೆ ಹಾಗೂ ಸಂಘಸಂಸ್ಥೆಗಳಿಂದ ಆತ್ಮೀಯವಾಗಿ ಸನ್ಮಾನಿಸಿ ಭೀಳ್ಕೊಡುಗೆ ನೀಡಲಾಯಿತು.

ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಭಿಳ್ಕೊಡುಗೆ ಸಮಾರಂಭವನ್ನ ತಿಪಟೂರು ಉಪವಿಭಾಗ ನೂತನ ಪೊಲೀಸ್ ಉಪಾಧೀಕ್ಷಕರಾದ ಯಶ್ ಕುಮಾರ್ ಶರ್ಮ ಉದ್ಘಾಟಿಸಿದರು
ಪೊಲೀಸ್ ಇಲಾಖೆ ಹಾಗೂ ಸಂಘಸಂಸ್ಥೆಗಳು ಮತ್ತು ನಾಗರೀಕರಿಂದ ಆತ್ಮೀಯ ಸನ್ಮಾನ ಸ್ವೀಕರಿಸಿದ ವಿನಾಯಕ ಶೆಟ್ಟಿಗೇರಿ ಮಾತನಾಡಿ ಪೊಲೀಸ್ ಇಲಾಖೆ ಕಾನೂನನ್ನ ಗೌರವಿಸಿದರೆ ಪೊಲೀಸ್ ಇಲಾಖೆ ಗೌರವದಿಂದ ಕಾಣುತ್ತದೆ,ತಿಪಟೂರು ಉಪವಿಭಾಗ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಸಲ್ಲಿಸಿದ ಸೇವೆ ತೃಪ್ತಿ, ನೀಡಿದೆ,ಇಲ್ಲಯ ಜನ ಹಾಗೂಸಂಘಸಂಸ್ಥೆಗಳು ಉತ್ತಮ ಸಹಕಾರ ನೀಡುತ್ತಾರೆ,ಯಾವುದೇ ಕಾನೂನು ವಿರೋಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ,ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜಘಾತಕ ಕೃತ್ಯಗಳನ್ನ ಹದ್ದುಬಸ್ತಿನಲ್ಲಿಡಲು ನಾಗರೀಕರ ಸಹಕಾರ ಅಗತ್ಯವಾಗಿದೆ,ಈ ನಿಟ್ಟಿನಲ್ಲಿ ನಾಗರೀಕರು ಇಲಾಖೆಯೊಂದಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ.ಇಲಾಖೆ ಸಿಬ್ಬಂದಿ ಹಾಗೂ ನಾಗರೀಕರ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು

ಕಾರ್ಯಕ್ರಮ ಉದ್ಘಾಟಿಸಿದ ನೂತನ ಡಿವೈಎಸ್ಪಿ ಯಶ್ ಕುಮಾರ್ ಶರ್ಮ ಮಾತನಾಡಿ ತಿಪಟೂರು ಉಪವಿಭಾಗಾದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸೇರಿ ಕೆಲಸ ಮಾಡೋಣ,ನಮ್ಮ ಕಾನೂನು ವ್ಯಾಪ್ತಿಯಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಕೆಲಸ ಮಾಡಬೇಕು ಉತ್ತಮ ನಾಗರೀಕ ಪೊಲೀಸ್ ವ್ಯವಸ್ಥೆಗೆ ನಾಗರೀಕರ ಸಮಾಜದ ಸಹಕಾರ ಅಗತ್ಯ ಈ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.

ಹೊನ್ನವಳ್ಳಿ ಪೊಲೀಸ್ ಸಬ್ ಇನ್ಪೆಕ್ಟರ್ ರಾಜೇಶ್ ಮಾತನಾಡಿ ವಿನಾಯಕ ಶೆಟ್ಟಿಗೇರಿ ಸಾಹೇಬರು ಸಿಬ್ಬಂದಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿದ್ದಾರೆ,ಕಠಿಣ ಸಂದರ್ಭಗಳಲ್ಲಿ ಬೈದು ಬಿದ್ದಿಹೇಳಿ ಕೆಲಸ ಮಾಡುತ್ತಿದ್ದ ಅವರು ಉತ್ತಮ ಕೆಲಸ ಮಾಡಿದ್ದಾಗ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ,ಇಲಾಖೆಯ ಸಿಬ್ಬಂದಿ ಹಾಗೂ ನಾಗರೀಜರೊಂದಿಗೆ ಆತ್ಮೀಯ ಒಡನಾಡಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲಸ ಮಾಡಿದ್ದಾರೆ, ಅವರ ಮುಂದಿನ ವೃತ್ತಿ ಜೀವನ ಹರ್ಷದಾಯಕವಾಗಿರಲಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ತಿಪಟೂರು ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್.ತಿಪಟೂರು ನಗರವೃತ್ತ ನಿರೀಕ್ಷಕರಾದ ವೆಂಕಟೇಶ್ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್.ಚಿಕ್ಕನಾಯ್ಕನಹಳ್ಳಿ ವೃತ್ತ ನಿರೀಕ್ಷಕರಾದ ನದಾಫ್ ಸಬ್ ಇನ್ಪೆಕ್ಟರ್ ದ್ರಾಕ್ಷಣಮ್ಮ,ರಾಜೇಶ್ ಕೃಷ್ಣಪ್ಪ.ನಾಗರಾಜು.ಮಹೇಶ್ ಸೇರಿದಂತೆ ಸಿಬ್ಬಂದಿ ಹಾಜರಿದರು.ವಿವಿಧ ಸಂಘಸಂಸ್ಥೆಗಳಿಂದ ನಾಗರೀಕ ಸನ್ಮಾನ ನೆರವೇರಿಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ






