ತಿಪಟೂರು:ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿಪ್ ಉಲ್ಲಂಗನೆ ಮಾಡಿ ಅಡ್ಡ ಮತದಾನದ ಮೂಲಕ ಕಾಂಗ್ರೇಸ್ ಬೆಂಬಲಿತ ಪಕ್ಷೇತರ ಅಭ್ಯಾರ್ಥಿ ಗೆಲುವಿಗೆಕಾರಣರಾಗಿದ ತಿಪಟೂರು ನಗರಸಭೆಯ ನಾಲ್ಕು ಸದಸ್ಯರನ್ನ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಿ ತುಮಕೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು.ಬಹುಮತದೊಂದಿಗೆ ತಿಪಟೂರು ಗದ್ದುಗೆ ಏರಿದ ಕಾಂಗ್ರೇಸ್ ಪಕ್ಷ ಅಲ್ಪಮತಕ್ಕೆ ಕುಸಿತ ಕಂಡಿದೆ.ಹಾಲಿ ಅಧ್ಯಕ್ಷರಾಗಿದ್ದ ಶ್ರೀಮತಿ ಯಮುನಾ ಧರಣೇಶ್ ರಾಜೀನಾಮೆಯಿಂದ ಅಧ್ಯಕ್ಷಸ್ಥಾನ ತೆರವಾದರೆ ಉಪಾಧ್ಯಕ್ಷರಾಗಿ ಶ್ರೀಮತಿ ಮೇಘಶ್ರೀ ಭೂಷಣ್ ಅಧಿಕಾರದಲ್ಲಿ ಇದ್ದು ಪ್ರಭಾರ ಅಧ್ಯಕ್ಷರಾಗಿ ಉಳಿಕೆ ಅವಧಿಗೆ ಅಧಿಕಾರ ಪೂರ್ಣಗೊಳಿಸುತ್ತಾರೆ ಅನೋ ಹೊತ್ತಿನಲ್ಲಿ .ನಾಲ್ಕುಜನ ಚುನಾಯಿತ ಸದಸ್ಯರು ಅನರ್ಹಗೊಳ್ಳುವ ಮೂಲಕ,ನಗರಸಭೆ ಆಡಳಿದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿಯುವಂತೆ,ಮಾಡಿದೆ. ಬಲ್ಲ ಮೂಲಗಳ ಪ್ರಕಾರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವಂತ್ತೆ, ಬಿಜೆಪಿ ಉಮೇದುವಾರಿಕೆ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದ್ದು, ನಗರದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.ಶಾಸಕ ಕೆ.ಷಡಕ್ಷರಿ ಯವರು ದೆಹಲಿಯಲ್ಲಿ ಬಿಡುಬಿಟ್ಟಿದ್ದು ಇಂದು ಅಥವಾ ನಾಳೆ ತಿಪಟೂರಿಗೆ ವಾಪಾಸ್ ಆಗುವ ಸಂಭವವಿದ್ದು,ಮಾಜಿ ಸಚಿವ ಬಿ.ಸಿ ನಾಗೇಶ್ ಪಕ್ಷದ ಕೆಲಸದ ಮೇಲೆ ಬೆಂಗಳೂರಿಗೆ ತೆರಳಿದ್ದು ಅವರು ನಗರಕ್ಕೆ ವಾಪಾಸ್ ಆದ ನಂತರ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಲಿವೆ.

26 ಆಗಸ್ಟ್ 2024ರಂದು ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯಾರ್ಥಿಯಾಗಿ ಶ್ರೀಮತಿ ಯಮುನಾಧರಣೇಶ್. ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿ ಅಭ್ಯಾರ್ಥಿ ಶ್ರೀಮತಿ ಲತಾ ಲೋಕೇಶ್ ಸ್ಪರ್ಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಅಭ್ಯಾರ್ಥಿ ಶ್ರೀಮತಿ ಮೇಘಶ್ರೀ ಭೂಷಣ್ ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿ ಪಕ್ಷದ ಸಂಗಮೇಶ್ ಸ್ವರ್ಧಿಸಿದರು. ಒಟ್ಟು ಬಿಜೆಪಿ 11 ಸದಸ್ಯರು ಕಾಂಗ್ರೇಸ್ ಪಕ್ಷದಿಂದ 09ಸದಸ್ಯರು ಜೆಡಿಎಸ್ ಪಕ್ಷದಿಂದ 05 ಸದಸ್ಯರು ಪಕ್ಷೇತರರಾಗಿ 06ಜನ ಸದಸ್ಯರು ಸೇರಿ ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಶಾಸಕರು ಹಾಗೂ ಸಂಸದರು ಸೇರಿ 33ಸಂಖ್ಯಾಬಲದಲ್ಲಿ ,ಬಿಜೆಪಿ 14ಜನ ಸದಸ್ಯರು 2ಜೆಡಿಎಸ್ ಸದಸ್ಯರು ಹಾಗೂ ಸಂಸದರ ಒಂದು ಮತಸೇರಿ ಬಿಜೆಪಿ 17ಸಂಖ್ಯಾ ಬಲಹೊಂದಿತ್ತು
.ಆದರೆ ತಿಪಟೂರು ನಗರಸಭೆ ವಾರ್ಡ್ 31ರ ಬಿಜೆಪಿ ಸದಸ್ಯೆ ಶ್ರೀಮತಿ ಅಶ್ವಿನಿ ದೇವರಾಜು.
ವಾರ್ಡ್ ನಂಬರ್ 16ರ ಬಿಜೆಪಿ ಸದಸ್ಯೆ ಪದ್ಮ,ಹಾಗೂ ವಾರ್ಡ್ ನಂಬರ್ 11ರ ಸದಸ್ಯ,ಜೆಡಿಎಸ್ ಸದಸ್ಯ ಎಂ.ಬಿ ಜಯರಾಮ್.ವಾರ್ಡ್ ನಂಬರ್ 24ರ ಜೆಡಿಎಸ್ ಸದಸ್ಯೆ ಅಸೀಫ ಬಾನು ಅಡ್ಡಮತದಾನ ಮಾಡಿದ ಪರಿಣಾಮ ಕಾಂಗ್ರೇಸ್ ಬೆಂಬಲಿತ ಪಕ್ಷೇತರ ಅಭ್ಯಾರ್ಥಿ ಶ್ರೀಮತಿ ಯಮುನಾಧರಣೇಶ್ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಮೇಘಶ್ರೀ ಭೂಷಣ್ ಆಯ್ಕೆಯಾದರು.ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಪ್ ಜಾರಿಮಾಡಿಲಾಗಿತ್ತು, ವಿಪ್ ಉಲ್ಲಂಗನೆ ಮಾಡಿ ಅಡ್ಡಮತದಾನ ಮಾಡಿದ್ದಾರೆ. ಪಕ್ಷಾಂತರ ಕಾಯ್ದೆ ಅಡಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಪಕ್ಷಾಂತರ ಕಾಯ್ದೆ ಅಡಿ, ನಾಲ್ಕು ಜನಸದಸ್ಯರನ್ನ ಅನರ್ಹಗೊಳಿಸಿ ಆದೇಶಿಸಿದ್ದಾರೆ.
ನಗರಸಭೆ ಅಧಿಕಾರ ಅವಧಿ ಕೇವಲ ಒಂದುವರೆ ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಯಮುನಾಧರಣೇಶ್ ರಾಜೀನಾಮೆ ನೀಡಿದ್ದು,ಇಂತಹ ಸಮಯದಲ್ಲಿಯೇ ಸದಸ್ಯರ ಅನರ್ಹತೆ ಆದೇಶ ಭಾರೀ ಸಂಚಲನ ಉಂಟುಮಾಡಿದೆ.ಒಂದುವರೆ ತಿಂಗಳ ಕಾಲವಧಿ ನಗರಸಭೆ ಗದ್ದುಗೆಗಾಗಿ ಕಾಂಗ್ರೇಸ್ ಹಾಗೂ ಬಿಜೆಪಿ ಯಾವ ದಾಳ ಉರುಳಿಸುತ್ತವೆ ಕಾದುನೋಡಬೇಕಿದೆ.ಇನ್ನೊಂದೆಡೆ ಪ್ರಭಾರ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶ್ರೀಮತಿ ಮೇಘಶ್ರೀ ಭೂಷಣ್ ನಡೆಯೂ ಕುತೂಹಲ ಕೆಳಿಸಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ








