ತಿಪಟೂರು:ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ 2025-2026ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳು ಎನ್.ಎಸ್.ಎಸ್.ಹಾಗೂ ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಎನ್.ಸಿ.ಸಿ .ರೇಂಜರ್ ರೋವರ್ ಚಟುವಟಿಕೆಗಳ ಸಮಾರೋಪ ಸಮಾರಂಭ ಆಯೋಜನೆ ಮಾಡಲಾಗಿತ್ತು.
ಸಮಾರೋಪ ಸಮಾರಂಭದ ವೇದಿಕೆ ಬಳಿ ಚಲನಚಿತ್ರದ ಗೀತೆ ಹಾಕುವ ವಿಚಾರದಲ್ಲಿ ಉಂಟಾದ ಗಲಾಟೆ ಎರಡು ಗುಂಪುಗಳ ನಡುವೆ ಮಾರಾಮಾರಿಗೆ ಕಾರಣವಾಯಿತು.
ಕ್ಷುಲ್ಲಕ ಕಾರಣಕ್ಕೆ ಉಂಟಾದ ವಾಗ್ವಾದ ಹೊಡೆದಾಟ ನಡೆದು .ಕೊನೆಗೆ ತಿಪಟೂರು ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಧ್ಯಾರ್ಥಿಗಳ ಗುಂಪು ಚದುರಿಸಿದರು.
ಕಾಲೇಜು ಆವರಣದಲ್ಲಿ ಆರಂಭವಾದ ಹೊಡೆದಾಟ ಗಲಾಟೆ ಕಾಲೇಜು ಪಕ್ಕದ ಉದಯರವಿ ಬ್ಯಾಂಕ್ ರಸ್ತೆ ಹಾಗೂ ಬಿ.ಹೆಚ್ ರಸ್ತೆವರೆಗೂ ವಿಸ್ತಾರಿಸಿತು.ವಿದ್ಯಾರ್ಥಿಗಳ ಹೊಟೆದಾಟ ಕಂಡ ಸಾರ್ವಜನಿಕರು ಜಗಳ ಬಿಡಿಸಲು ಅರೆಸಾಹಸ ಪಟ್ಟ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಭವಿಷ್ಯದ ಪ್ರಜೆಗಳಾಗ ಬೇಕಾದ ವಿದ್ಯಾರ್ಥಿಗಳು ಬೀದಿ ರೌಡಿಗಳಂತೆ ಹೊಡೆದಾಡಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ









