ತಿಪಟೂರು :ತಾಲೂಕು ನೊಣವಿನಕೆರೆ ಹೋಬಳಿ ನಾಗರಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗರಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ,ವರುಣ್, ಕಿಶೋರ್, ಉದಯ್ ಹರ್ಷಿಲ್ ತರುಣ್ ಕುಮಾರ್, ಮಕ್ಕಳು ಆರ್ಥಿಕ ತೊಂದರೆಯಿಂದ ಶಾಲೆ ಬಿಟ್ಟು,ಮನೆಯಲ್ಲಿಯೇ ಕಾಲಕಳೆಯುತ್ತಿದ್ದವು, ಶಾಲೆಗೆ ಹೋಗದೇ ಓಡಾಡುತ್ತಿರುವುದನ್ನ ಗನಿಸಿದ ಡಾ//ಬಿ.ಆರ್ ಅಂಬೇಡ್ಕರ್ ಸೇವಾಸಮಿತಿ ಸದಸ್ಯರು ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಗಮನಕ್ಕೆ ತಂದಿದ್ದಾರೆ.ತಕ್ಷಣ ಸುದರ್ಶನ್ ಸದಸ್ಯರ ಮೂಲಕ ಮಕ್ಕಳನ್ನ ತಾಲ್ಲೋಕು ಪಂಚಾಯ್ತಿಗೆ ಕರೆಸಿ,ಉಚಿತವಾಗಿ ನೋಟ್ ಬುಕ್ ,ಸ್ಕೂಲ್ ಬ್ಯಾಂಗ್ ಸೇರಿದಂತೆ ಆರ್ಥಿಕ ನೆರವು ನೀಡಿ ಮಕ್ಕಳಿಗೆ ಚೆನ್ನಾಗಿ ಓದಿ ಕಷ್ಟ ಶಾಶ್ವತವಲ್ಲ.ಸರ್ಕಾರಿ ನಿಮ್ಮ ವಿದ್ಯಾಭ್ಯಾಸಕ್ಕೆ ಎಲ್ಲಾ ನೆರವು ನೀಡುತ್ತಿದೆ. ಸದ್ಬಳಕೆ ಮಾಡಿಕೊಳ್ಳಿ, ನೀವು ಚೆನ್ನಾಗಿ ಓದಿ ಆರ್ಥಿಕ ಸಂಕಷ್ಟದಲ್ಲಿ ಇರುವ ನಿಮ್ಮ ಕುಟುಂಬಕ್ಕೆ ನೆರವಾಗಿ ಎಂದು ತಿಳಿಹೇಳಿದ್ದಾರೆ.

ಬೆಳಗರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದು,ಕೆಲವರು ತಂದೆಯನ್ನು ಕಳೆದುಕೊಂಡಿದ್ದು ಏಕಪೋಷಕರ ಮಕ್ಕಳಾದರೆ ಕೆಲವರು ತಾಯಿ ತಂದೆ ಇಬ್ಬರನ್ನು ಕಳೆದುಕೊಂಡಿದ್ದು,ಆರ್ಥಿಕ ತೊಂದರೆಯಲ್ಲಿದರು, ಅಂಬೇಡ್ಕರ್ ಸೇವಾ ಸಮಿತಿಯ ಮನವಿಗೆ ತಕ್ಷಣ ಸ್ಪಂದಿಸಿದ ತಾ.ಪಂ ಇಒ ರವರನ್ನ ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ ಹಾಗೂ ರಾಘವೇಂದ್ರ ಯಗಚಿಕಟ್ಟೆ, ರಮೇಶ ಮಾರನಗೆರೆ,ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗೌಡನ ಕಟ್ಟೆ ಬಸವರಾಜು ಬೆಳಗರಹಳ್ಳಿ , ಮನು,ಮಂಜು, ಧರ್ಶನ್, ಗಂಗಾಧರ್,ಪ್ರಕಾಶ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ಕೆ ಭಾಗ್ಯಮ್ಮ ಹೇಮಣ್ಣ ರಘು ಹಾಗೂ ಇನ್ನೂ ಮುಂತ್ತಾದವರು ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ




