ತಿಪಟೂರು:ತಾಲ್ಲೋಕಿನಲ್ಲಿ ಅಯ್ಯನಬಾವಿ ಗ್ರಾಮದಲ್ಲಿ ನರಭಕ್ಷಕನಾಯಿ ದಾಳಿಯಿಂದ 6ವರ್ಷದ ಮಗುವಿನ ಸಾವು ಹಾಗೂ ತಾಲ್ಲೋಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಯಿ ಹಾವಳಿಯಿಂದ ಎಚ್ಚೆತ್ತ ತಾಲ್ಲೋಕು ಪಂಚಾಯ್ತಿ ಆಪರೇಷನ್ ಶ್ವಾನ ಕಾರ್ಯಚರಣೆ ನಡೆಸಲು ಮಂದಾಗಿದೆ.

ತಡಸೂರು ಹಾಗೂ ಮತ್ತಿಹಳ್ಳಿ ಗ್ರಾಮಪಂಚಾಯ್ತಿ ಹಳ್ಳಿಗಳಲ್ಲಿ ಬೀದಿನಾಯಿಗಳಲ್ಲಿ ಆಂಟಿರೇಬಿಸ್ ಚುಚ್ಚುಮದ್ದು ಲಸಿಕೆ ಹಾಕಲಾಗುತ್ತಿದ್ದು.ಶಾಸಕ ಕೆ.ಷಡಕ್ಷರಿ ತಾಲ್ಲೋಕು ಆಡಳಿತ ಅಧಿಕಾರಿಗಳ ಸಭೆ ನಡೆಸಿ,ಬೀದಿನಾಯಿಗಳ ಹಾವಳಿಗೆ ಕಡಿವಾಣಹಾಕಲು ಸೂಚನೆ ನೀಡಿದ್ದಾರೆ. ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು,ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸೂಚಿಸಿದ್ದಾರೆ.ಗ್ರಾಮೀಣ ಭಾಗದಲ್ಲಿ ನಾಯಿಹಾವಳಿಗೆ ಕಡಿವಾಣ ಹಾಕಲು ಆಂಟಿರೇಬಿಸ ಲಸಿಕೆ ಆಂದೋಲನಕ್ಕೆ ಮುಂದಾಗಿದೆ.

ಆದರೆ ಹೆಚ್ಚು ಬೀದಿನಾಯಿಗಳ ಹಾವಳಿಇರುವ ನಗರಸಭೆ ವ್ಯಪ್ತಿಯಲ್ಲಿ ಬೀದಿನಾಯಿಗಳಿಗೆ ಕಡಿವಾಣ ಹಾಕಲು,ನಗರಸಭೆ ನಿದ್ರೆಮಂಪರಿನಲ್ಲಿ ಇದ್ದಂತೆ ಕಾಣುತ್ತಿದೆ. ನಗರಸಭೆ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.




