ತಿಪಟೂರು:ನಗರದ ಹಾಸನ ರಸ್ತೆ ಶಿಲ್ಪಬಾರ್ & ರೆಸ್ಟೋರೆಂಟ್ ನಲ್ಲಿ ಬೆಳಂಬೆಳಗ್ಗೆ ಯುವಕನೋರ್ವ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಿಪಟೂರು ನಗರದ ಹಿಪ್ಪೆತೋಪು ನಿವಾಸಿ ಮಂಜುನಾಥ್ 44ವರ್ಷ ಮೃತ ದುರ್ದೈವಿ.
ಆಟೋ ಚಾಲಕನಾಗಿದ ಮಂಜುನಾಥ್ ಬೆಳಗ್ಗೆ ಮದ್ಯಪಾನ ಮಾಡಲು ಶಿಲ್ಪಬಾರ್ ರೆಸ್ಟೋರೆಟ್ ಗೆ ಹೋಗಿದ್ದು, ಆದರೆ ಬಾರ್ ನಲ್ಲಿ ಹಠತ್ ಆಗಿ ಸಾವನ್ನಪ್ಪಿದು,ಮೃತ ಯುವಕನ ಸಾವಿನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ ಕಾರಣ.ತಿಪಟೂರು ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್ ಹಾಗೂ ಸಿಬ್ಬಂದಿ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ನಗರಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವಿನಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




