:ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ 24 ವರ್ಷದ ವಾರ್ಷಿಕೋತ್ಸವ ಹಾಗೂ ಭಾವಗೀತೆಗಾಯನ.ಕನ್ನಡ ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರದಾನ,ಮತ್ತು ಸನ್ಮಾನ ಸಮಾರಂಭ ನಡೆಸಲಾಯಿತು.
ಖ್ಯಾತ ಹಾಸ್ಯ ಸಾಹಿತಿ ರಿಚರ್ಡ್ ಲೂಯಿಸ್ ರವರಿಗೆ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ಕನ್ನಡ ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನಮಾಡಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ನಾಡಿನ ಕಲೆ ಸಂಸ್ಕೃತಿ ಪರಂಪರೆ ಉಳಿವಿಗೆ ಕೆಲಸ ಮಾಡುತ್ತಿದೆ.ಮಕ್ಕಳಿಗೆ ಕವಿಗಳು,ಸಾಹಿತಿಗಳು,ಪತ್ರಕರ್ತರಂತ ಸಂಪನ್ಮೂಲ ವ್ಯಕ್ತಿಗಳನ್ನ ಕರೆಸಿ,ಸ್ಪೂರ್ಥಿದಾಯಕ ಮಾರ್ಗದರ್ಶನ ಮಾಡುತ್ತಿರುವ ಕೆಲಸ ಶ್ಲಾಘನೀಯ.ಜನಸಾಮಾಜಿಕ ಜವಾಬ್ದಾರಿಗಳಿಂದ ವಿಮುಖರಾಗುತ್ತಿರುವ ಕಾಲದಲ್ಲಿ ಕೆಲವು ಸಂಘ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯಿಂದ ನಾಡಿದ ಸಾಹಿತ್ಯ ಸಂಪತ್ತಿನ ರಕ್ಷಣೆಗಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯವಾಗಿದ್ದು,24 ವಸಂತ ಪೂರೈಸಿ ಮುನ್ನಡೆಯುತ್ತಿರುವ ಸಂಘ ಶತದಿನ ಪೂರೈಸಲಿ,ಕಲೆ,ಸಾಹಿತ್ಯ,ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಜನಮನ್ನಣೆಗಳಿಸಿರುವ ಕಲ್ಪತರು ನಾಡಿಗೆಹೆಚ್ಚಿನ ಸೇವೆ ಮಾಡಲಿ,ಸಾಮಾಜಿಕ ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಘ ಸಂಸ್ಥೆಗಳಿಗೆ ಬೆಂಬಲ ನೀಡುವುದು,ಸುಸಂಸ್ಕೃತ ನಾಗರೀಕ ಸಮಾಜದ ಕೆಲಸ,ಊರಿನ ಅಭಿವೃದ್ದಿಗಾಗಿ ಉತ್ತಮ ಕೆಲಸಗಳಿಗೆ ಕೈ ಜೋಡಿಸೋಣ ಎಂದು ತಿಳಿಸಿದರು.
.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಹಾಸ್ಯ ಸಾಹಿತಿ ರಿಚರ್ಡ್ ಲೂಯಿಸ್ ಕಲ್ಪತರು ನಾಡು ಕಲೆ,ಸಾಹಿತ್ಯ .ರಂಗಕಲೆಯ ತವರೂರು,ಬಹುತ್ವದಲ್ಲಿ ಏಕತೆಯನ್ನ ಕಾಣವ ಗುಣ ನಮ್ಮ ಮಣ್ಣಿನಲ್ಲಿ ಅಡಗಿದೆ.ಎಲ್ಲರನ್ನ ಪ್ರೀತಿಯಿಂದ ಕಂಡಾಗ ನಮ್ಮಲ್ಲಿ ವೈಷಮ್ಯಗಳುದೂರವಾಗುತ್ತವೆ. ಮನುಷ್ಯ ಅನುಮಾನ ,ಅವಮಾನ ಎಲ್ಲಾ ಎದುರಿಸಿ ನಿಂತಮೇಲೆ ಸನ್ಮಾನ ದೊರೆಯುತ್ತದೆ ವಿದ್ಯಾರ್ಥಿಗಳು ಅವಮಾನ ಅಪಮಾನಗಳಿಗೆ ಹಿಂಜರಿಯ ಬೇಡಿ ,ನಿರ್ಧಿಷ್ಟ ಗುರಿಯೊಂದಿಗೆ ಮುನ್ನಡೆಯಿರಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ಖ್ಯಾತ ಅಂಕಣಕಾರ ಪಿ . ರಾಜೇಂದ್ರ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಕಲೆ ಸಾಹಿತ್ಯದ ನಿಜವಾದ ಸೊಗಡು ಕಾಣಬಹುದು,ಆಧುನಿಕತೆಯ ನಾಗಲೋಟದಲ್ಲಿ ಕೃತಕ ಬುದ್ದಿಮತೆಯ ಕಾಲಘಟ್ಟದಲ್ಲಿ ಕನ್ನಡ ಕಳೆದು ಹೋಗುತ್ತದೆಯೋ ಎನ್ನುವ ಆತಂಕ ಎದುರಾಗಿದೆ ಬದಲಾಗುವ ಕಾಲಘಟ್ಟಕ್ಕೆ ತಕ್ಕಂತೆ ,ತಾಂತ್ರಿಕವಾಗಿ ಮುಂದುವರೆಯುವ ಅಗತ್ಯವಿದೆ.ಕನ್ನಡಗರು ಕನ್ನಡ ಭಾಷೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಹಾಗೂ ಆವಿಸ್ಕಾರಗಳನ್ನ ಪರಿಚಯಿಸ ಬೇಕು ಇಂಗ್ಲೀಶ್ ಗೆ ಸರಿಸಮವಾಗಿ ಕನ್ನಡ ತಂತ್ರಜ್ಞಾನ ಅಭಿವೃದ್ದಿ ಹೊಂದಿದ್ದಾಗ ಮಾತ್ರ ಜಾಗತೀಕವಾಗಿ ಸವಾಲು ಎದುರಿಸಲು ಸಾಧ್ಯವಾಗುತ್ತದೆ.ನಮ್ಮ ತಾಂತ್ರಿಕ ವಿಶ್ವವಿದ್ಯಾಲಯಗಳು ಹಾಗೂ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಸಮರ್ಥವಾದ ಕನ್ನಡ ಪಠ್ಯಕ್ರಮಗಳಿಲ್ಲದೆ, ತೊಂದರೆ ಅನುಭವಿಸುವಂತ್ತಾಗಿದೆ,ಕನ್ನಡ ಭಾಷೆ ಇಂಗ್ಲೀಶ್ ಭಾಷೆಗೆ ತಾಂತ್ರಿಕವಾಗಿ ಬೆಳವಣಿಗೆ ಹೊಂದಬೇಕು ಎಂದು ತಿಳಿಸಿದರು.
ಸಂಘದ ಸಂಸ್ಥಾಪಕ ಎನ್.ಬಾನುಪ್ರಶಾಂತ್ ಮಾತನಾಡಿ ಸಮಾನಮನಸ್ಕರು ಸೇರಿ ನಾಡಿನ ಕಲೆ,ಸಾಹಿತ್ಯ ಸಂಸ್ಕೃತಿ ಪರಂಪರೆ ಉಳಿವು,ಪರಿಸರ ರಕ್ಷಣೆ,ಮಹದಾಸೆಯೊಂದಿಗೆ ಹುಟ್ಟಿಕೊಂಡ ಸಂಘ 24 ವಸಂತ ಪೂರೈಸಿರುವುದು,ಹೆಮ್ಮೆಯ ವಿಚಾರವಾಗಿದೆ.ಶಾಸಕ ಕೆ.ಷಡಕ್ಷರಿ ಮಾಜಿ ಸಚಿವ ಬಿ.ಸಿ ನಾಗೇಶ್.ಸೇರಿದಂತೆ ತಾಲ್ಲೋಕಿನ ಸಹೃದಯರ ನಿರಂತರ ಸಹಕಾರ ನೀಡುತ್ತಿದ್ದು, ಸಂಘದ ಉತ್ಸಾಹ ಹಿಮ್ಮಡಿಗೊಳಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ವೆಂಕಟನಾರಾಯಣ್.ತಹಸಿಲ್ದಾರ್ ಮೋಹನ್ ಕುಮಾರ್. ನಗರಸಭೆ ಅಧ್ಯಕ್ಷೆ ಮೇಘಶ್ರೀ ಭೂಷಣ್.ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್. ಇಒ ಸುದರ್ಶನ್.ಖ್ಯಾತ ವೈದ್ಯರಾದ ಡಾ//ಶ್ರೀಧರ್ ಡಾ//ಸುರೇಶ್ . ರಂಗಭೂಮಿ ಕಲಾವಿದ ಬಸವರಾಜು.ಸಂಘದ ಅಧ್ಯಕ್ಷರಾದ ನಾಗರಾಜು. ಪ್ರೋಪೇಸರ್ ರೇಣುಕಯ್ಯ.ಶಾಮಸಂದರ್ .ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ನಾಗರಾಜ ಶೆಟ್ಟಿ. ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ










