Spread the love

ತಿಪಟೂರು:ಕಲ್ಪತರು ನಾಡಹಬ್ಬ ತಿಪಟೂರು ಗಣೇಶೋತ್ಸವ ದೇಶದಲ್ಲಿಯೇ ಪ್ರತಿಷ್ಠಿತ ಹಬ್ಬಗಳಲ್ಲಿ ಒಂದಾಗಿದ್ದು ಪ್ರಖ್ಯಾತಿ ಪಡೆದಿದೆ.ಗಣೇಶೋತ್ಸವಕ್ಕೆ ಹೆಚ್ಚಿನ ಮೆರುಗು ನೀಡಿ,ತುಮಕೂರು ದಸರಾ ಮಾದರಿಯಲ್ಲಿ ಆಚರಿಸುವ ದೃಷ್ಠಿಯಿಂದ ತಾಲ್ಲೋಕು ಆಡಳಿತ ಕೈ ಜೋಡಿಸಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಕಲ್ಪತರು ನಾಡಿನ ಹಬ್ಬ ಗಣೇಶೋತ್ಸವವನ್ನ ನಮ್ಮೂರ ಹಬ್ಬ ಕಲ್ಪೋತ್ಸವ ಎಂಬುದಾಗಿ ಆಚರಣೆ ಮಾಡಲಾಗುತ್ತಿದೆ,ಈ ಭಾರೀ ವಿಶೇಷವಾಗಿ ಹೆಲಿಕಾಪ್ಟರ್ ರೈಡ್ ಆಯೋಜನೆ ಮಾಡಲಾಗಿದೆ.ವಿಶೇಷ ವಾಗಿ ಕೃಷಿ ವಸ್ತು ಪ್ರದರ್ಶನ,ಸಂಗೀತ ರಸಸಂಜೆಕಾರ್ಯಕ್ರಮ, ಸೇರಿದಂತೆ 3ದಿನಗಳ ಕಾಲ ವಿಶೇಷ ಹಬ್ಬವಾಗಿ ನಡೆಯಲಿದ್ದು ತಿಪಟೂರುಗಣೇಶೋತ್ಸವಕ್ಕೆ ಹೆಚ್ಚಿನ ಮೆರುಗು ನೀಡಿ,ತುಮಕೂರು ದಸರಾ ಮಾದರಿಯಲ್ಲಿ ಆಚರಿಸುವ ದೃಷ್ಠಿಯಿಂದ ತಾಲ್ಲೋಕು ಆಡಳಿತ ಕೈ ಜೋಡಿಸಲಾಗುತ್ತಿದೆ,ಈ ಭಾರೀ ವಿಶೇಷವಾಗಿ ಹೆಲಿಕಾಪ್ಟರ್ ರೈಡ್ ಆಯೋಜನೆ ಮಾಡಲಾಗಿದೆ.ವಿಶೇಷ ವಾಗಿ ಕೃಷಿ ವಸ್ತು ಪ್ರದರ್ಶನ,ಸಂಗೀತ ರಸಸಂಜೆಕಾರ್ಯಕ್ರಮ, ಸೇರಿದಂತೆ 3ದಿನಗಳ ಕಾಲ ವಿಶೇಷ ಹಬ್ಬವಾಗಿ ನಡೆಯಲಿದ್ದು,ಗಣೇಶೋತ್ಸಕ್ಕೆ ಹೆಚ್ಚು ರಂಗುದೊರೆಯಲ್ಲಿದೆ.ಎಂದು ತಿಳಿಸಿದರು


ಖ್ಯಾತವೈದ್ಯರು ಕಲಾಕೃತಿ ತಂಡ ಅಧ್ಯಕ್ಷರಾದ ಡಾ//ಶ್ರೀಧರ್ ಮಾತನಾಡಿ ಕಳೆದ ಮೂರು ವರ್ಷಗಳಿಂದ ನಮ್ಮ ಕಲಾಕೃತಿ ತಂಡ ಕಲ್ಪೋತ್ಸವ ಆಚರಣೆ ಮಾಡುತ್ತಾ ಬಂದಿದೆ.ನಾಡಿನ ಹೆಸರಾಂತ ಕಲಾವಿದರಿಗೆ ಕಲ್ಪತರು ರತ್ನ ಪ್ರಶಸ್ತಿ ಪ್ರಧಾನ ಮಾಡುತ್ತಾ ಬಂದಿದ್ದು,ಈ ಭಾರಿ ಖ್ಯಾತ ಚಲನಚಿತ್ರ ನಟಿ ಉಮಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ರಂಗು ಹೆಚ್ಚಿಸ ಬೇಕು.ದಸರಾ ಮಾದರಿಯಲ್ಲಿ ಕಲ್ಪೋತ್ಸವ ಆಚರಣೆ ಮಾಡಬೇಕು ಎನ್ನುವ ದೃಷ್ಠಿಯಿಂದ ಶಾಸಕರ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಕಾರ್ಯಕ್ರಮ ನಡೆಸಲಾಗುತ್ತಿದ್ದು.ಕೃಷಿ ಹಾಗೂ ತೋಟಗಾರಿಕೆ ವಸ್ತು ಪ್ರದರ್ಶನ.ಹೆಲಿಕಾಪ್ಟರ್ ರೈಡ್.ಕ್ರೀಡಾಕೂಟ.ರಂಗೋಲಿ ಸ್ಪರ್ಧೆ,ಅರ್ಜನ್ ಜನ್ಯ ನೇತೃತ್ವದ ತಂಡದಿಂದ ರಂಗೀತ ರಸಸಂಜೆ ಕಾರ್ಯಕ್ರನ ಸೇರಿದಂತೆ ಹಲವಾರು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಇಒ ಸುದರ್ಶನ್.ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ವಿಜಯ್ ಕುಮಾರ್ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!