Spread the love

ತಿಪಟೂರು : ತಾಲ್ಲೂಕಿನ ಚಿಕ್ಕಹೊನ್ನವಳ್ಳಿ ಗ್ರಾಮದಲ್ಲಿ ಕಲ್ಪತರು ವಿದ್ಯಾ ಸಂಸ್ಥೆಯ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಏಳು ದಿನಗಳ ಕಾಲ ಎನ್‌.ಎಸ್‌.ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜನೆ ಮಾಡಲಾಗಿದೆ.
ಮೊದಲ ದಿನದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಟಿ.ಆರ್.ವಿಜಯಕುಮಾರಿ ಉದ್ಘಾಟಿಸಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಎನ್‌.ಎಸ್‌.ಎಸ್ ಶಿಸ್ತು ಸಂಯಮ ಸಹಬಾಳ್ವೆ ಸಹಜೀವನ ಸಹಭೋಜನದ ಬಗ್ಗೆ ತಿಳಿಸಿದರು.
ಅತಿಥಿ ರಂಗಪ್ಪ ಮಾತನಾಡಿ ಗ್ರಾಮದ ಸ್ವಚ್ಛತೆಗಿಂತ ಮನಸ್ಸಿನ ಸ್ವಚ್ಛತೆ ಕಾಪಾಡುವುದು ಇಂದಿನ ಅವಶ್ಯಕತೆಯಿದೆ ಎಂದರು. ಗ್ರಾಮಸ್ಥರಾದ ರಂಗಪ್ಪ, ಬಾಬು ಪ್ರಸಾದ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಲೋಕೇಶ್, ಶ್ರೀನಿವಾಸ್, ಲಾಲಟಾಕ್ಷ ಮೂರ್ತಿ, ಯೋಗನಂದ್ ಹಾಜರಿದ್ದರು. ಶಿಬಿರಾರ್ಥಿ ಚರಣ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!