ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿ ಗ್ರಾಮದಲ್ಲಿ ನೆನ್ನೆ ಬೀದಿ ನಾಯಿಗಳ ದಾಳಿಗೆ ತುತ್ತಾದ 6ವರ್ಷದ ಮಗು ನವ್ಯ ಸಾವನ್ನಪ್ಪಿದ್ದು. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಶವವನ್ನ ಅಂತ್ಯಸಂಸ್ಕಾರಕ್ಕಾಗಿ ಅಯ್ಯನಬಾವಿ ಗ್ರಾಮಕ್ಕೆ ತಂದಿದ್ದು.ಸ್ಥಳಕ್ಕೆ ಬಂದ ಮತ್ತಿಹಳ್ಳಿ ಗ್ರಾಮಪಂಚಾಯ್ತಿ ಪಿ.ಡಿ.ಒ ಶಿವರಾಜ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು.ಮಗುವಿನ ಸಾವಿಗೆ ನ್ಯಾಯದೊರಕಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಅಯ್ಯನಬಾವಿ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ,ನಾಯಿಗಳ ಹಾವಳಿಗೆ ಕಡಿವಾಣಹಾಕಲು ಅನೇಕಬಾರಿ ಗ್ರಾಮಪಂಚಾಯ್ತಿ ಗಮನಕ್ಕೆ ತಂದರೂ,ತಾಲ್ಲೋಕು ಆಡಳಿತ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ.ರಾತ್ರಿವೇಳೆ ಜನ ಒಡಾಡುವುದು ಕಷ್ಟವಾಗಿದೆ.ತಾಲ್ಲೋಕು ಪಂಚಾಯ್ತಿ ಅಧಿಕಾರಿಗಳು ಮಾತ್ರ,ನಾಯಿ ಹಿಡಿಯಲು ಹಣ ಮೀಸಲಿರಿಸಲಾಗಿದೆ ಅನೋ ಉತ್ತರ ನೀಡಿ,ಕೈತೊಳೆದುಕೊಳ್ಳುತ್ತಿದ್ದಾರೆ.ಮೃತ ಮಗುವಿನ ತಂದೆ,ತಾಯಿ ಇಬ್ಬರೂ ಅಂಗವಿಕಲರು, ಮಗುವಿನ ತಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡು ತೊಂದರೆಯಲ್ಲಿ ಇದ್ದರು,ಕುಟುಂಬಕ್ಕೆ ಆಸರೆಯಾಗಿದ ಮಗು ರಾಕ್ಷಸ ಬೀದಿ ನಾಯಿಗಳಿಗೆ ಬಲಿಯಾಗಿದೆ.ಕುಟುಂಬಕ್ಕೆ ಆಸರೆಯಾಗ ಬೇಕಿದ ಮಗು ಜೀವಕಳೆದುಕೊಂಡು ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಮೃತ ಮಗುವಿನ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು. ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸ್ಥಳಕ್ಕೆ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್.ಭೇಟಿ ನೀಡಿ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಸರ್ಕಾರದಿಂದ ದೊರೆಯುವ ಪರಿಹಾರ ಹಾಗೂ ಸವಲತ್ತುಗಳನ್ನ ದೊರಕಿಸಲು ಮೇಲಾಧಿಕಾರಿಗಳು ಹಾಗೂ ಶಾಸಕರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.ಮತ್ತಿಹಳ್ಳಿ ಗ್ರಾಮಪಂಚಾಯ್ತಿ ಪಿಡಿಒ ಶಿವರಾಜ್ .ತಿಪಟೂರು ಗ್ರಾಮಾಂತರ ಪೊಲೀಸ್ ಸಬ್ ಇನ್ಪೆಕ್ಟರ್ ನಾಗರಾಜು.ಮುಖಂಡರಾದ ಎಂ.ಎನ್ ಕಾಂತರಾಜು.ಕೆ.ಪಿ.ಸಿ.ಸಿ ಸದಸ್ಯ ಯೋಗೇಶ್. ಮಲ್ಲೇನಹಳ್ಳಿ ಕಾಂತರಾಜು .ಮಹೇಶ್ ಮುಂತ್ತಾದವರು ಭೇಟಿನೀಡಿ ಮೃತ ಮಗುವಿನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




