Spread the love

ತಿಪಟೂರು:ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಬೀರಸಂದ್ರ ಗ್ರಾಮದ ಗ್ರಾಮದೇವತೆ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಕಳ್ಳತನ ಮಾಡಿದ ಆರೋಪಿಯನ್ನ ಸೆರೆಹಿಡಿಯಲು ಕೆ.ಬಿ ಕ್ರಾಸ್ ಪೊಲೀಸರು ಯಶಸ್ವಿಯಾಗಿದ್ದಾರೆ‌
ದಿನಾಂಕ : 06/07/2025 ರಂದು ಪಿರ್ಯಾದಿಯಾದ ರಾಜಶೇಖರ್ ಸಿ.ಎಸ್‌ . ಬಿನ್ ಸದಾಶಿವಯ್ಯ ಸಿ ನೀಡಿದ ದೂರಿನಂತೆ , ದಿನಾಂಕ : 05/07/2025 ರಂದು ರಾತ್ರಿ ಯಾವುದೋ ಸಮಯದಲ್ಲಿ , ಬೇರಸಂದ್ರ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ , ಯಾರೋ ಕಳ್ಳರು ದೇವಸ್ಥಾನದ ಬೀಗ ಮುರಿದಿದ್ದು ಚಾಮುಂಡೇಶ್ವರಿ ವಿಗ್ರಹದ ಮೇಲಿದ್ದ ಚಿನ್ನದ ವಡವೆಗಳು ಮತ್ತು ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು , ಈ ಬಗ್ಗೆ , ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಕಿಬ್ಬನಹಳ್ಳಿ , ಠಾಣಾ ಮೊ.ನಂ .70 / 2025 ಕಲ 5,331 ( 4 ) , 305 ಬಿಎಸ್ ಎಸ್ ರೀತ , ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ .
ನಂತರ ಈ ಕೇಸಿನಲಿ ತನಿಖೆ ಕೈಗೊಂಡು , ಮಾಹಿತಿ ಮೇರೆಗೆ ಈ ಕೇಸಿನ ಆರೋಫಿತರು ಮತ್ತು ಕಳವಾದ ಮಾಲು ಪತ್ತೆ ಬಗ್ಗೆ ತಿಪಟುರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್ ಟಿ.ಕೆ , ಕಿಬ್ಬನಹಳ್ಳಿ , ಪಿ.ಎಸ್.ಐ. ಮಹೇಶ್ ಮಾಳಿ ಸಿಬ್ಬಂದಿಯವರುಗಳಾದ ಕಿಬ್ಬನಹಳ್ಳಿ , ಠಾಣಾ ಸಿಪಿಸಿ -824 ಚೇತನ್ ಕುಮಾರ್ ಜಿಎಸ್ . ಹೊನ್ನವಳ್ಳಿ , ಪೊಲೀಸ್ ಠಾಣಾ ಸಿಹೆಚ್ ಸಿ -33 ಗೋಪಾಲ್ ರವರೊಳಗೊಂಡ ತಂಡ ರಚನೆ ಮಾಡಿದ್ದು ಸಿಬ್ಬಂದಿಯವರು ಮಾಹಿತಿ ಮೇರೆಗೆ ಈ ಕೇಸಿನಲಿ , ಕಳವು ಮಾಡಿದ್ದ ಆರೋಪಿತನಾದ ಎ -1 ಕಾಂತೇಶ ಎಲ್ ಬಿನ್ ಲಕ್ಷ್ಮಪ್ಪ ( ಲೇಟ್ ) ನಾಯಕ ಜನಾಂಗ , ಟೈಲ್ಸ್ ಕೆಲಸ ಡ್ರೈವರ ಕೆಲಸ , ವಾಸ ಅರತೋಳಿಲು ಮಠ , ಹೊಳೆಹೊನ್ನೂರು ಹೋಬಳಿ , ಭದ್ರಾವತಿ ತಾಲೂಕ್ , ಶಿವಮೊಗ್ಗ ಜಿಲ್ಲೆ , ಹಾಲಿ ವಾಸ ಹಮಾಲಿ ಕಾಟ್ರಸ್ , ಜೇನುಕಲ್ ನಗರ ಅರಸೀಕೆರೆ ಟೌನ್ , ಹಾಸನ ಜಿಲೈ ರವರು 1 ) ಕಿಬ್ಬನಹಳ್ಳಿ ಪೊಲೀಸ್ ಠಾಣಾ ಮೊ.ನಂ .70 / 2025 ರ ಜೊತೆಗೆ ಇತರೆ ಕಳವು ಪ್ರಕರಣಗಳಾದ 2 ) ಅಮ್ಮತ್ತೂರು ಪೊಲೀಸ್ ಠಾಣಾ ಮೊ.ನಂ .77 / 2025
3 ) ಸಿಎಸ್ ಪುರ ಪೊಲೀಸ್ ಠಾಣಾ ಮೊ.ನಂ .84 / 2025 4 ) ಕಿಬ್ಬನಹಳ್ಳಿ ಪೊಲೀಸ್ ಠಾಣಾ ಮೊ.ನಂ .72 / 2025
5 ) ಹೊನ್ನವಳ್ಳಿ , ಪೊಲೀಸ್‌ ಠಾಣಾ ಮೊ.ನಂ .87 / 2025 ರ ಪ್ರಕರಣಗಳಲ್ಲಿ ಬಾಗಿಯಾಗಿರುವ ಬಗ್ಗೆ ಹೇಳಿಕೆ ನೀಡಿದ್ದು ಬಂದಿಸಿದ ಆರೋಪಿತನ ಕಡೆಯಿಂದ 345,840 / – ರೂ ಬೆಲೆ ಬಾಳುವ 43.230 ಗ್ರಾಂ ತೂಕದ ಚಿನ್ನದ ವಡವೆಗಳು ಮತ್ತು ಕೃತ್ಯಕ್ಕೆ ಬಳಸಿ ಒಂದು KA – 13 , D – 0228 ನೇ ನಂಬರಿನ ಅಶೋಕ ಲೈಲಾಂಡ್ ಗೂಡ್ಸ್‌ ವಾಹನವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡು ಎ -1 ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೆ .
ಈ ಪ್ರಕರಣವನ್ನು ಪತ್ತೆ ಹಚ್ಚಲು ತುಮಕೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಅಶೋಕ್ ಆದೇಶದ ಮೇರೆಗೆ ತಿಪಟೂರು ಉಪವಿಭಾಗದ ಪೊಲೀಸ್‌ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಹಾಗೂ ಉಪಾಧೀಕ್ಷಕರಾದ ಶ್ರೀ ವಿನಾಯಕ ಶೆಟ್ಟಿಗೇರಿ ರವರ ಮಾರ್ಗದರ್ಶನದಲ್ಲಿ ಶ್ರಮಿಸಿದ ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್ ಟಿಕೆ , ಕಿಬ್ಬನಹಳ್ಳಿ , ಪಿ.ಎಸ್.ಐ , ಮಹೇಶ್ ಮಾಳಿ
ಸಿಬ್ಬಂದಿಯವರುಗಳಾದ ತಿಪಟುರು
ಗ್ರಾಮಾಂತರ ವೃತ್ತ ಕಚೇರಿಯ ಸಿಹೆಚ್ ಸಿ -469 ಮಹೇಶ್ ಎಸ್ ಕೆ ಕಿಬ್ಬನಹಳ್ಳಿ , ಠಾಣಾ ಸಿಪಿಸಿ -824 ಚೇತನ್ ಕುಮಾರ್ ಜಿಎಸ್‌ ಹೊನ್ನವಳ್ಳಿ ಪೊಲೀಸ್ ಠಾಣಾ ಸಿಹೆಚ್ ಸಿ -33 ಗೋಪಾಲ್ ರವರನ್ನು ತುಮಕೂರು ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರವರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕಕರುಗಳು ಪ್ರಶಂಸಿರುತ್ತಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!