ತಿಪಟೂರು:ತಾಲ್ಲೋಕಿನ ಹಾಲ್ಕುರಿಕೆ ಹೆಚ್.ಸಿ.ಎಂ.ಜಿ ಪದವಿ ಪೂರ್ವ ಕಾಲೇಜು 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.

ಹಾಲ್ಕುರಿಕೆ ತರಳ ಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಆಹ್ವಾನಿತ ಗುರುವರ್ಯರನ್ನೆಲ್ಲ ಪುಷ್ಪಾರ್ಚನೆ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು.ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ವಿಶ್ರಾಂತ ಶಿಕ್ಷಕರಾದ ಆರ್. ರುದ್ರಪ್ಪ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ,ಗುರುವಿಗೆ ಶ್ರೇಷ್ಠ ಸ್ಥಾನಮಾನ ನೀಡಲಾಗಿದೆ,ಕೇವಲ ಅಕ್ಷರ ಕಲಿಸುವ ಕೆಲಸವಾಗಿರದೆ,ಸಮಾಜಕ್ಕೆ ಭವಿಷ್ಯದ ಪೀಳಿಗೆ ತಯಾರುಮಾಡುವ ಆತ್ಮಸಂತೃಪ್ತಿಯ ಗುರುತರ ಜವಾಬ್ದಾರಿ,ಅಮೂರ್ತವಾದ ಶಿಷ್ಯರ ಜೀವನವನ್ನ ತಿದ್ದಿ ತೀಡಿ ಮೂರ್ತರೂಪಕ್ಕೆ ತಂದಾಗ,ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ.ಶಿಕ್ಷಕರ ಶ್ರಮ ಸಹನೆ,ಸಮರ್ಪಣಾ ಭಾವನೆ ಶಿಕ್ಷಕರ ಆತ್ಮೋನ್ನತಿಗೆ ಕಾರಣವಾಗುವ ಜೊತೆಗೆ ಶಿಷ್ಯರ ಜೀವನಕ್ಕೆ ದಾರಿಯಾಗುತ್ತದೆ.ವೃತ್ತಿ ಜೀವನದ ಸಾರ್ಥಕ ಕ್ಷಣಗಳಿಗೆ ಗೌರವಾರ್ಧವಾಗಿ ನಮ್ಮ ಶಿಷ್ಯರಿಂದ ಗುರುವಂದನೆ ಸ್ವೀಕರಿಸುತ್ತಿರುವುದು ಖುಷಿಯ ಜೊತೆಗೆ ಧನ್ಯತಾ ಭಾವ ಉಂಟುಮಾಡಿದೆ.ನಮ್ಮ ಶಿಷ್ಯರಾದ ನೀವು ಕಲಿತ ವಿದ್ಯೆ ನಿಮ್ಮ ಜೀವನವನ್ನ ಸಮಾಜಮುಖಿಯಾಗಿ, ಸಾರ್ಥಕ ಜೀವನಕ್ಕೆ ದಾರಿ ದೀಪವಾಗಲಿ ಎಂದು ತಿಳಿಸಿದರು.

ಗುರುವಂದನೆ ಸ್ವೀಕರಿಸಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಉಷಾ ಕುಮಾರಿ ಯವರು ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಹೆಮ್ಮೆಯ ವೃತ್ತಿಯಾಗಿದೆ,ವಿದ್ಯಾರ್ಥಿಗಳಿಗೆ ನಾವೂ ತೋರುವ ಪ್ರೀತಿ ವಿಶ್ವಾಸಗಳು,ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚು ಸಧೃಡಗೊಳಿಸುವ ಜೊತೆಗೆ,ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಕಾರಣವಾಗುತ್ತದೆ,ನಾವು ಕಲಿಸಿದ ಮಕ್ಕಳು ನಮ್ಮ ಕಣ್ಮುಂದೆಯೇ ಉತ್ತಮ ಸಾಧನೆ ಮಾಡಿದಾಗ,ಸಮಾಜದಲ್ಲಿ ಉತ್ತಮ ಕೆಲಸ ಮಾಡಿ ಪ್ರಸಂಶೆಗೆ ಒಳಗಾದಾಗ, ಅವರ ಸಾಧನೆಗೆ ಕಾರಣವಾದ ಶಿಕ್ಷಕರಿಗೆ ಅತ್ಯಂತ ಸಂತೋಷ ಉಂಟುಮಾಡುತ್ತದೆ.ನಮ್ಮ ಶಿಷ್ಯರಿಂದ ಗುರುವಂದನೆ ಸ್ವೀಕರಿಸುತ್ತಿರುವುದು, ಅತ್ಯಂತ ಖುಷಿ ಹಾಗೂ ಅವಿಸ್ಮರಣೀಯ ಕ್ಷಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಿವೃತ್ತ ಶಿಕ್ಷಕರಾದ ಜಿ.ಬಸವರಾಜಪ್ಪ ಮಾತನಾಡಿ ನಮ್ಮ ಹಿಂದೂಪರಂಪರೆಯಲ್ಲಿ ಶಿಕ್ಷಕ ವೃತ್ತ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ, ಗುರುಶಿಷ್ಯರ ಪವಿತ್ರಬಂಧನ ಬೆಲೆಕಟ್ಟಲಾಗದ ಸಂಭಂದವಾಗಿದ್ದು,ನಮ್ಮ ಶಿಷ್ಯರು 25ವರ್ಷಗಳ ನಂತರ ಎಲ್ಲರೂ ಜೊತೆಗೂಡಿರುವುದು,ನಿವೃತ್ತಿಯಾಗಿದ ಎಲ್ಲಾ ಗುರುಗಳ ಮೇಲೆ ಪ್ರೀತಿ ಇಟ್ಟು ಕರೆದಿರುವುದು ತುಂಬಾ ಖುಷಿ ಉಂಟುಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಕೆ.ಜಿ ಸೋಮಶೇಖರಯ್ಯ.ಜಿ.ಬಸವರಾಜಪ್ಪ.ಆರ್ ರುದ್ರಪ್ಪ.ಶ್ರೀಮತಿ ವತ್ಸಲಾ ರವರು ಶ್ರೀಮತಿ ಉಷಾ ಕುಮಾರಿ.ಶ್ರೀಮತಿ ಅನಸೂಯ.ಶ್ರೀಮತಿ ಗಂಗೂಬಾಯಿ .ಶ್ರೀಮತಿ ಚಂದ್ರಕಲಾ .ಶ್ರೀಮತಿ ಭಾನುಮತಿ .ಶ್ರೀಮತಿ ನಾಗಮಣಿ.ಶ್ರೀಮತಿ ಇಂದಿರಾ.ಶ್ರೀಕಾಂತ್.ವೀರಭದ್ರಪ್ಪ.ಧನಂಜಯ್ಯ.ವಿಶ್ವನಾಥಯ್ಯ.ಆನಂದ್.ಗಂಗಣ್ಣ ರವರಿಗೆ ಗುರುನಮನ ಸಲ್ಲಿಸಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ




