ತಿಪಟೂರು:ನಗರದ ಕೋಡಿಸರ್ಕಲ್ ಬಳಿ ಇಂದು ಸುರಿಯುತ್ತಿರುವ ಸಾಮಾನ್ಯ ಮಳೆಗೆ ಯುಜಿಡಿ ಚೇಬರ್ ಗಳು ಉಕ್ಕಿಹರಿಯುತ್ತಿದ್ದು ನಗರದ ಕೋಡಿಸರ್ಕಲ್ ರಾಧಿಕ ಸೆರಾಮಿಕ್ಸ್ ಬಳಿಯ ಯುಜಿಡಿ ಚೇಬರ್ ಹಾಗೂ ಅಭಿಮಾನ್ ಪೆಟ್ರೋಲ್ ಬಂದ್ ಮುಂಭಾಗದ ಯುಜಿಡಿ ಚೇಬರ್ ಉಕ್ಕಿಹರಿಯುತ್ತಿರುವ ಕಾರಣ ರಾಧಿಕಾ ಸೇರಾಮಿಕ್ಸ್ ಮುಂಭಾಗ ಬಿ.ಹೆಚ್ ರಸ್ತೆ ಕೊಳೆ ನೀರಿನಿಂದ ಜಲಾವೃತಗೊಂಡು,ವಾಹನ ಸವಾರರು ಹಾಗೂ ಪಾದಚಾರಿಗಳು ಕೊಳಚೆ ನೀರಿನಲ್ಲಿಯೇ ಹೋಡಾಡುವಂತ್ತಾಗಿದೆ

.ಲಕ್ಷಾಂತರ ರೂಪಾಯಿ ಖರ್ಚುಮಾಡಿ ಯೂಜಿಡಿ ಚೇಬಂರ್ ರಿಪೇರಿ ಮಾಡಿಸಿದ,ನಗರಸಭೆ ಕೆಲಸ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತ್ತಾಗಿದೆ.ಯೂಜಿಡಿ ಚೇಂಬರ್ ಗಳ ಮೂಲಕ ಉಕ್ಕಿಹರಿಯುವ ನಗರದ ಮಲಮೂತ್ರ ಕೊಳಚೆ ತ್ಯಾಜ್ಯ ಹಳ್ಳಗಳನ್ನ ಸೇರಿ ನಂತರ ಹಳ್ಳಗಳ ಮೂಲಕ ಹಿಂಡಿಸ್ಕೆರೆ ಕೆರೆ ಸೇರುತ್ತದೆ ನಂತರ ಅಲ್ಲಿಂದ ಹಳ್ಳಗಳ ಮೂಲಕ ಈಚನೂರು ಕೆರೆಸೇರುತ್ತದೆ.ಇಂದು ಸುರಿದ ಸಾಮಾನ್ಯ ಮಳೆಗೆ ಯುಜಿಡಿ ಚೇಬರ್ ಗಳು ಉಕ್ಕಿಹರಿಯುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ,ನಗರದ ಜನಕುಡಿಯಲು ಕೊಳಚೆ ನೀರೆ ಅನಿವಾರ್ಯವಾಗುತ್ತದೆ.

ಈಡೇನಹಳ್ಳಿ ಜಾಕ್ ವೆಲ್ ಬಳಿ ಯುಜಿಡಿ ನೀರು ಸರಿಯಾಗಿ ಪಂಪ್ ಆಗದೆ ಹಿಂಮುಖವಾಗಿ ಉಕ್ಕಿಹರಿಯುತ್ತಿದೆ ಅದರಿಂದ ಸುಮಾರು 15 ಲಕ್ಷಅಳವಡಿಸಿ ನೀರು ಪಂಪ್ ಮಾಡಲಾಗುತ್ತಿದೆ.ಅಭಿಮಾನ್ ಪೆಟ್ರೋಲ್ ಬಂಕ್ ಮುಂಭಾಗ .ರಾಧಿಕಾ ಸೇರಾಮಿಕ್ಸ್ ಮುಂಭಾಗ,ಪಲ್ಲಾಘಟ್ಟಿ ಲೇಹೌಟ್ ತಿರುವಿನ ಯುಜಿಡಿ ಚೇಬರ್ ರಿಪೇರಿ ಮಾಡಿಸಿದ್ದು ಇನ್ನುಮುಂದೆ ಕೊಳಚೆ ನೀರು ಹಳ್ಳಗಳಿಗೆ ಸೇರುವುದಿಲ್ಲ ಎಂದು ಇಡೀ ನಗರಸಭೆ ಆಡಳಿತವೇ ಹೇಳಿತ್ತು,ಆದರೆ ಹೇಳಿಕೆ ನೀಡಿ ತಿಂಗಳುಗಳು ಕಳೆಯುವ ಮೊದಲೆ ಯಥಾಸ್ಥಿತಿ ಯುಜಿಡಿ ಚೇಂಬರ್ ಉಕ್ಕಿ ಹರಿದು, ಹಳ್ಳ ಸೇರುತ್ತಿದೆ.ಕೊಳಚೆ ನೀರಿ ರಸ್ತೆ ಕೆರೆಯಂತ್ತಾಗಿರು ನಗರಸಭೆ ಯಾವ ಅಧಿಕಾರಿಯು ಇತ್ತ ತಲೆಹಾಕಿಲ್ಲ,ಅಂಗಡಿ ವ್ಯಾಪಾರಿಗಳು ವಾಹನ ಸವಾರು ದುರ್ವಾಸನೆಯಲ್ಲಿಯೇ ಓಡಾಡುವಂತ್ತಾಗಿದ್ದು.ನಗರಸಭೆ ಕೂಡಲೇ ಉಕ್ಕಿಹರಿಯುತ್ತಿರುವ ಯುಜಿಡಿ ಸಮಸ್ಯೆ ಸರಿಪಡಿಸಬೇಕಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ
ವರದಿ:ಮಂಜುನಾಥ್ ಹಾಲ್ಕುರಿಕೆ






