ತಿಪಟೂರು:ಸೆಪ್ಟೆಂಬರ್ 26 ರಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಲಾಗಿದೆ ಎಂದು ದಲಿತಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ಕಾಂಗ್ರೇಸ್ ಪಕ್ಷದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸೆಪ್ಟೆಂಬರ್26 ರಂದು ಕಲ್ಪತರು ಕಾಲೇಜು ಆಡಿಟೋರಿಯಂ ನಲ್ಲಿ ಆಯೋಜನೆ ಮಾಡಿದ್ದ,ಸಂವಿಧಾನ ಅರಿವು ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಅಳವಡಿಸದೆ ಅವಮಾನ ಮಾಡಲಾಗಿದೆ. ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿ ಕೇವಲ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿದ್ದಾರೆ,ಸಂವಿಧಾನದ ಮೌಲ್ಯಗಳನ್ನ ಅರಿಯದೆ, ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿರುವುದು ತೀವ್ರಖಂಡನೀಯ, ಎನ್.ಎಸ್.ಯೂ.ಐ ನಡೆ ದಲಿತವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದ್ದು, ಡಾ//ಬಿ.ಆರ್ ಅಂಬೇಡ್ಕರ್ ಅವಮಾನ ಮಾಡಿರುವುದು, ಅಭಿಮಾನಿಗಳು,ಹಾಗೂ ದಲಿತ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ.
.ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿಯ ಬಗ್ಗೆ ಅರಿವಿಲ್ಲದಂತೆ ವರ್ತನೆ ಮಾಡಿರುವುದು ಸರಿಯಲ್ಲ,ಎನ್.ಎಸ್.ಯೂ.ಐ ಮುಖಂಡರು ತಕ್ಷಣ ಸಾರ್ಕ್ಷವಜನಿಕರ ಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂರಕ್ಷಣ ವೇದಿಕೆ ಉಪಾಧ್ಯಕ್ಷ ಶಿವಪುರ ರಾಮೇಶ್ ಮಾತನಾಡಿ ಎನ್.ಎಸ್.ಯೂ.ಐ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಲಾಗಿದೆ.ಡಾ//ಬಿ.ಆರ್ ಅಂಬೇಡ್ಕರ್ ಬಗ್ಗೆ,ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವಿಲ್ಲದೆ,ಸಂವಿಧಾನ ಅರಿವು ಕಾರ್ಯಕ್ರಮ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಆದಿಜಾಂಬವ ಸಂಘದ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ. ಡಿ.ಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್ ಗೌಡ.ಮಾದಿಗ ದಂಡೋರ ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ.ಸವಿತ ಸಮಾಜದ ಮಾಜಿ ತಾಲ್ಲೋಕು ಅಧ್ಯಕ್ಷ ಮುತ್ತುರಾಜ್ (ಮುತ್ಯಾಲಿ)ಮುಖಂಡರಾದ ಅಹಿಂಸಾ ಅಧ್ಯಕ್ಷ ಕಿರಣ್ ರಾಜ್.ಹರಚನಹಳ್ಳಿ, ಈಚನೂರು ಸೋಮಶೇಖರ್.ಕೊಪ್ಪ ಈಚನೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಉದಯ್ ಕುಮಾರ್ .ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ












