
ಇಂದಿರಾ ನಗರದಲ್ಲಿ ವರಹ ಲಾಂಚನ ಉಳ್ಳ ಕೇಸರಿ ಧ್ವಜ ತೆರವುಗೊಳಿಸಿರುವ ಕ್ರಮಖಂಡಿಸಿ ನಗರಸಭೆ ಮುಂದೆ ಹಿಂದೂ ಸಂಘಟನೆಗಳು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಸೂಕ್ಷ್ಮತೆ ಅರಿತ ತುಮಕೂರು ಅಡಿಷನಲ್ ಎಸ್.ಪಿ ಗೋಪಾಲ್ .ಪಿ .ಪ್ರತಿಭಟನಾ ನಿರತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ನಗರದ ಇಂದಿರಾನಗರ ವೃತ್ತದಲ್ಲಿ ಹಾರಿಸಲಾಗಿದ ವರಹ ಚಿಹ್ನೆಯುಲ್ಳ ಕೇಸರಿ ಧ್ವಜವನ್ನ ಜುಲೈ 23 ರಾತ್ರಿ 1ಗಂಟೆ ಸಮಯದಲ್ಲಿ ಪೊಲೀಸರು ತೆರವುಗೊಳಿಸಿದ್ದಾರೆ.ಇಂದಿರಾನಗರ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಸಮಾಜದಲ್ಲಿ ಶಾಂತಿಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ನಗರಸಭೆ ಪೌರಾಯುಕ್ತರು ಸಹ ಸಿಬ್ಬಂದಿ ಶ್ರೀನಿವಾಸ್ ಎಂಬುವವರಿಂದ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು,ಕಳೆದ 8ವರ್ಷಗಳಿಂದ ಇಂದಿರಾ ನಗರ ಸರ್ಕಲ್ ನಲ್ಲಿ ಕೇಸರಿ ಧ್ವಜ ಹಾರಿಸಲಾಗುತ್ತಿತ್ತು, ಇದರಂತೆ ಈವರ್ಷವೂ ಸಹ ಹಿಂದೂಪರ ಸಂಘಟನೆಗಳ ಯುವಕರ ಗುಂಪು ಕೇಸರಿ ಧ್ವಜ ಹಾರಿಸಿದ್ದಾರೆ,ಆದರೆ ತಿಪಟೂರು ನಗರಠಾಣೆ ಪೊಲೀಸರು ನಗರಸಭೆ ಸಿಬ್ಬಂದಿಯಿಂದ ದೂರು ಪಡೆದು ಹಿಂದೂಪರ ಸಂಘಟನೆ ಯುವಕರ ಮೇಲೆ ದೂರು ದಾಖಲು ಮಾಡಿದ್ದಾರೆ. ಕೂಡಲೇ ಯತಾಸ್ಥಿತಿ ಭಗವಧ್ವಜ ಹಾರಿಸಲು ಅನುಮತಿ ನೀಡಬೇಕು ಎಂದು ಮಾಜಿ ಶಿಕ್ಷಣ ಬಿ.ಸಿನಾಗೇಶ್ಒತ್ತಾಯಿಸಲಾಯಿಸಿದರು.

ಅಡಿಷನಲ್ ಎಸ್.ಪಿ ಗೋಪಾಲ್ ಪಿ .ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಭಗವಧ್ವಜ ಹಾರಿಸುವುದು.ಹಾಗೂ ಸಮಾಜದಲ್ಲಿ ಕೋಮುಸಾಮರಸ್ಯ ಕಾಪಾಡಲು ತಿಳಿಸಿದರು
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಸಮಾಜದಲ್ಲಿ ಶಾಂತಿ ಕಾಪಾಡುವುದು ಮುಖ್ಯ,ಇಂದಿರಾ ನಗರವೃತ್ತದಲ್ಲಿ ಯಾತಾಸ್ಥಿತಿ ಭಗವಧ್ವಜ ಹಾರಿಸಲು ಪೊಲೀಸ್ ಇಲಾಖೆ ಒಪ್ಪಿಕೊಂಡಿದೆ,ಎಲ್ಲಾರೂ ಹೋರಾಟವನ್ನ ಗೆಲುವು ಎಂದು ವಿಜಯೋತ್ಸವ ಮಾಡುವುದು, ಜಯಕಾರಕೂಗದಂತೆ ಶಾಂತಿಯಿಂದ ವರ್ತಿಸಬೇಕು.ಎಂದು ಮನವಿ ಮಾಡಿದ ಹಿನ್ನೆಲೆ ಪ್ರತಿಭಟನೆ ವಾಪಾಸ್ ಪಡೆಯಲಾಯಿತು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್ ಮುಖಂಡರಾದ ಪ್ರಸನ್ನ ಕುಮಾರ್.ಬಿಜೆಪಿ ಅಧ್ಯಕ್ಷ ಸತೀಶ್ ನಗರಾಧ್ಯಕ್ಷ ಹಳೇಪಾಳ್ಯ ಜಗದೀಶ್.ಯುವಮುಖಂಡ ವಿಶ್ವದೀಪ್.ನಾಗೇಶ್.ಶಶಿಕಿರಣ್.ಗುಲಾಬಿ ಸುರೇಶ್.ಮೈನ್ಸ್ ಬಸವರಾಜು.ತರಕಾರಿ ಗಂಗಾಧರ್. ಹಳೇಪಾಳ್ಯ ಸದಣ್ಣ. ಬಿಸ್ಲೇಹಳ್ಳಿ ಗದೀಶ್.ಪ್ರಕಾಶ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




