ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ಗ್ರಾಮದಲ್ಲಿ ತಲತಲಾಂತರದಿಂದ ಗ್ರಾಮದ ಕೃಷಿ ಸ್ನೇಹಿಯಾಗಿದ್ದ,ತೋಂಡಿ ಮನೆ ಅವಸನಗೊಳ್ಳುತ್ತಿದೆ.ಇಡೀ ತೋಂಡಿ ಮನೆ ಗಿಡಗಂಟೆಗಳಿಂತ ತುಂಬಿದ್ದು, ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಹಾಳಾಗಿದೆ.ಒತ್ತುವರಿದಾರರ ಕಣ್ಣಿಗೆ ಬಿದ್ದು ಸಂಪೂರ್ಣ ತ್ನ ಇರುವಿಕೆಯನ್ನೇ ಕಳೆದು ಕೊಂಡಿದೆ.ತೋಂಡಿಮನೆಎಂದರೆ ಬೇರೆನ್ನು ಅಲ್ಲ ಗೋವುಗಳ ಜೈಲು, ಗ್ರಾಮೀಣ ಭಾಗದಲ್ಲಿ ಬಿಡಾಡಿ ದನಗಳು. ಸಾಕುಪ್ರಾಣಿಗಳು ರೈತರ ಜಮೀನುಗಳಿಗೆ ನುಗ್ಗಿ ನಷ್ಟ ಉಂಟುಮಾಡಿದರೆ,ಅವುಗಳನ್ನ ಜಮೀನಿನ ಮಾಲೀಕ ತಂದು ಗ್ರಾಮಪಂಚಾಯ್ತಿ ಗಮನಕ್ಕೆ ತಂದು ಕೂಡಿಹಾಕಲಾಗುತ್ತಿತ್ತು.

ಕೂಡಿ ಹಾಕಿದ ದನಕರುಗಳು.ಆಡು ಕುರಿಗಳನ್ನ ತಂದು ಕೂಡಿಹಾಕಿದ್ದಾಗ. ಜಾನುವಾರುಗಳ ಮಾಲೀಕರು ಬರುವವರೆಗೆ ಗ್ರಾಮಪಂಚಾಯ್ತಿ (ಇದಕ್ಕೂ ಮುಂಚಿನ ಮಂಡಲ ಪಂಚಾಯ್ತಿ) ಗಳೇ ನೀರು ಮೇವು ಹಾಕಿಕೊಂಡು ನಿರ್ವಹಣೆ ಮಾಡುತ್ತಿದ್ದರು. ಜಾನುವಾರುಗಳ ಮಾಲೀಕರು ಬಂದನಂತರ ದಂಡಕಟ್ಟಿಸಿಕೊಂಡು ಮಾಲೀಕರಿಗೆ ಜಾನುವಾರುಗಳನ್ನ ವರ್ಗಾಯಿಸಲಾಗುತ್ತಿತ್ತು .ದಂಡದ ಒಂದು ಭಾಗವನ್ನ ಬೆಳೆ ನಷ್ಟ ಅನುಭವಿಸಿದ ರೈತನಿಗೆ ಕೊಡಲಾಗುತ್ತಿತ್ತು ಎನ್ನುವುದೇ ವಿಶೇಷ ಆದರೆ ಒಂದೆಡೆ ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಸಾಕಾಣಿಕೆಯಲ್ಲಿ ಇಳಿಯಾದ ಪರಿಣಾಮ.ಮತ್ತು ಹೈನುಗಾರಿಕೆ ಹೆಚ್ಚಾದಂತೆ ನಾಟಿ ತಳಿ ಹಸುಗಳ ಬದಲಾಗಿ ಸೀಮೆಹಸುಗಳು ಹೆಚ್ಚಾದಂತೆ .ಆಡು ಕುರಿ ಸಾಕಾಣಿಕೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯ ಕಾರಣ ತೋಂಡಿಮನೆಗಳ ಅಗತ್ಯತೆ ಕಡಿಮೆಯಾದ ಕಾರಣ ನಿರ್ವಹಣೆಯೇ ಇಲ್ಲದಂತ್ತಾಗಿ ತೋಂಡಿಮನೆ ಸಂಪೂರ್ಣ ಅವಸನಗೊಂಡಿದೆ.ಆದರೆ ಇತ್ತಿಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಬೀದಿ ನಾಯಿಗಳು ಮನುಷ್ಯನ ಮೇಲೆರಗುವ ವರದಿಗಾಳಾಗುತ್ತಿವೆ.ನಾಯಿಗಳ ನಿರ್ವಹಣೆಗೆ ಸ್ಥಳಾವಕಾಶದ ಕೊರತೆ ಕಾರಣನೀಡಿ ಕೈತೊಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಪರಂಪರಿಕ ಕೃಷಿ ಆಲೋಚನೆಗಳು ಹಾಗೂ ಪೂರ್ವಜರ ಆಲೋಚನಾ ಕ್ರಮ,ಮುಂದಾಲೋಚನೆಯಿಂದ ಕೂಡಿದ್ದವು ಎನ್ನುವುದಕ್ಕೆ ಹಾಲ್ಕುರಿಕೆ ಗ್ರಾಮದಲ್ಲಿ ನೂರಾರು ಹಿಂದೆಯೇ ಮನುಷ್ಯರಿಗೆ ಜೈಲುಗಳು ಇರುವಂತೆ,ಪ್ರಾಣಿಗಳಿಗೂ ಜೈಲು ಕಟ್ಟಿದರು,ಅವುಗಳ ನಿರ್ವಹಣೆಯನ್ನ ಗ್ರಾಮಪಂಚಾಯ್ತಿಯೇ ನಿರ್ವಹಣೆ ಮಾಡುತ್ತಿತ್ತು ಎನ್ನುವುದು ವಿಶೇಷವಾಗಿದೆ.ನಮ್ಮ ಮುಂದಿನ ಪೀಳಿಗೆಗೆ ಕೃಷಿ ಪರಂಪರೆಯ ಕುರುಹಾಗಿ ಉಳಿಯ ಬೇಕಿದ್ದ ತೋಂಡಿ ಮನೆ ಗ್ರಾಮಪಂಚಾಯ್ತಿ ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿ ಅವಸನಗೊಳ್ಳುತ್ತಿರುವುದು ವಿಪರ್ಯಾಸವೇ ಸರಿ.ತೋಂಡಿಮನೆ ಬಿದ್ದುಹೋಗಿ ಯಾರೋ ಭೂಗಳ್ಳರ ಸ್ವತ್ತಾಗುವ ಬದಲು. ಹಾಲ್ಕುರಿಕೆಯ ಪರಂಪರೆಯ ಕುರುಹಾಗಿ ಉಳಿಯಲಿ ನಮ್ಮ ಪರಂಪರೆಯ ಕುರುಹು ನಮ್ಮ ಊರಿನ ಹೆಗ್ಗಳಿಕೆಯಾಗಲಿ ಎನ್ನುವುದು ಹಾಲ್ಕುರಿಕೆ ಗ್ರಾಮಸ್ಥರ ಒತ್ತಾಯವಾಗಿದೆ.




