ತಿಪಟೂರು:ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ತಮ್ಮ ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆನೀಡಿದ್ದಾರೆ,…? ಅನೋ ವದಂತಿ ನಗರಾಧ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.ಆಕ್ಟೋಬರ್ ಅಂತ್ಯದ ವೇಳೆಗೆ ನಗರಸಭೆ ಆಡಳಿತ ಅವಧಿಕೊನೆಗೊಳ್ಳಲಿದೆ.ಆದರೇ ಈ ಸಮಯದಲ್ಲಿ ರಾಜೀನಾಮೆ ಪ್ರಹಸನ ಚರ್ಚೆಗೆ ಗ್ರಾಸವಾಗಿದೆ.ನಗರಸಭೆ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರಸಲ್ಲಿಸಿದ್ದಾರೆ ಅನೋ ಮಾತುಕತೆಗಳು ರೆಕ್ಕೆಪುಕ್ಕ ಕಟ್ಟಿಕೊಂಡಿವೆ.ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಮಾತುಕತೆ ನಡೆದಿತ್ತು ಎನ್ನಲಾಗಿದ್ದು,ಅಧಿಕಾರದ ಕೊನೆ ಒಂದುವರೇ ತಿಂಗಳು ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉಳಿದ ಅವಧಿಯಲ್ಲಿ ಉಪಾಧ್ಯಕ್ಷರು
ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಒಪ್ಪಂದವಾದ ಕಾರಣ ರಾಜೀನಾಮೆ ..?ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಅಧ್ಯಕ್ಷರು ರಾಜೀನಾಮೆ ಪತ್ರವನ್ನ ಜಿಲ್ಲಾಧಿಕಾರಿಗಳಿಗೆ ನೀಡಿರುವ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಹೊರಬಂದಿಲ್ಲ.ಶಾಸಕ ಕೆ.ಷಡಕ್ಷರಿಯವರು ದೆಹಲಿ ಪ್ರವಾಸದಲ್ಲಿ ಇದ್ದು,ಅವರು ತಿಪಟೂರಿಗೆ ಮರಳಿದ ನಂತರ ವದಂತಿಗಳಿಗೆ ಅಧೀಕೃತ ರೂಪದೊರೆಯಲಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ







