ತಿಪಟೂರು:ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಕೆ.ಪಿ ತಿಪ್ಪೆರುದ್ರಪ್ಪ ನವರ ಆಧ್ಯಕ್ಷತೆಯಲ್ಲಿ ನಡೆದ ಉದ್ಯಮಶೀಲತೆ ವೃತ್ತಿಯಾಗಿ ಅವಕಾಶಗಳ ಮಹಾಸಾಗರ, ಕೆ. ವಿ. ಎಸ್ ದೂರದೃಷ್ಟಿ 20035 ಇಂದಿನ ಚರ್ಚೆ ನಾಳಿನ ಭವಿಷ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತುಮಕೂರು ವಿಶ್ವವಿದ್ಯಾನಿಲಯ ರಿಜಿಸ್ಟರ್ ಎನ್.ಕೊಟ್ರೇಶ್ ಮಾತನಾಡಿ ಜಾಗತೀಕರಣದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ತಾಂತ್ರಿಕ ಜ್ಞಾನ ಅಗತ್ಯ.ದೇಶದಲ್ಲಿ ಉದ್ಯಮಗಳ ಸ್ಥಾಪನೆಗೆ ವಿಫುಲ ಅವಕಾಶಗಳಿವೆ,ತುಮಕೂರು ಮುಂದಿನ ದಿನಗಳಲ್ಲಿ ಕೈಗಾರಿಕಾ ಹಬ್ ಆಗಿಬೆಳೆಯುತ್ತಿದ್ದು.ನಮ್ಮ ವಿದ್ಯಾರ್ಥಿಗಳು ಭವಿಷ್ಯದ ದೃಷ್ಠಿಯಿಂದ ಉದ್ಯಮಿಗಳಾಗಿ ಬೆಳೆಯಬೇಕು,ಕೃಷಿ ಹಾಗೂ ಆಹಾರ ಉದ್ಯಮಕ್ಕೆ ಸಂಭಂದಿಸಿದಂತೆ,ಹೊಸ ಹೊಸ ಆವಿಸ್ಕಾರಗಳೊಂದಿಗೆ ಉದ್ಯಮಗಳನ್ನ ಸ್ಥಾಪನೆ ಮಾಡಿ,ಗ್ರಾಮೀಣ ಭಾಗದ ಯುವಕ ಯುವತಿರಿಗೆ ಉದ್ಯೋಗ ನೀಡುವ ಜೊತೆಗೆ ಸ್ವವಲಂಭನೆಯ ಬದುಕು ನಡೆಸಬಹುದು,ಈ ನಿಟ್ಟಿನಲ್ಲಿ ಕಲ್ಪತರು ವಿದ್ಯಾಸಂಸ್ಥೆ ಉತ್ತಮ ಹೆಜ್ಜೆ ಇಟ್ಟಿದ್ದು,ಕಲ್ಪತರು ನಾಡಿನಿಂದ ಉದ್ಯಮಪತಿಗಳು ತಯಾರು ಆಗಬೇಕು,ಹೊಸ ಹೊಸ ಉದ್ಯಮ ಸ್ಥಾಪನೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಅವುಗಳ ಸದ್ಬಳಕೆ ಮಾಡಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಪರ್ ಇಂಡಸ್ಟ್ರಿ ಛೇರ್ಮನ್ ಚಂದ್ರಶೇಖರ್ ಮಾತನಾಡಿ ಕಲ್ಪತರು ವಿದ್ಯಾಸಂಸ್ಥೆ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು ಇಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳ ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ,ನಮ್ಮ ವಿದ್ಯಾರ್ಥಿಗಳು ಉದ್ಯಮಿಗಳಾಗ ಬೇಕು ಎನ್ನುವ ಕನಸಿನೊಂದಿಗೆ ವಿದ್ಯಾರ್ಥಿಗಳಿಗಾಗಿ ಉದ್ಯಮ ತರಬೇತಿ ಕೇಂದ್ರ ಸ್ಥಾಪಿಸಿ ಸರ್ಕಾರದಿಂದ ದೊರೆಯುವ ಸಾಲಸೌಲಭ್ಯ,ಬ್ಯಾಂಕ್ ಸೌಲಭ್ಯ,ಹಾಗೂ ತಂತ್ರಜ್ಞಾನ ಮತ್ತು ಮಾರುಕಟ್ಟೆ ಸೌಲಭ್ಯ ಹಾಗೂ ವಿಸ್ತರಣೆ ಬಗ್ಗೆ ಮಾಹಿತಿ ನೀಡಿ ಭವಿಷ್ಯದಲ್ಲಿ ಹೊಸ ಉದ್ಯಮಿಗಳನ್ನ ತಯಾರು ಮಾಡುವ ಕೆಲಸ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು ಕಲ್ಪತರು ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳ ಬೇಕು. ನಮ್ಮಕಾಲದ ವಿದ್ಯಾಭ್ಯಾಸ ತುಂಬಾ ಕಷ್ಟಕರವಾಗಿದ್ದ ಕಾಲಾವಗಿತ್ತು ಇಂದಿನ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮಾಹಿತಿಗಳು ಬೇಗನೆ ಸಿಗುತ್ತವೆ ಆದರೆ ನಾವು ಓದುವ ಕಾಲದಲ್ಲಿ ಯಾವುದೇ ಮಾಹಿತಿಗಳು ನಮಗೆ ಲಭ್ಯವಾಗುತ್ತಿರಲಿಲ್ಲ ಇಲ್ಲಿರುವ ವಿದ್ಯಾರ್ಥಿಗಳೇ ಭಾಗ್ಯವಂತರು ಎಂದರು. ಇಂದು ಯಾವುದೇ ಒಂದು ಕಂಪನಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಆ ಕಂಪನಿಯ ಉತ್ಪನ್ನ ಬಹಳ ಗುಣಮಟ್ಟದಿಂದ ಕೂಡಿರಬೇಕು ಆಗ ಮಾತ್ರ ಉತ್ತಮವಾಗಿ ಬೆಳವಣಿಗೆ ಪಡೆಯಲು ಸಾಧ್ಯ ಎಂದರು.
ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಶಿವಪ್ರಸಾದ್ ಮಾತನಾಡಿ ತಿಪಟೂರಿಗೆ ಇಂದು ಮಹತ್ತರ ದಿನವಾಗಿದೆ ಇಂದು ನಡೆಯುತ್ತಿರುವ ಕಾರ್ಯಕ್ರಮ ಶಿಕ್ಷಣ ಯಾವ ದಿಕ್ಕಿನಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳು ತಿಳಿಸಲು ಸಹಕಾರಿಯಾಗಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನಗರಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಮನಾಗಿ ವಿದ್ಯಾಭ್ಯಾಸ ಮಾಡಬೇಕು ನಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೌಕರ್ಯ ಸಿಗಬೇಕು ಎನ್ನುವ ಸಂಸ್ಥಾಪಕರ ಆಶಯದಂತೆ ನಮ್ಮ ಎಲ್ಲಾ ಸದಸ್ಯರು ನಡೆಯುತ್ತಿದ್ದು,
ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ
ಉದ್ಯಮಶೀಲತೆ ಬಗ್ಗೆ ತರಬೇತಿ ನೀಡಬೇಕು, ಬಾಲ್ಯದಲ್ಲಿಯೇ ಉದ್ಯಮಗಳ ಸ್ಥಾಪನೆ ಬಗ್ಗೆ ಕನಸು ಬಿತ್ತಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದ್ದು, ಹೊಸದಾದ ಉತ್ಪನ್ನಗಳು, ಸೇವೆಗಳು ಅಥವಾ ವ್ಯವಹಾರಗಳನ್ನು ಪ್ರಾರಂಭಿಸುವುದು, ನಿರ್ವಹಿಸುವುದು ಮತ್ತು ಬೆಳೆಸುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವುದು ಇದರಲ್ಲಿ ಸೃಜನಾತ್ಮಕ ಆಲೋಚನೆಗಳು, ನಾವೀನ್ಯತೆ, ಅಪಾಯಗಳನ್ನು ತಡೆಯುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ರೂಢಿಸುವ ಕೆಲಸ ಮಾಡಿ ಉದ್ಯಮಿಗಳನ್ನ ತಯಾರು ಮಾಡಬೇಕು,ಲಾಭ ಗಳಿಸುವುದು ಮಾತ್ರವಲ್ಲದೆ, ಸಮಾಜಕ್ಕೆ ಮೌಲ್ಯವನ್ನು ಸೃಷ್ಟಿಸುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಕಡೆ ನಮ್ಮ ವಿದ್ಯಾರ್ಥಿಗಳು ತಯಾರಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ಪಿ ತಿಪ್ಪೇರುದ್ರಪ್ಪ, ಡಾ. ಸತೀಶ್ ಎಂ ಭಾವನಾಂಕರ್,
ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು, ಉಮೇಶ್ ಬೆಳ್ಳೂರು, ಟಿ.ಎಸ್ ಬಸವರಾಜು.ಎಮ್ ಆರ್ ಸಂಗಮೇಶ್, ಉಮೇಶ್ ಬಿ.ಎಸ್, ದೀಪಕ್ ,ಕಾರ್ಯದರ್ಶಿಗಳಾದ ಸುಧಾಕರ್.ಎಂ.ಆರ್ ಸಂಗಮೇಶ್.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







