
ತಿಪಟೂರು ರೈತ ಉತ್ಪಾದಕ ಕಂಪನಿ ಸರಕಾರದ ಸಹಯೋಗದಲ್ಲಿ ರೈತರೇ ಸ್ಥಾಪಿಸಿಕೊಂಡ ಕಂಪನಿಯಾಗಿದು ನಮ್ಮ ಸಂಸ್ಥೆ ವತಿಯಿಂದ ಮಾರುಕಟ್ಟೆದರದಲ್ಲಿ ನೇರವಾಗಿ ಕೊಬ್ಬರಿ ಖರೀದಿ ಮಾಡಲಾಗುವುದು ಎಂದು ತಿಪಟೂರು ರೈತ ಉತ್ಪಾದಕ ಕಂಪನಿ ಮುಖ್ಯಸ್ಥ ಮಾದೀಹಳ್ಳಿ ದಯಾನಂದಸ್ವಾಮಿ ತಿಳಿಸಿದರು

ನಗರದ ತಿಪಟೂರು ರೈತ ಉತ್ಪಾದಕ ಕಂಪನಿ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಮಾದೀಹಳ್ಳಿ ದಯಾನಂದಸ್ವಾಮಿ, ಕಸಬಾ ಹೋಬಳಿ ವ್ಯಪ್ತಿಯ ಆಸಕ್ತ ರೈತರು ಸೇರಿ ತಿಪಟೂರು ರೈತ ಉತ್ಪಾದಕ ಕಂಪನಿ ಸ್ಥಾಪಿಸಿ ನಬಾರ್ಡ್ ಹಾಗೂ ಇಶಾ ಔಟ್ರಿಚ್ ನೆರವಿನೊಂದಿಗೆ ಕೆಲಸ ಆರಂಭಿಸಿದ್ದು.ರೈತರು ತಾವೇ ಬೆಳೆದ ವಸ್ತುಗಳ ಖರೀದಿ, ರೈತರಿಗೆ ಅಗತ್ಯವಿರುವ ಬೀಜ ಗೊಬ್ಬರ ಹಾಗೂ ಕೃಷಿ ಪರಿಕರಗಳ ಮಾರಾಟ ಮಾಡಲಾಗುತ್ತಿದೆ,ಅಲ್ಲದೇ ರೈತರಿಗೆ ನೆರವಾಗಬಲ್ಲ .ಕಾಳುಮೆಣಸು. ಕೋಕಾ,ಎಲಕ್ಕಿ ಬೆಳೆಗಳ ಬೆಳೆಯಲು ಮಾರ್ಗದರ್ಶನ ಹಾಗೂ ನೆರವು ನೀಡಲಾಗುತ್ತಿದೆ.ನಮ್ಮ ಸಂಸ್ಥೆಯಿಂದ ಗುಣಮಟ್ಟದ ಕೊಬ್ಬರಿ ಮಾರಾಟ ಮಾಡಲಾಗುತ್ತಿದ್ದು.ತಿಪಟೂರು ರೈತ ಉತ್ಪಾದಕರ ಕಂಪನಿಯು ಕರ್ನಾಟಕ ರಫ್ತು ಮಂಡಳಿಗೆ ಕೊಬ್ಬರಿ ರವಾನೆ ಮಾಡುತ್ತಿದ್ದು ಉತ್ತಮ ಗುಣಮಟ್ಟದ ಕೊಬ್ಬರಿ ರವಾನೆ ಮಾಡಲಾಗಿದೆ ಎಂದು ಪ್ರಶಂಸ ಪತ್ರವನ್ನು ಕಂಪನಿಗೆ ನೀಡಿದೆ,ತಿಪಟೂರು ರೈತ ಉತ್ಪಾದಕರ ಸಂಘದ ವತಿಯಿಂದ ರೈತರಿಗೆ ಅನುಕೂಲಕರವಾಗುವಂತೆ ರೈತರ ಬೆಳೆದ ಕೊಬ್ಬರಿಯನ್ನು ಖರೀದಿ ಮಾಡಲಾಗುತ್ತಿದ್ದು ಎಪಿಎಂಸಿ ಟೆಂಡರ್ ಆಧಾರದಲ್ಲಿ ರೈತರಿಗೆ ಬೆಲೆ ನೀಡಲಾಗುವುದು ಹಾಗೂ ರೈತರಿಗೋಸ್ಕರ ಸಂಘದ ವತಿಯಿಂದ ಉಚಿತವಾಗಿ ಮಣ್ಣಿನ ಪರೀಕ್ಷೆಗಳನ್ನು ಮಾಡಿ ರೈತರ ಜಮೀನಿನ ಮಣ್ಣಿನ ಪರೀಕ್ಷೆ ಮಾಡಲಾಗುತ್ತಿದು ಆಸಕ್ತ ರೈತರು ಅನುಕೂಲ ಪಡೆಯಬಹುದು,ಎಂದು ತಿಳಿಸಿದರು

ಇಶಾ ಫೌಡೇಷನ್ ಅಧಿಕಾರಿ ರಭಿಯಾ,ಈಚನೂರು ಗ್ರಾಮಪಂಚಾಯ್ತಿ ನಿರ್ದೇಶಕಿ ಶಿವಗಂಗಮ್ಮ ತಡಸೂರು ಗ್ರಾಮಪಂಚಾಯ್ತಿ ನಿರ್ದೇಶಕ ಗಂಗಾಧರಯ್ಯ.ಗುಡಿಗೊಂಡನಹಳ್ಳಿ ಗ್ರಾ.ಪಂ ವಸಂತಕುಮಾರ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ
ಜಾಹಿರಾತು
