ತಿಪಟೂರು: ಕಾಂಕ್ರೇಟಿಕರಣ ನಾಗಾಲೋಟದಲ್ಲಿ ಪರಿಸರ ರಕ್ಷಣೆ ಮರೆತರೆ ನಮ್ಮ ಭವಿಷ್ಯ ದುಸ್ತರವಾಗುತ್ತದೆ,ನಮ್ಮ ಪರಿಸರ ಉಳಿಸುವ ಬೆಳೆಸುವ ಕೆಲಸ ನಮ್ಮ ಆಧ್ಯತೆಯಾಗಬೇಕು ಎಂದು ಕಂಚಾಘಟ್ಟ ಷಡಕ್ಷರ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ರುದ್ರಮುನಿಮಹಾಸ್ವಾಮೀಜಿ ತಿಳಿಸಿದರು

ತಾಲ್ಲೋಕಿನ ಕೋಟೆನಾಯ್ಕನಹಳ್ಳಿಯಎಸ್.ಆರ್.ಎಸ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ವಿಶ್ವ ಪರಿಸರ ದಿನದ ಆಂಗವಾಗಿ ಅಯೋಜಿಸಿದ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಶ್ರೀಗಳು ನಮ್ಮಮಕ್ಕಳು ಸುಂದರ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕು,ದೊಡ್ಡ ದೊಡ್ಡ ಪಟ್ಟಣಗಳ ಮಕ್ಕಳಿಗಿಂತ ನಮ್ಮ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತ ಶಿಕ್ಷಣ ನೀಡಬೇಕು ಎನ್ನುವುದು ನಮ್ಮ ಉದೇಶ,ನಮ್ಮ ಉದೇಶ ಸಾಕಾರಕ್ಕೆಸಿಬ್ಬಂದಿಗಳು ದುಡಿಯುತ್ತಿದ್ದಾರೆ.ಪರಿಸರ ಮನುಷ್ಯನ ಸೇರಿದಂತೆ ಜಗತ್ತಿನ ಜೀವಸಂಕುಲದ ಜೀವನಾಡಿ,ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ,ನಾವು ಸ್ವಚ್ಚ,ಸುಂದರ ಪರಿಸರದ ಜೊತೆ ಬದುಕುವ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ,ಶುದ್ದ ನೆಲೆ ಜಲ ಬಿಟ್ಟುಹೋಗಬೇಕು,ಸುಂದರ ಅಹ್ಲಾದಕರ ವಾತವಾರಣ,ಮನುಷ್ಯನ ಮಾನಸಿಕ ನೆಮ್ಮದಿ ನೀಡುವ ಜೊತೆಗೆ ಉತ್ತಮ ಆರೋಗ್ಯ ನೀಡುತ್ತದೆ.ನಮ್ಮ ಎಸ್.ಆರ್ .ಎಸ್ ಇಂಟರ್ ನ್ಯಾಷನಲ್ ಶಾಲೆಯ ಪರಿಸರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜ್ಞಾನಾರ್ಜನೆ ಜೊತೆಗೆ,ಮಕ್ಕಳ ಮಾನಸಿಕ ಸಧೃಡತೆ, ಪೂರಕವಾದ ಆಹ್ಲಾದಕರ ಪರಿಸರ ಇದೆ.ಮಕ್ಕಳು ಉತ್ತಮ ಪರಿಸರದೊಂದಿಗೆ ಆಡಿಬೆಳೆಯುತ್ತಿದ್ದಾರೆ.ನಾವು ಕಾಂಕ್ರೇಟಿಕರಣದ ನಾಗಾಲೋಟದ ಮಧ್ಯೆ,ಪರಿಸರ ರಕ್ಷಣೆಯನ್ನ ಕೈ ಬಿಟ್ಟರೆ ನಮ್ಮ ಭವಿಷ್ಯ ದುಸ್ಥರವಾಗಲಿದೆ,ನಾವು ನೀವೆಲ್ಲರೂ ಇಂದು ಕಣ್ಣ್ಮುಂದೆ ಕಾಣುತ್ತಿರುವ ಪ್ರಕೃತಿ ವಿಕೋಪ ಹಾಗೂ ಅವಗಡಗಳು ನಾನು ಅಭಿವೃದ್ದಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲೆನ ದೌರ್ಜನ್ಯದ ಪರಿಣಾಮ ಎಂದರೆ ತಪ್ಪಲ್ಲ,ಕಾಡು ಉಳಿಸುವ ಜೊತೆಗೆ,ಜಲಮೂಲಗಳು ರಕ್ಷಣೆ ಮಾಡಬೇಕು ಎಂದು ತಿಳಿಸಿದರು

ಎಸ್.ಆರ್.ಎಸ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತಾಧಿಕಾರಿ ಶ್ರೀ ಲಕ್ಷ್ಮೀ ನಿರಂಜನ್ ಮಾತನಾಡಿ ಪ್ರಕೃತಿಯೆ ಜೀವ ಸಂಕುಲದ ಆಧಾರ,ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಪರಿಸರ,ನೆಲ ಜಲದ ಅರಿವು ಮೂಡಿಸುವುದರಿಂದ ಪ್ರಕೃತಿ ರಕ್ಷಣೆಗೆ ಆದ್ಯತೆ ನೀಡುತ್ತಿದ್ದೇವೆ.ನಮ್ಮ ಶಾಲೆ ಆಹ್ಲಾದಕರ ವಾತವರಣ,ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ,ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಎಸ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಚಾರ್ಯ ಲಂಕೇಶ್.ಶಿಕ್ಷಕರಾದ ಶ್ರೀಮತಿ ಮಂಗಳ.ಶ್ರೀಮತಿ ಶೀಲ್ಪ.ಶ್ರೀಮತಿ ಯಮುನಾ.ಶ್ರೀಮತಿ ವಿದ್ಯಾ.ಮುಂತ್ತಾದವರು ಉಪಸ್ಥಿತರಿದರು.
ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಕುರಿತು ಮಕ್ಕಳಿಂದ ಪ್ರತ್ಯೆಕ್ಷಿಕೆ .ಪ್ರಭಂದ ಸ್ಪರ್ಧೆ,ಭಾಷಣ ಸ್ಪರ್ಧೆನಡೆಸಲಾಯಿತು.ನಮ್ಮ ಶಾಲೆ ನಮ್ಮ ಪರಿಸರ ಎಂಬ ಹೆಸರಿನಲ್ಲಿ ಸ್ವಚ್ಚತೆ ಅರಿವು ಮೂಡಿಸುವ ಜೊತೆಗೆ ಸಸಿಗಳ ನೆಟ್ಟು ಪೋಷಣೆ ಜವಾಬ್ದಾರಿ ನೀಡಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ




