ತಿಪಟೂರು:ಕರ್ನಾಟಕದ ಸಾಂಸ್ಕೃತಕ ನಾಯಕ,ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನ ಕಲ್ಪತರು ನಾಡು ತಿಪಟೂರಿನ ಹೃದಯಭಾಗವಾದ ಕೋಡಿಸರ್ಕಲ್ ನಲ್ಲಿ ಸ್ಥಾಪನೆ ಮಾಡಬೇಕು,ಏಪ್ರಿಲ್ 30ರಂದು ಪುತ್ಥಳಿಸ್ಥಾಪನೆ ಮಾಡಿ ಪೂಜೆಸಲ್ಲಿಸಬೇಕು ಎಂದು ಒತ್ತಾಯಿಸಿ ತಿಪಟೂರು ತಾಲ್ಲೋಕು ಬಸವ ಬಳಗದಿಂದ ನಗರಸಭೆಪೌರಾಯುಕ್ತರ ಮೂಲಕ ಸರ್ಕಾರಕ್ಕೆ ಮನವಿಪತ್ರಸಲ್ಲಿಸಲಾಯಿತು.

ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಬಸವ ಬಳಗದ ಮುಖಂಡ ಆರ್.ಎಸ್ ಮನೋಹರ್ ಮಾತನಾಡಿ ಕರ್ನಾಟಕದ ಸಾಂಸ್ಕೃತಿಕ ನಾಯಕ,ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನ ತಿಪಟೂರು ನಗರದ ಹೃದಯಭಾಗವಾದ ಕೋಡಿಸರ್ಕಲ್ ನಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಬಸವೇಶ್ವರರ ಅನುಯಾಯಿಗಳ ಕೂಗ ಹಲವಾರು ದಶಕಗಳಿಂದ ಕೇಳಿಬರುತ್ತಿದೆ,ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ,ಕಳೆದ ವರ್ಷ ಕೋಡಿ ಸರ್ಕಲ್ ನಲ್ಲಿ ಇರುವ ನಿರ್ಮಾಣ ಹಂತದ ಮಂಟಪದಲ್ಲಿ ಬಸವ ಬಳಗ ಹಾಗೂ ಬಸವೇಶ್ವರರ ಅಭಿಮಾನಿಗಳು ಪುತ್ಥಳಿಸ್ಥಾಪನೆ ಮಾಡಿ,ಪೂಜೆಸಲ್ಲಿಸಲಾಗಿತ್ತು,ಸರ್ಕಾರ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ, ಕೋಡಿ ಸರ್ಕಲ್ ನಲ್ಲಿಸ್ಥಾಪನೆ ಮಾಡಿ ಪೂಜೆಗೆ ಒಳಗಾಗಿದ ಮೂರ್ತಿಯನ್ನೆ ಕಿತ್ತುತಂದು,ನಗರಸಭೆ ಗೋಡೋನ್ ನಲ್ಲಿ ಇರಿಸಿ ಪೂಜೆಪುನಸ್ಕಾರವಿಲ್ಲದೆ, ಅಪಮಾನಗೊಳಿಸಲಾಗಿದೆ. ನಗರಸಭೆ ಹಾಗೂ ಜಿಲ್ಲಾಡಳಿತದ ಈ ಕೃತ್ಯ ಬಸವೇಶ್ವರರ ಅಭಿಮಾನಿಗಳಿಗೆ ಮಾಡಿದ ಅವಮಾನ ಎನ್ನಬಹುದು, ತಾಲ್ಲೋಕು ಆಡಳಿತ ಬಸವ ಜಯಂತಿಯ ಒಳಗೆ ಕೋಡಿ ಸರ್ಕಲ್ ಬಳಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಿ, ಪೂಜೆಸಲ್ಲಿಸಬೇಕು,ನಮ್ಮ ಬೇಡಿಕೆಯನ್ನ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಬಸವ ಬಳಗ ಹಾಗೂ ಬಸವೇಶ್ವರರ ಅಭಿಮಾನಿಗಳು ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ಮುಖಂಡರಾದ ಹರೀಸಮುದ್ರ ಗಂಗಾಧರ್.ಬಳ್ಳೆಕಟ್ಟೆ ಸುರೇಶ್,ಮಲ್ಲಿಕಾರ್ಜುನ್.ಗೊರಗೊಂಡನಹಳ್ಳಿ ಶರತ್ ಕಲ್ಲೆಗೌಡನಪಾಳ್ಯ. ಸುದರ್ಶನ್ ಪಂಚಾಕ್ಷರಿ,ಮಧು.ಲೋಕೇಶ್,ಪ್ರಶಾಂತ್ ಕರೀಕೆರೆ.ಪ್ರಕಾಶ್.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




