ತಿಪಟೂರು :ಬಾಲ್ಯಮತ್ತು ವಿದ್ಯಾರ್ಥಿ ಜೀವನ ವ್ಯಕ್ತಿಯ ಸಮೃದ್ಧ ಬದುಕಿನ ಬೀಜವಿದ್ದಹಾಗೆ.ಬೆಳೆಗೆ ಉತ್ತಮ ಪೋಷಣೆ ನೀಡಿದರೆ ಬೆಳೆ ಚೆನ್ನಾಗಿ ಬೆಳೆಯುತ್ತೆ,.,ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ,ದೇಶಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಖ್ಯಾತ ಚಲಚಿತ್ರನಟ ಹನುಮಂತೆಗೌಡ ತಿಳಿಸಿದರು
ನಗರದ ಸರ್ಕಾರ ಬಾಲಕರ ಪದವಿಪೂರ್ವಕಾಲೇಜು ಆವರಣದಲ್ಲಿ ದೀಕ್ಷಾ ಹೆರಿಟೇಜ್ ಸ್ಕೂಲ್ ಆಯೋಜಿಸಿದ ಶಾಲಾ ವಾರ್ಷಿಕೋತ್ಸವ ,ಸಿರಿಸಂಭ್ರಮ ಉದ್ಘಾಟಿಸಿದ ಅವರು ಮಾತನಾಡಿ ಮನುಷ್ಯನ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನ ಅವರ ಇಡೀ ಜೀವನಕ್ಕೆ ಅಡಿಪಾಯವಿದ್ದಹಾಗೆ ನಾವು ಉತ್ತಮ ಸಂಸ್ಕಾರ ನೀಡಿದರೆ ಉತ್ತಮ ಪ್ರಜೆಗಳಾಗುತ್ತಾರೆ.ನಡೆದಾಡುವ ದೇವರು ಶ್ರೀ ಸಿದ್ದಗಂಗ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು,ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ,ಆಶ್ರಮ,ಜ್ಞಾನ ದಾಸೋಹ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ,ಶ್ರೀಮಠದಲ್ಲಿ ಬೆಳೆದ ಸಾವಿರಾರು ವಿದ್ಯಾರ್ಥಿಗಳು ದೇಶದಾದ್ಯಂತ ವಿವಿಧ ಉನ್ನತ ಹುದ್ದೆ ಹೊಂದಿದ್ದಾರೆ.ಶ್ರೀಸಿದ್ದಗಂಗಮಠದ ಸ್ಪೂರ್ಥಿಯಿಂದ ನೂರಾರು ಮಠಗಳು,ಖಾಸಗೀ ಸಂಘ ಸಂಸ್ಥೆಗಳು ಶಾಲಾಕಾಲೇಜು ತೆರೆದು ಶಿಕ್ಷಣ ನೀಡು ಜ್ಞಾನದಾಸೋಹ ನೀಡುತ್ತಿವೆ.ದೀಕ್ಷಾ ಹೆರಿಟೇಜ್ ಸ್ಕೂಲ್ ತಿಪಟೂರಿನಲ್ಲಿ ಉತ್ತಮ ಶಿಕ್ಷಣ ಸಂಸ್ಕಾರ ನೀಡುವ ಕೆಲಸಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಶಿಕ್ಷಣ ಕ್ಷೇತ್ರ ಪವಿತ್ರವಾದ ಕ್ಷೇತ್ರವಾಗಿದೆ,ಸರ್ಕಾರ ಎಲ್ಲಾ ಕೆಲಸವನ್ನ ಮಾಡಲು ಸಾಧ್ಯವಿಲ್ಲ.ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲು ಸರ್ಕಾರದ ಜೊತೆ ಮಠಮಾನ್ಯಗಳು.ಖಾಸಗೀ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕವಾಗಿ ಸೇವೆಸಲ್ಲಿಸುತ್ತಿವೆ.ತುಮಕೂರು ನಂತರ ತಿಪಟೂರು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು ಖಾಸಗೀ ಶಿಕ್ಷಣ ಸಂಸ್ಥೆಗಳು ನೀಡುತ್ತಿರು ಗುಣಮಟ್ಟದ ಶಿಕ್ಷಣವೂ ಕಾರಣವಾಗಿದೆ. ಶಾಲಾಕಾಲೇಜುಗಳು ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ದೀಕ್ಷಾ ಹೆರಿಟೇಜ್ ಸ್ಕೂಲ್ ಅಧ್ಯಕ್ಷ ಹನುಮರಂಗಯ್ಯ ಮಾತನಾಡಿ ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ,ಗ್ರಾಮೀಣ ಭಾಗದ ವಿದ್ಯಾರ್ಥಿಗಳಿ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಧ್ಯೇಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್.ಖ್ಯಾತ ವೈದ್ಯರಾದ ಡಾ//ಶ್ರೀಧರ್.ಮುಖಂಡರಾದ ಲಕ್ಷ್ಮೀನಾರಾಯಣ್.ಸಿದ್ದರಾಜು. ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆದಿತ್ಯ ಜಯಣ್ಣ.ದೀಕ್ಷಾ ಹೆರಿಟೇಜ್ ಸ್ಕೂಲ್ ಕಾರ್ಯದರ್ಶಿ ನವೀನ್ .ಕಾಂಗ್ರೇಸ್ ಸೇವಾದಳ ರಾಜ್ಯ ಕಾರ್ಯದರ್ಶಿ ಮಾದೀಹಳ್ಳಿ ಉಮೇಶ್.ಮಾದೀಹಳ್ಳಿ ರೇಣು.ಸೇರಿದಂತೆ ಅನೇಕರು ಉಪಸ್ಥಿತರಿದರು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ





