: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಸಚಿವ ವಿ.ಸೋಮಣ್ಣ ತಿಪಟೂರಿಗೆ ಭೇಟಿ ಹಾಸನ ಸರ್ಕಲ್ ಶಾರದ ನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು.
ಕಾಮಗಾರಿ ಪರಿಶೀಲನೆ ವೇಳೆ ರೈಲ್ವೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವರು ತಿಪಟೂರು ಶಾರದ ನಗರ ರೈಲ್ವೆ ಮೆಲ್ಸೇತುವೆ ಕಾಮಗಾರಿ ಹಾಗೂ ಹೊನ್ನವಳ್ಳಿ ರಸ್ತೆ ರೈಲ್ವೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು ಅಧಿಕಾರಿಗಳು ಮೇ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸ ಬೇಕು. ನಾನು ಭೇಟಿಗೆ ಬರುತ್ತೇನೆ ಎಂದು ಕಾಮಗಾರಿ ಪಿಲ್ಲರ್ ತೆಗೆಯುತ್ತಿದ್ದೀರಿ ನಿಮಗೆ ಜವಾಬ್ದಾರಿಇದೆಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಪಟೂರಿಗೆ ಭೇಟಿ ನೀಡಿದ ಸಚಿವರು ನಂತರ ಹೊಸಪಟ್ಟಣದಶ್ರೀದುರ್ಗಮ್ಮ ದೇವಾಲಯದ ಜಾತ್ರೆಯಲ್ಲಿ ಭಾಗವಹಿಸಿ ಶ್ರೀ ಹೊಸಪಟ್ಟಣದಮ್ಮ ದೇವಿಗೆ ವಿಶೇಷ ಪೂಜೆಸಲ್ಲಿಸಿದರು.ನಂತರ ಹೊನ್ನವಳ್ಳಿಯಲ್ಲಿ ನಡೆದ ಹಿಂದೂಸಮಾಜೋತ್ಸವದಲ್ಲಿ ಭಾಗವಹಿಸಿ ಭಾರತಮಾತೆ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷರಾದ ಸತೀಶ್.ನಗರಾಧ್ಯಕ್ಷ ಜಗದೀಶ್.ಯುವಮುಖಂಡ ವಿಶ್ವದೀಪ್ ಬಿ.ಸಿ ನಾಗೇಶ್.ಮಾಜಿ ನಗರಸಭೆ ಅಧ್ಯಕ್ಷರಾಮ್ ಮೋಹನ್.ಶಶಿಕಿರಣ್ ಜೆಡಿಎಸ್ ಮುಖಂಡ ಕೆಟಿ ಶಾಂತಕುಮಾರ್ .ಜಕ್ಕನಹಳ್ಳಿ ಲಿಂಗರಾಜು.ರೈಲ್ವೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ





