Spread the love

ತಿಪಟೂರು :ಭಕ್ತರ ಪಾಲಿನ ಆರಾಧ್ಯಧೈವ ಅರಸೀಕೆರೆ ತಾಲ್ಲೋಕು ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಉತ್ಸವ ತಿಪಟೂರಿನಲ್ಲಿ ಅದ್ದೂರಿಯಾಗಿ ನಡೆಸಲಾಯಿತು.


ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆಸಲ್ಲಿಸಲಾಯಿತು. ಪೂಜೆ ಹಾಗೂ ಅಲಂಕಾರ ನೆರವೇರಿಸಿ.ನಂತರ ಪುಷ್ಪಾಲಂಕೃತ ವಾಹನದಲ್ಲಿ ಕೂರಿಸಿ.ನಂದಿಧ್ವಜ ಕುಣಿತ,ಲಿಂಗದವೀರರ ಕುಣಿತ,ಬಸವನ ಉತ್ಸವ.ನಗಾರಿ ವಾಧ್ಯ.ಚಿಟ್ಟಿಮೇಳ. ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆ ಕೋಡಿದರ್ಕಲ್. ದೊಡ್ಡಪೇಟೆ. ಬಿ.ಹೆಚ್ ರಸ್ತೆ ಮಾರ್ಗವಾಗಿ ಕೆ.ಆರ್ ಬಡಾವಣೆ ಶ್ರೀ ಗುರುಕುಲ ಕಣ್ಯಾಣ ಮಂಟಪದಲ್ಲಿ ಶ್ರೀ ಜೇನುಕಲ್ ಸಿದ್ದೇಶ್ಚರ ಸ್ವಾಮಿಯವರಿಗೆ ವಿಶೇಷ ಪೂಜೆಸಲ್ಲಿಸಲಾಯಿತು.ಭಕ್ತರು ಹಣ್ಣುಕಾಯಿ .ಮಡಿಲಕ್ಕಿ ಸಲ್ಲಿಸಿ ಪೂಜೆಸಲ್ಲಿಸಿದರು.
ಸಾವಿರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!