Spread the love

ತಿಪಟೂರು :ನಗರದ ವಿವಿಧ ಬಡಾವಣೆಗಳಲ್ಲಿ ನಗರಸಭೆ ನಿಧಿಯಿಂದ ಸುಮಾರು 6ಕೋಟಿವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿ ಪೂಜೆ ನೆರವೇರಿಸಿದರು.


ನಗರದ ಪಲ್ಲಾಗಟ್ಟಿ ಲೇಔಟ್ ವಾಲ್ಮಿಕಿ ಭವನ ರಸ್ತೆ.ಬಂಡಿಹಳ್ಳಿ ಸ್ಮಶಾನದ ರಸ್ತೆ.ನಾಲ್ ಬಂದ್ ವಾಡಿ ರಸ್ತೆ,ಲಾಯರ್ ನಟರಾಜು ಮನೆ ರಸ್ತೆ.ಸಾಯಿಬಾಬಾ ದೇವಾಲಯ ರಸ್ತೆ.ಖಾಸಗೀ ಬಸ್ ಸ್ಟ್ಯಾಂಡ್ ರಸ್ತೆ,ಆರ್.ಸಿ.ಸಿ ಟ್ಯಾಂಕ್ ರಸ್ತೆ.ಕಂಚಾಘಟ್ಟ ಹೈಟೆನ್ಷನ್ ರೋಡ್ ಸರ್ಕಾರಿ ಪ್ರಾಥಮಿಕ ಪಾಠಶಾಲೆ ರಸ್ತೆ.ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ ರಸ್ತೆ ಬಂದಿ ಇಂಟರ್ ಲಾಕ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.


ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ನಗರದ ಅಭಿವೃದ್ದಿಗೆ ಅಗತ್ಯವಾದ ಅನುದಾನವನ್ನ ನಗರಸಭೆ ಅನುದಾನದ ಸುಮಾರು6ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಸೇರಿದಂತೆ ವಿವಿಧ ಅಭಿವೃದ್ದಿಗೆ ಅನುದಾನ ನೀಡಿದ್ದು,ಗುಣಮಟ್ಟದ ಕಾಮಗಾರಿಯನ್ನ ನಿಗದಿತ ಕಾಲಮಿತಿಯಲ್ಲಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್.ಉಪಾಧ್ಯೆಕ್ಷೆ ಶ್ರೀಮತಿ ಮೇಘನಾ ಭೂಷಣ್.ಕೆ.ಪಿಸಿಸಿ ಸದಸ್ಯ ಹಾಗೂ ನಗರಸಭಾ ಸದಸ್ಯ ವಿ.ಯೋಗೇಶ್‌.ನಾಮಿನಿ ಸದಸ್ಯ ಲೋಕನಾಥ್ ಸಿಂಗ್.ಯೋಗೀಶ್ ಪ್ರಸಾದ್.ಮುಂತ್ತಾದವರು ಉಪಸ್ಥಿತರಿದರು

error: Content is protected !!