ತಿಪಟೂರಿನ ಶ್ರೀ ಸತ್ಯ ಗಣಪತಿ ವಿಶ್ವವಿಖ್ಯಾತ ಗಣೇಶೋತ್ಸವಗಳಲ್ಲಿ ಒಂದು ಮೈಸೂರು ದಸರಾ, ಬೆಂಗಳೂರು ಕರಗದಷ್ಟೇ ಪ್ರಸಿದ್ದಿ ಪಡೆದ ಗಣೇಶ, ತಿಪಟೂರು ಗಣೇಶೋತ್ಸವ ವಿಶೇಷ ಹಾಗೂ ವಿಶಿಷ್ಟವೂ ಹೌದು,ಪ್ರತಿವರ್ಷದಂತೆ ನಡೆಯುವ ವಿಸರ್ಜನಾ ಮಹೋತ್ಸವ ಮೆರವಣಿಗೆ ರಾಜ್ಯದಲ್ಲಿ ವಿಶೇಷವಾಗಿ ನಡೆಯುವ ಹಬ್ಬ
ದಿನವಿಡಿ ವಿಶೇಷ ಪೂಜಾಕೈಂಕರ್ಯ ವಿವಿಧ ಅಲಂಕಾರ ಸೇವೆಗಳು ಮುಗಿದ ನಂತರ ಪೂಜೆಸಲ್ಲಿಸಿ ಗದ್ದುಗೆ ಎತ್ತಲಾಗುತ್ತಲಾಗಿದ್ದು .ನಂತರ ಶ್ರೀ ಸ್ವಾಮಿಯವರಿಗೆಂದೆ ತಯಾರು ಮಾಡಿದ ವಿಶೇಷ ಹಂಸ ದರ್ಬಾರ್ ಹೂವಿನ ವಾಹನದಲ್ಲಿ ಕೂರಿಸಿ.ಕೇಂದ್ರ ರೈಲ್ವೆ ಸಚಿವ .ವಿ.ಸೋಮಣ್ಣ.ಶಾಸಕ ಕೆ.ಷಡಕ್ಷರಿ.ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಶ್ರೀ ಸತ್ಯಗಣಪತಿ ಸೇವಾಸಮಿತಿ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ ಪೂಜೆಸಲ್ಲಿಸಿ ಚಾಲನೆ ನೀಡಿದರು

ನಂತರ ದೊಡ್ಡಪೇಟೆ .ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ.ಎಲೆ ಆಸರ. ಕಾರೋನೆಷನ್ ರಸ್ತೆ ನಂತರ ಕೋಡಿ ಸರ್ಕಲ್ ಮೂಲಕ ಗಾಂಧೀ ನಗರ ಪ್ರವೇಶ ಮಾಡಿದ ಗಣೇಶ ಉತ್ಸವಕ್ಕೆ ಬೋವಿ ಕಾಲೋನಿ ಸರ್ಕಾರಿ ಶಾಲೆ ಆವರಣದಲ್ಲಿ ಭಕ್ತರಿಂದ ಸಾಮೂಹಿಕ ಪೂಜೆಸಲ್ಲಿಸಿ ನಂತರ ಜಾಮೀಯ ಮಸೀದಿ ರಸ್ತೆ ಮೂಲಕ ವಾಪಾಸ್ ಆಗಲಿದು. ಮುಸಲ್ಮಾನ್ ಬಂಧುಗಳು ಮಸೀದಿಯ ಮುಂಭಾಗದಲ್ಲಿ ಪೂಜೆಸಲ್ಲಿಸಿ ಹೂವು ಹಣ್ಣು ಅರ್ಪಿಸಿದರು. ಅಲ್ಲಿಂದ ಕೋಡಿಸರ್ಕಲ್ . ಮೂಲಕ ಕಾರೋನೇಷನ್ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ .ಬಿ.ಹೆಚ್ ರಸ್ತೆ ಮೂಲಕ ಸಾಗಿ ಡಾ//ಬಿ.ಆರ್ ಅಂಬೇಡ್ಕರ್ ಸರ್ಕಲ್ ನಿಂದ ವಾಪಾಸ್ ನಗರಾಧ್ಯಂತ ಉತ್ಸವ ಸಂಚರಿಸಿ.

ವಿಶೇಷ ಪೂಜೆಸಲ್ಲಿಸುವ ಜೊತೆಗೆ ಬಗೆಬಗೆಯ ಬೃಹತ್ ಹೂವಿನ ಹಾರಗಳು.ವಿಶೇಷ ಖಾದ್ಯಗಳಿಂದ ಹಣ್ಣು ತರಕಾರಿಗಳಿಂದ ತಯಾರಿಸಿದ ಹಾರಗಳನ್ನ ಅರ್ಪಣೆ ಮಾಡುವ ಜೊತೆಗೆ ಪಾನಕ ಫಲಹಾರ.ಚಿತ್ರಾನ್ನ ಮೊಸರನ್ನ ಪುಳಿಯೊಗರೆ.ಮಜ್ಜಿಗೆ ವಿತರಣೆ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು.ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವಕ್ಕಾಗಿ ಕಲ್ಪತರು ನಾಡು ಕೊಬ್ಬರಿ ನಗರಿ ತಿಪಟೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಲಾಗಿದ್ದು.ಹಾಸನ ಸರ್ಕಲ್ ಡಾ//ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಿ.ಹೆಚ್ ರಸ್ತೆ.ನಗರಸಭೆ ಸರ್ಕಲ್ .ಅರಳಿಕಟ್ಟೆ ಸರ್ಕಲ್ ಕೋಡಿಸರ್ಕಲ್ ದೊಡ್ಡಪೇಟೆ ಸೇರಿದಂತೆ ಇಡೀ ನಗರವೇ ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾನರ್ ಬಂಟಿಗ್ಸ್ ಗಳಿಂದ ಕಂಗೊಳಿಸುತ್ತಿತ್ತು. ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಾಲಯದ ಬಳಿ ನಿರ್ಮಾಣ ಮಾಡಿರುವ ಶ್ರೀ ಹನುಮ ಹೆಬ್ಬಾಗಿಲು.ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿ ಹಾಕಿರುವ ಅಮ್ಯೂಸ್ ಮೆಂಟ್ ಪಾರ್ಕ್ ಜಾತ್ರೆಯ ಮೆರುಗು ಹೆಚ್ಚಲು ಕಾರಣವಾಗಿದೆ ಅಲ್ಲದೆ.ಉತ್ಸವದ ಉದ್ದಕ್ಕೂ ತಮಟೆ.ಡೊಳ್ಳು ಕುಣಿತ. ವೀರಗಾಸೆ.ಲಿಂಗದ ವೀರರ ಕುಣಿತ ಪಟಕುಣಿತ.ಕೇರಳದ ಚಂಡೆವಾದ್ಯ.ನಾಸಿಕ್ ಡೋಲ್. ಕರಾವಳಿಯ ಹುಲಿ ವೇಷದಾರಿಗಳ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಉತ್ಸವಕ್ಕೆ ರಾಜಕಳೆತುಂಬಿದವು.,ಯುವಕ ಯುವತಿಯರನ್ನ ಸೂಜಿಗಲ್ಲಿನಂತೆ ಸೆಳೆದ ಡಿಜೆ ಸೌಂಡ್ ಗೆ ಸಾವಿರಾರು ಯುವಕ ಯುವತಿಯರು ಡ್ಯಾನ್ಸ್ ಮಾಡಿ ಗಮನಸೆಳೆದರು. 2 ದಿನಗಳ ಕಾಲ ವಿಶೇಷ ಮದ್ದಿನ ಪ್ರದರ್ಶನ ನಡೆಯಿತು. ಉತ್ಸವ ಭಾನುವಾರ ರಾತ್ರಿ ತಿಪಟೂರು ಅಮಾನೀಕೆರೆ ಕಲ್ಯಾಣಿಯಲ್ಲಿ ಶ್ರೀ ಸತ್ಯಗಣಪತಿ ವಿಸರ್ಜನೆಗೊಳ್ಳುವ ಮೂಲಕ ಈ ವರ್ಷದ ಉತ್ಸವ ಮುಕ್ತಾಯ ಕಂಡಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ







