ತಿಪಟೂರು:ನಗರದ ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಶಿವಶರಣ ನುಲಿಯ ಚಂದಯ್ಯನವರ ಜನ್ಮಜಯಂತಿಯನ್ನ ಆಚರಿಸಲಾಯಿತು
ಶಾಸಕ ಕೆ.ಷಡಕ್ಷರಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿಯವರು ಶಿವಶರಣರ ಚಿಂತನೆಗಳು ಜಗತ್ತಿನ ಹೇಳಿಗೆಗೆ ದಾರಿ ದೀಪ,ಬಸವಣ್ಣನರ ಸಮಾಕಾಲೀನ ಶರಣ ನುಲಿಯ ಚಂದಯ್ಯನವರು ತಮ್ಮ ಕಾಯಕ ನಿಷ್ಠೆ,ಸರ್ವರಿಗೂ ಆದರ್ಶಪ್ರಯವಾಗಿದೆ,ತಮ್ಮ ನೂಲುಹೊಸೆಯುವ ಕುಲಕಾಯಕ ನಿಷ್ಠೆಯ ಮೂಲಕ,ಅನುಭವ ಮಂಟಪದಲ್ಲಿ ಮೆಚ್ಚುಗೆಗಳಿಸಿದ ಶರಣ,ತಮ್ಮ ವಚನಗಳ ಮೂಲಕ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸನ್ಮಾರ್ಗತೋರಿದ್ದಾರೆ.ಅವರ ಆದರ್ಶಗಳನ್ನ ಸಮುದಾಯದ ಯುವ ಪೀಳಿಕೆ ಮೈಗೂಡಿಸಿಕೊಂಡು ಮುನ್ನೆಡೆಯ ಬೇಕು, ಸರ್ಕಾರ ವಿವಿಧ ಸಮಾಜಗಳಲ್ಲಿ ಸಮಾಜದ ಹೇಳಿಗೆಗೆ ದುಡಿದು ಜಗತ್ತಿಗೆ ಬೆಳಕು ತೋರಿದ ಮಹನೀಯರ ಸ್ಮಾರಣೆ ಮಾಡುಬೇಕು,ಅವರ ಆದರ್ಶಗಳು ಮನುಕುಲದ ಬೆಳವಣಿಗೆಗೆ ದಾರಿಯಾಗಲಿ ಮುಂದಿನ ಪೀಳಿಗೆ ಅವರ ಆದರ್ಶ ಅಳವಡಿಸಿಕೊಳ್ಳಲಿ.ಎಂದು ಸರ್ಕಾರ ಮಹನೀಯರ ಜಯಂತಿ ಆಚರಣೆ ಮಾಡುತ್ತಿದೆ, ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ಶರಣರ ಆದರ್ಶ ತಿಳಿದುಕೊಳ್ಳ ಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಜಗನ್ನಾಥ್ ಮಾತನಾಡಿ ನುಲಿಯ ಚಂದಯ್ಯ ನವರು ಕಾಯಕ ನಿಷ್ಟೆಯಿಂದ ಬಸವಾದಿ ಪ್ರಮಥರಲ್ಲಿ ಮನ್ನಣೆ ಪಡೆದಿದ್ದಾರೆ, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕೊರಚ ಮಹಾಸಭಾ ಅಧ್ಯಕ್ಷ ಸತೀಶ್ ಮಾರನಗೆರೆ .ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್.ಕಂದಾಯ ನಿರೀಕ್ಷಕರಾದ ರಂಗಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ






